‘ಕ್ರಾಂತಿ’ ಟಪ್ಪಾಂಗುಚಿ ಸಾಂಗ್

 

ಸ್ಯಾಂಡಲ್‌ವುಡ್‌ನಲ್ಲಿ ‘ಕ್ರಾಂತಿ’ ಗಾನ ಬಜಾನಾ ಶುರುವಾಗಿದೆ. ಈಗಾಗಲೇ ಚಿತ್ರದ 2 ಸಾಂಗ್ ರಿಲೀಸ್ ಆಗಿದೆ. 3ನೇ ಸಾಂಗ್‌ ಹೊರಬರುವ ಸಮಯ ಹತ್ತಿರ ಬರ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ.ಇದೀಗ ಮತ್ತೊಂದು ಹಾಡನ್ನು ಅದೇ ರೀತಿ ಲೋಕಾರ್ಪಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.ವಿ. ಹರಿಕೃಷ್ಣ ನಿರ್ದೇಶನದ ‘ಕ್ರಾಂತಿ’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ರಚಿತಾ ರಾಮ್ ಮಿಂಚಿದ್ದಾರೆ. ‘ಕ್ರಾಂತಿ’ ಥೀಮ್ ಸಾಂಗ್ ‘ಧರಣಿ’, ರೊಮ್ಯಾಂಟಿಕ್ ಸಾಂಗ್ ‘ಬೊಂಬೆ ಬೊಂಬೆ’ ನಂತರ ‘ಪುಷ್ಪಾವತಿ’ ಎನ್ನುವ ಬಿಂದಾಸ್ ನಂಬರ್ ಇದೇ ಭಾನುವಾರ ರಿಲೀಸ್ ಆಗಲಿದೆ. ಡಿಸೆಂಬರ್ 25ರ ಸಂಜೆ 7 ಗಂಟೆಗೆ ಹುಬ್ಬಳಿಯ ಗೋಕುಲ್ ರಸ್ತೆಯ ಅರ್ಬನ್ ಓಯಸಿಸ್ ಮಾಲ್ ಎದುರು ‘ಪುಷ್ಪಾವತಿ’ ಸಾಂಗ್ ರಿಲೀಸ್ ಪ್ಲ್ಯಾನ್ ನಡೀತಿದೆ.ಚಿತ್ರತಂಡವೇ ‘ಕ್ರಾಂತಿ’ ಚಿತ್ರದ 3ನೇ ಸಾಂಗ್ ರಿಲೀಸ್ ಡೇಟ್, ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜೊತೆಗೆ ಹರಿಕೃಷ್ಣ ಮ್ಯೂಸಿಕ್ ಕೂಡ ಮಾಡಿದ್ದಾರೆ. ದರ್ಶನ್ ಹಾಗೂ ಹರಿ ಕಾಂಬಿನೇಷನ್ ಆಲ್ಬಮ್‌ಗಳೆಲ್ಲಾ ಸೂಪರ್ ಹಿಟ್ ಆಗಿದೆ. ‘ಕ್ರಾಂತಿ’ ಚಿತ್ರದ 2 ಹಾಡುಗಳು ಅಭಿಮಾನಿಗಳ ಮನಗೆದ್ದಿದೆ. ‘ಪುಷ್ಪಾವತಿ’ ಪಕ್ಕಾ ಟಪ್ಪಾಂಗುಚಿ ಸಾಂಗ್ ಎನ್ನುವುದು ಗೊತ್ತಾಗುತ್ತಿದೆ. ದರ್ಶನ್ ಟ್ರಂಪೆಟ್ ಹಿಡ್ದು ಸ್ಟೈಲಿಶ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಇದು ಬರೀ ಟಪ್ಪಾಂಗುಚಿನಾ ಅಥವಾ ಐಟಂ ಸಾಂಗಾ ಎನ್ನುವುದನ್ನು ಕಾದು ನೋಡಬೇಕು.”ಆ ದೇವತಾ ಮನುಷ್ಯನ ಬಗ್ಗೆ ಮಾತಾಡೋ ಯೋಗ್ಯತೆನೂ ಇಲ್ಲ” – ದುನಿಯಾ ವಿಜಯ್!’ಕ್ರಾಂತಿ’ ಚಿತ್ರದಲ್ಲಿ ಅಕ್ಷರಕ್ರಾಂತಿ ಕಥೆ ಹೇಳಲಾಗುತ್ತಿದೆ. ಕನ್ನಡ ಸರ್ಕಾರಿ ಶಾಲೆಗಳ ಸ್ಥಿತಿಗತಿಯ ಬಗ್ಗೆ ಸಿನಿಮಾದಲ್ಲಿ ಚರ್ಚಿಸಲಾಗಿದೆ. ಸೂಪರ್ ಹಿಟ್ ‘ಯಜಮಾನ’ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿಬಂದಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸಂಯುಕ್ತಾ ಹೊರನಾಡ್ ಚಿತ್ರದ ತಾರಾಗಣದಲ್ಲಿದ್ದಾರೆ. ಜನವರಿ 26ಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.ಕಳೆದ ಭಾನುವಾರ ಚಿತ್ರದ 2ನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಸಾಂಗ್ ರಿಲೀಸ್ ವೇದಿಕೆ ಏರಿದ್ದ ನಟ ದರ್ಶನ್ ಮೇಲೆ ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

'ಗಟ್ಟಿಮೇಳ' ನಂ 1.. ಉಳಿದ ಸ್ಥಾನದಲ್ಲಿರೋ ಧಾರಾವಾಹಿಗಳಾವುವು?

Fri Dec 23 , 2022
  ವಾರಕ್ಕೊಮ್ಮೆ ಧಾರಾವಾಹಿಗಳ ರೇಟಿಂಗ್ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ. ಮೊದ ಮೊದಲಿಗೆ ಲೈಕ್ ಆದ ಧಾರಾವಾಹಿಯ ಕಥೆಗಳು ಆಮೇಲೆ ಆಮೇಲೆ ಬೋರ್ ಹೊಡೆಸುವುದಕ್ಕೂ ಆರಂಭಿಸುತ್ತವೆ. ಕಥೆ ಸ್ಟ್ರಾಂಗ್ ಇದ್ದು, ಒಳ್ಳೆ ತಿರುವಿನಲ್ಲಿ, ನೋಡುಗರನ್ನು ಕರೆದುಕೊಂಡು ಹೋಗುತ್ತಾ ಇದ್ದರೆ ವರ್ಷವಲ್ಲ ಎರಡು ವರ್ಷವಾದರೂ ರಿಮೋಟ್‌ನಲ್ಲಿ ನಂಬರ್ ಬದಲಾಗುವುದಿಲ್ಲ.ಹೀಗೆ ಪ್ರೇಕ್ಷಕನ ಮನಸ್ಥಿತಿ ಅರಿತು ಕಥೆ ಹೆಣೆಯುವವನೇ ಜಾಣ. ಆದರೆ ಈಗಂತೂ ಕಾಂಪಿಟೇಷನ್ ಯುಗವಾದ್ದರಿಂದ ಇದು ಕೊಂಚ ಕಷ್ಟವೇ. ಆದರೂ ಇರುವ ಮನರಂಜನೆಯ […]

Advertisement

Wordpress Social Share Plugin powered by Ultimatelysocial