ಖ್ಯಾತ ಟಾಲಿವುಡ್ ಗಾಯಕಿ ಮಂಗ್ಲಿ ಕಾರಿನ ಗ್ಲಾಸನ್ನು ಪುಂಡರು ಒಡೆದಿರುವ ಘಟನೆ.

ಳ್ಳಾರಿ: ಖ್ಯಾತ ಟಾಲಿವುಡ್ ಗಾಯಕಿ ಮಂಗ್ಲಿ ಕಾರಿನ ಗ್ಲಾಸನ್ನು ಪುಂಡರು ಒಡೆದಿರುವ ಘಟನೆ ನಿನ್ನೆ(ಜ.21) ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದಿದೆ. ಬಳ್ಳಾರಿ ಉತ್ಸವ ಕಾರ್ಯಕ್ರಮದಲ್ಲಿ ಗಾಯಕಿ ಮಂಗ್ಲಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಿಗದಿಯಾಗಿತ್ತು.

ವೇದಿಕೆ ಮೇಲೆ ಹಾಡುಗಳನ್ನು ಹೇಳಿ ಮರಳುವಾಗ ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಮಂಗ್ಲಿ ನೋಡಲು ಮುಗಿಬಿದ್ದಿದ್ದಾರೆ. ಅಲ್ಲದೆ ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್​ ಟೆಂಟ್​ಗೆ ಯುವಕರ ಗುಂಪು ನುಗ್ಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಭದ್ರತೆಯ ದೃಷ್ಟಿಯಿಂದ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸರು ಲಾಠಿ ಬೀಸುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ವೇಳೆ ಕೆಲ ಪುಂಡರು ಮಂಗ್ಲಿ ತೆರಳುತ್ತಿದ್ದ ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ. ಇದರಿಂದ ಕಾರಿನ ಮುಂಭಾಗದ ಗಾಜಿಗೆ ಹಾನಿಯಾಗಿದೆ.

ಬಳ್ಳಾರಿ ಉತ್ಸವದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಖ್ಯಾತ ನಿರೂಪಕಿ ಅನುಶ್ರೀ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ರಸಮಂಜರಿ ಹಾಗೂ ಎಂ.ಡಿ.ಪಲ್ಲವಿ ತಂಡದವರಿಂದ ಗೀತಗಾಯನ ಕಾರ್ಯಕ್ರಮದ ನಡೆಯಿತು.

ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಬಳ್ಳಾರಿ ಉತ್ಸವ ಆಯೋಜನೆಯಾಗಿದೆ. ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಥ್ ನೀಡಿವೆ. ಡಾ.ರಾಜ್‌ಕುಮಾರ್‌ ರಸ್ತೆಯ ಮುನ್ಸಿಪಲ್‌ ಮೈದಾನದಲ್ಲಿ ಬಳ್ಳಾರಿ ರಾಘವ ವೇದಿಕೆ ಮತ್ತು ನಗರದ ಕೋಟೆ ಮಲ್ಲೇಶ್ವರ ದೇವಸ್ಥಾನ ಆವರಣದ ಡಾ.ಜೋಳದ ರಾಶಿ ದೊಡ್ಡನಗೌಡರ ವೇದಿಕೆಗಳಲ್ಲಿ ಜ.21 ಮತ್ತು 22ರಂದು ಉತ್ಸವ ನಡೆಯುತ್ತಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಮ್ಮ ದೇಶದ ಅಡುಗೆಗಳಲ್ಲಿ ಸಾಮಾನ್ಯವಾಗಿ ಕರಿಬೇವಿನ ಸೊಪ್ಪಿನ ಬಳಸಲಾಗುತ್ತದೆ.

Sun Jan 22 , 2023
ನಮ್ಮ ದೇಶದ ಅಡುಗೆಗಳಲ್ಲಿ ಸಾಮಾನ್ಯವಾಗಿ ಕರಿಬೇವಿನ ಸೊಪ್ಪಿನ ಬಳಸಲಾಗುತ್ತದೆ. ತ್ವಚೆಯಿಂದ ಹಿಡಿದು ಕೂದಲಿವರೆಗೂ ರಕ್ಷಣೆ ನೀಡುವ ಕರಿಬೇವಿನ ಪೌಡರ್ ಅನ್ನು ಅನೇಕ ಮಂದಿ ಇಷ್ಟಪಡುತ್ತಾರೆ. ಆದರೆ ಕರಿಬೇವಿನ ಸೊಪ್ಪಿನಿಂದ ಹಲವು ಆರೋಗ್ಯಕಾರಿ ಪ್ರಯೋಜನಗಳಿವೆ ಎಂಬ ಬಗ್ಗೆ ಅನೇಕ ಮಂದಿಗೆ ತಿಳಿದಿಲ್ಲ. ಕರಿಬೇವಿನ ಎಲೆಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂಬುವುದನ್ನು ಸಾಬೀತುಪಡಿಸಬಹುದು ಕರಿಬೇವಿನ ಎಲೆಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ದೇಹದಲ್ಲಿನ ಅನೇಕ ರೋಗಗಳನ್ನು ಗುಣಪಡಿಸಬಹುದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕರಿಬೇವಿನ ಸೊಪ್ಪಿನಲ್ಲಿ […]

Advertisement

Wordpress Social Share Plugin powered by Ultimatelysocial