ವರ್ಷ ಮೂವತ್ತು ದಾಟಿತು ಎಂದರೆ ಸಾಕು ಮಹಿಳೆಯರಲ್ಲಿ ಒಂದು ರೀತಿ ಅಸ್ಥಿರತೆ,

ವರ್ಷ ಮೂವತ್ತು ದಾಟಿತು ಎಂದರೆ ಸಾಕು ಮಹಿಳೆಯರಲ್ಲಿ ಒಂದು ರೀತಿ ಅಸ್ಥಿರತೆ, ಭಯ ಕಾಡುವುದಕ್ಕೆ ಶುರುವಾಗುತ್ತದೆ. ಮುಖದಲ್ಲಿ ಕಾಣುವ ನೆರಿಗೆಗಳು, ಹೆಚ್ಚುತ್ತಿರುವ ದೇಹ ತೂಕ ತಮ್ಮ ಸೌಂದರ್ಯದ ಕಡೆ ಹೆಚ್ಚು ಗಮನ ಹರಿಸುವುದಕ್ಕೆ ಆಗದೇ ಇರುವಂತದ್ದು ಹೀಗೆ ಏನೇನೋ ಒತ್ತಡಗಳು ಅವರನ್ನು ಕಾಡಲು ಶುರುವಾಗುತ್ತದೆ.ಇದನ್ನೆಲ್ಲಾ ಹೇಗೆ ಎದುರಿಸಬಹುದು ಎಂಬುದಕ್ಕೆ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ.ಮನೆ ಕೆಲಸ, ಆಫೀಸ್ ಕೆಲಸದ ನಡುವೆ ನಿಮಗೊಂದಿಷ್ಟು ಹೊತ್ತು ಸಮಯ ಮೀಸಲಿರಿಸಿ. ಅದನ್ನು ನಿಮ್ಮ ದೇಹದ ಕುರಿತು ಕಾಳಜಿ ವಹಿಸುವುದಕ್ಕೆಂದು ಇಟ್ಟುಕೊಳ್ಳಿ.ತಿಂಗಳಿಗೊಮ್ಮೆ ಪಾರ್ಲರ್ ಗೆ ಹೋಗಿ. ಪಾರ್ಲರ್ ಗೆ ಹೋಗುವುದಕ್ಕೆ ಆಗದಿದ್ದರೆ ಮನೆಯಲ್ಲಿಯೇ ನಿಮ್ಮ ತ್ವಚೆಯ ಕಾಳಜಿ ವಹಿಸಿ.ಇನ್ನು ಸ್ವಲ್ಪ ವ್ಯಾಯಾಮ, ವಾಕಿಂಗ್, ಒಳ್ಳೆಯ ಆಹಾರಗಳನ್ನು ಸೇವಿಸಿ. ಜೊತೆಗೆ ಮನಸ್ಸಿಗೆ ರಿಲ್ಯಾಕ್ಸ್ ಆಗುವಂತಹ ಹಾಡು, ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ.ಸಾಧ್ಯವಾದರೆ ಕುಟುಂಬದ ಜೊತೆ ಇಲ್ಲವೇ ಫ್ರೆಂಡ್ಸ್ ಜೊತೆ ಸಣ್ಣದೊಂದು ಟ್ರಿಪ್ ಗೆ ಹೋಗಿ. ಇದು ನಿಮ್ಮನ್ನು ಮತ್ತಷ್ಟೂ ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

CONGRESS: ರೋಡ್ಶೋ ರೀತಿಯಲ್ಲಿತ್ತು, ಕಾಂಗ್ರೆಸ್ನ ಮನೆ-ಮನೆ ಪ್ರಚಾರ ;

Fri Feb 11 , 2022
ಉತ್ತರ ಪ್ರದೇಶ: ಮೊರಾದಾಬಾದ್‌ನಲ್ಲಿ ಕಾಂಗ್ರೆಸ್ ನಾಯಕ ರಿಜ್ವಾನ್ ಖುರೇಷಿ ಅವರ ಮನೆ-ಮನೆ ಪ್ರಚಾರದ ಸಂದರ್ಭದಲ್ಲಿ “ರೋಡ್‌ಶೋ ತರಹದ ಪರಿಸ್ಥಿತಿ” ಕುರಿತು ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೊರಾದಾಬಾದ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಖುರೇಷಿ ಅವರು ಗುರುವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಕ್ಷೇತ್ರದಲ್ಲಿ ಮನೆ ಮನೆಗೆ ಪ್ರಚಾರ ನಡೆಸಿದರು. ಆದರೆ, ಪೊಲೀಸರ ಪ್ರಕಾರ ಈ ಅಭಿಯಾನ ರೋಡ್‌ಶೋ ರೀತಿಯಲ್ಲಿತ್ತು. “ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಮನೆ-ಮನೆ ಪ್ರಚಾರಕ್ಕೆ […]

Advertisement

Wordpress Social Share Plugin powered by Ultimatelysocial