ರಕ್ತ ಶುದ್ದಿಯಾಗಲು ಈ ಆಹಾರ ಸೇವಿಸಿ.

ಮ್ಮ ದೇಹದಲ್ಲಿನ ರಕ್ತ ಶುದ್ಧವಾಗಿದ್ದರೆ ಅನಾರೋಗ್ಯದಿಂದ ದೂರವಿರಬಹುದು. ಸಾಕಷ್ಟು ಸಮಸ್ಯೆಗಳಿಗೆ ನಮ್ಮ ಅಶುದ್ಧವಾದ ರಕ್ತವೇ ಕಾರಣವಾಗುತ್ತದೆ. ರೋಗನಿರೋಧಕ ಶಕ್ತಿ, ಜೀವಕೋಶ, ಹಾರ್ಮೋನ್ಸ್ ಇವೆಲ್ಲದಕ್ಕೆ ರಕ್ತವೇ ಕಾರಣವಾಗಿರುತ್ತದೆ.ನಾವು ತಿನ್ನುವ ಆಹಾರ, ಜೀವನ ಪದ್ಧತಿ ಇವೆಲ್ಲದರ ಕಾರಣದಿಂದ ದೇಹದಲ್ಲಿ ಟಾಕ್ಸಿನ್ ಹೆಚ್ಚಾಗುತ್ತದೆ.ಆಗಾಗ ನಮ್ಮ ದೇಹವನ್ನು ಡಿಟಾಕ್ಸಿಫಿಕೆಷನ್ ಮಾಡುತ್ತಿರಬೇಕು,ನಮ್ಮ ರಕ್ತವನ್ನು ಶುದ್ದೀಕರಿಸಿದರೆ ನಮ್ಮ ಕಿಡ್ನಿ, ಲಿವರ್, ಹೃದಯ ಎಲ್ಲವೂ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಈ ರಕ್ತವನ್ನು ನೈಸರ್ಗಿಕವಾಗಿ ಹೇಗೆ ಶುದ್ದೀಕರಿಸಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.ಹೂಕೋಸು ಇದು ರಕ್ತವನ್ನು ಶುದ್ದೀಕರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ದೇಹದಲ್ಲಿನ ಟಾಕ್ಸಿನ್ ಅನ್ನು ಕಡಿಮೆ ಮಾಡುತ್ತದೆ. ಈ ತರಕಾರಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ಓಮೇಗಾ-3 ಫ್ಯಾಟಿ ಆಯಸಿಡ್, ಡಯೆಟ್ರಿ ಫೈಬರ್, ಪೋಟ್ಯಾಷಿಯಂ ಅಧಿಕವಾಗಿರುತ್ತದೆ. ದಿನನಿತ್ಯ ಇದನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇನ್ನು ಸೇಬು, ಪ್ಲಮ್ಸ್, ಮರಸೇಬು, ಸೀಬೆಹಣ್ಣು ಇದರಲ್ಲಿ ಫೈಬರ್ ಅಂಶ ಜಾಸ್ತಿ ಇರುತ್ತದೆ. ರಕ್ತದಲ್ಲಿ ಫ್ಯಾಟ್ ಅಂಶ ಮಾತ್ರವಲ್ಲದೇ, ಮೆಟಲ್ಸ್, ಅಪಾಯಕಾರಿ ಕೆಮಿಕಲ್ಸ್, ಕಲ್ಮಷಗಳು ಇರುತ್ತದೆ.ನಿವಾರಿಸಲು ಸಾಕಷ್ಟು ನಾರಿನಾಂಶ ಹೆಚ್ಚಿರುವ ಹಣ್ಣು – ತರಕಾರಿಗಳನ್ನು ಸೇವಿಸಬೇಕು. ಸ್ಟ್ರಾಬೆರಿ, ಬ್ಲೂಬೆರಿ, ಬ್ಲ್ಯಾಕ್ ಬೆರಿ ಗಳನ್ನು ಹೆಚ್ಚೆಚ್ಚು ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಿ. ಇದು ನಿಮ್ಮ ಲಿವರ್ ನ ಆರೋಗ್ಯವನ್ನು ಕಾಪಾಡುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊಟ್ಟೆ ಮತ್ತು ಪನೀರ್ ಒಟ್ಟಿಗೆ ತಿಂದರೆ ಕಡಿಮೆಯಾಗುತ್ತ ತೂಕ ?

Mon Feb 27 , 2023
ಸದ್ಯ ಜಗತ್ತಿನಾದ್ಯಂತ ಬೊಜ್ಜಿನ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ. ತೂಕ ಇಳಿಸುವುದೇ ಬಹಳ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟೇ ಪ್ರಯತ್ನ ಮಾಡಿದ್ರೂ ಕೆಲವೊಮ್ಮೆ ತೂಕ ಕಡಿಮೆ ಮಾಡಿಕೊಳ್ಳುವುದು ಅಸಾಧ್ಯವೆನಿಸುತ್ತದೆ. ಕೆಲವರು ತೂಕವನ್ನು ನಿಯಂತ್ರಿಸಲು ಮೊಟ್ಟೆ ಮತ್ತು ಪನೀರ್ ಸೇವನೆ ಮಾಡುತ್ತಾರೆ.ಇವೆರಡರಲ್ಲೂ ಕ್ಯಾಲೋರಿ ಕಡಿಮೆ ಮತ್ತು ಹೆಚ್ಚಿನ ಪ್ರೋಟೀನ್ ಇರುತ್ತದೆ.ಪ್ರೋಟೀನ್ ತಡವಾಗಿ ಜೀರ್ಣವಾದಾಗ, ಅದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರ ಹೊರತಾಗಿ ಈ ಎರಡೂ ವಸ್ತುಗಳು ಹಸಿವನ್ನು ಕಡಿಮೆ ಮಾಡುವ ಹಾರ್ಮೋನುಗಳನ್ನು […]

Advertisement

Wordpress Social Share Plugin powered by Ultimatelysocial