ತಂದೆಯೊಂದಿಗೆ ಶಾಪಿಂಗ್‌ ಹೊರಟಿದ್ದ ಮಗಳು ಅಪಘಾತಕ್ಕೆ ಬಲಿ

 

ಬೆಂಗಳೂರಿನಿಂದ ಕಾರವಾರಕ್ಕೆ ಬರುತ್ತಿದ್ದ ಬಸ್ ಬೈಕ್‌ ಹಿಂಬದಿಗೆ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಬೈಕ್‌ನಲಿದ್ದ ತಂದೆಗೆ ಗಂಭೀರವಾದ ಗಾಯಗಳಾಗಿದೆ.ಲವಿಟಾ ಜಾರ್ಜ್ ಫೆರ್ನಾಂಡೀಸ್ (13) ಮೃತ ಬಾಲಕಿ, ತಂದೆ ಜಾರ್ಜ್ ಫೆರ್ನಾಂಡೀಸ್‌ ಗಾಯಗೊಂಡವರು.ಬಟ್ಟೆ ಖರೀದಿಗೆಂದು ತಂದೆ- ಮಗಳು ಕಾರವಾರಕ್ಕೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.ಕಾರವಾರ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾದ ಸ್ ಅಡ್ಡ ಹಾಕಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಆಕ್ಸಿಡೆಂಟ್ ನಡೆದ ಹಿನ್ನೆಲೆಯಲ್ಲಿ ಐಆರ್‌ಬಿ ವಿರುದ್ಧ ನಾಗರಿಕ ಹಿತರಕ್ಷಣಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸಮಿತಿ ಎಚ್ಚರಿಕೆ ನೀಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೂಗಿನ ಸಮಸ್ಯೆಗೆ ಆಸ್ಪತ್ರೆಗೆ ದಾಖಲಾದ ಯುವತಿ ಸಾವು

Sat Dec 31 , 2022
  ಮೂಗಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ರಾಯಚೂರು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಾದ ಯುವತಿ ಮೃತಪಟ್ಟಿದ್ದು, ವೈದ್ಯರ ಎಡವಟ್ಟಿನಿಂದ ಯುವತಿ ಮೃತಪಟ್ಟಿದ್ದಾಳೆ ಎಂದು ರಿಮ್ಸ್ ಮುಂದೆ ನೂರಾರು ಜನರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಯಚೂರು ನಗರದ ರಾಜೇಶ್ವರಿ (18) ಮೃತ ಯುವತಿ.ಮೃತ ರಾಜೇಶ್ವರಿ ರಿಮ್ಸ್‌ನಲ್ಲಿ ನರ್ಸಿಂಗ್ ಸೀಟ್ ಪಡೆದಿದ್ದ‌ಳು. ಜ. 10ಕ್ಕೆ ನರ್ಸಿಂಗ್ ಅಡ್ಮಿಷನ್ ಆಗಬೇಕಿತ್ತು.ಮೂಗಿನ ಸಮಸ್ಯೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆಕೆಗೆ ವೈದ್ಯರು ಆಪರೇಷನ್ ಮಾಡಿದ್ದರು. ಇದೀಗ ರಾಜೇಶ್ವರಿ ಮೃತಪಟ್ಟಿದ್ದಾಳೆ. […]

Advertisement

Wordpress Social Share Plugin powered by Ultimatelysocial