‘ಗಟ್ಟಿಮೇಳ’ ನಂ 1.. ಉಳಿದ ಸ್ಥಾನದಲ್ಲಿರೋ ಧಾರಾವಾಹಿಗಳಾವುವು?

 

ವಾರಕ್ಕೊಮ್ಮೆ ಧಾರಾವಾಹಿಗಳ ರೇಟಿಂಗ್ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ. ಮೊದ ಮೊದಲಿಗೆ ಲೈಕ್ ಆದ ಧಾರಾವಾಹಿಯ ಕಥೆಗಳು ಆಮೇಲೆ ಆಮೇಲೆ ಬೋರ್ ಹೊಡೆಸುವುದಕ್ಕೂ ಆರಂಭಿಸುತ್ತವೆ. ಕಥೆ ಸ್ಟ್ರಾಂಗ್ ಇದ್ದು, ಒಳ್ಳೆ ತಿರುವಿನಲ್ಲಿ, ನೋಡುಗರನ್ನು ಕರೆದುಕೊಂಡು ಹೋಗುತ್ತಾ ಇದ್ದರೆ ವರ್ಷವಲ್ಲ ಎರಡು ವರ್ಷವಾದರೂ ರಿಮೋಟ್‌ನಲ್ಲಿ ನಂಬರ್ ಬದಲಾಗುವುದಿಲ್ಲ.ಹೀಗೆ ಪ್ರೇಕ್ಷಕನ ಮನಸ್ಥಿತಿ ಅರಿತು ಕಥೆ ಹೆಣೆಯುವವನೇ ಜಾಣ. ಆದರೆ ಈಗಂತೂ ಕಾಂಪಿಟೇಷನ್ ಯುಗವಾದ್ದರಿಂದ ಇದು ಕೊಂಚ ಕಷ್ಟವೇ. ಆದರೂ ಇರುವ ಮನರಂಜನೆಯ ಚಾನೆಲ್‌ಗಳು ಆದಷ್ಟು ಜನರ ಮನಸ್ಸಿಗೆ ಹತ್ತಿರವಾದ ಧಾರಾವಾಹಿಗಳನ್ನು ನೀಡುವುದಕ್ಕೆ ಪ್ರಯತ್ನ ನಡೆಸುತ್ತಿವೆ. ಈ ವಾರದ ಟಿಆರ್‌ಪಿ ಬಂದಿದ್ದು, ಕೊಂಚ ಆ ಕಡೆ ಈ ಕಡೆ ವಾಲಿದೆಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಆರಂಭವಾಗಿ ವರ್ಷಗಳು ತುಂಬಿವೆ. ಆದರೂ ಯಾವತ್ತಿಗೂ ನಂಬರ್ ಒನ್ ಸ್ಥಾನವನ್ನು ಬಿಟ್ಟುಕೊಟ್ಟ ಉದಾಹರಣೆಯೇ ಇಲ್ಲ. ಆದರೆ ಅದ್ಯಾಕೋ ಏನೋ ಈ ವಾರ ತನ್ನ ನಂಬರ್ ಸ್ಥಾನದಿಂದ ಕೆಳಗೆ ಇಳಿದು ಬಿಟ್ಟಿದೆ’ಗಟ್ಟಿಮೇಳ’ ಧಾರಾವಾಹಿ ಆರಂಭವಾಗಿ ಮೂರು ವರ್ಷ. ಆದರೂ ತನ್ನ ವರ್ಚಸ್ಸನ್ನು ಕಡಿಮೆ ಮಾಡಿಕೊಂಡಿಲ್ಲ ಎಂಬುದೇ ಖುಷಿಯ ವಿಚಾರ. ‘ಪುಟ್ಟಕ್ಕನ ಮಕ್ಕಳು’ ಬರುವುದಕ್ಕೂ ಮುನ್ನ ಮೊದಲ ಸ್ಥಾನದಲ್ಲಿಯೇ ಇದ್ದ ‘ಗಟ್ಟಿಮೇಳ’ ಬಳಿಕ ಎರಡನೇ ಸ್ಥಾನಕ್ಕೆ ಹೋಗಿತ್ತುಇನ್ನು ಸ್ಟಾರ್ ಸುವರ್ಣದಲ್ಲಿ ಪ್ರತಿ ವಾರದಂತೆ ಈ ವಾರವೂ ಭಕ್ತಿ ಪ್ರಧಾನ ಧಾರಾವಾಹಿಗೆ ನೋಡುಗರು ಜೈ ಎಂದಿದ್ದಾರೆ. ‘ಎಡಿಯೂರು ಶ್ರೀ ಸಿದ್ದಲಿಂಗೇಶ್ವರ’ ಧಾರಾವಾಹಿಗೆ 3.4 ಅಂಕ ಬಂದಿದೆ. ಅದರ ಜೊತೆಗೆ ‘ಮುದ್ದುಮಣಿಗಳು’, ‘ಮನಸೆಲ್ಲಾ ನೀನೆ’, ‘ಮರಳಿ ಮನಸಾಗಿದೆ’ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ.ಮಗಳು ಎಂದರೆ ‘ರಾಧಿಕಾ’ ರೀತಿ ಇರಬೇಕು ಅಂತ ಅದೆಷ್ಟು ತಾಯಂದಿರು ಅಂದುಕೊಳ್ಳುತ್ತಾರೋ ಏನೋ. ಧಾರಾವಾಹಿ ಕೂಡ ಅದೇ ರೀತಿಯಲ್ಲಿ ಇದೆ. ಹೀಗಾಗಿ ಮೊದಲಿನಿಂದಾನೂ ‘ರಾಧಿಕಾ’ ಧಾರಾವಾಹಿ ಉದಯ ಟಿವಿಯಲ್ಲಿ ನಂಬರ್ ಒನ್ ಸ್ಥಾನವನ್ನು ಭದ್ರ ಮಾಡಿಕೊಂಡು ಬಂದಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಟಾಲಿವುಡ್‌ನ ಹಿರಿಯ ನಟ ಕೈಕಲಾ ಸತ್ಯನಾರಾಯಣ ಇನ್ನಿಲ್ಲ.!

Fri Dec 23 , 2022
  ಟಾಲಿವುಡ್’ನ ಹಿರಿಯ ನಟ ಕೈಕಲಾ ಸತ್ಯನಾರಾಯಣ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರುಇಂದು ಬೆಳಿಗ್ಗೆ ಹೈದರಾಬಾದ್’ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ತೆಲುಗು ಸಿನಿಮಾಗಳಲ್ಲಿ ನಾಯಕ, ಕ್ಯಾರೆಕ್ಟರ್ ಆರ್ಟಿಸ್ಟ್, ಖಳನಾಯಕ, ಹಾಸ್ಯನಟ ಮತ್ತು ಎಲ್ಲಾ ರೀತಿಯ ಪಾತ್ರಗಳಲ್ಲಿ ತಮ್ಮದೇ ಆದ ಖ್ಯಾತಿ ಗಳಿಸಿದ್ದ ಹಿರಿಯ ನಟ, ನಿರ್ಮಾಪಕರಾಗಿಯೂ ಕೆಲವು ಚಲನಚಿತ್ರಗಳನ್ನ ನಿರ್ಮಿಸಿದ್ದಾರೆ.ತೆಲುಗು ಚಿತ್ರರಂಗದಲ್ಲಿ ಎಸ್. ವಿ. ರಂಗರಾವ್ ನಂತರ ಇಂತಹ ವೈವಿಧ್ಯಮಯ ಪಾತ್ರಗಳನ್ನ ನಿರ್ವಹಿಸಿದವರಲ್ಲಿ ಕೈಕಲಾ ಸತ್ಯನಾರಾಯಣ ಕೂಡ ಒಬ್ಬರು. […]

Advertisement

Wordpress Social Share Plugin powered by Ultimatelysocial