ಜನರು ಹೆಚ್ಚು ಹಣ ಖರ್ಚು ಮಾಡಿದ ಆಯಪ್ ಯಾವುದು ಗೊತ್ತಾ?

ಈಗ ಬಹುತೇಕ ಎಲ್ಲರ ಬಳಿಯೂ 1 – 2 ಸ್ಮಾರ್ಟ್‌ಫೋನ್‌ಗಳಿರುತ್ತದೆ. ಸ್ಮಾರ್ಟ್‌ಫೋನ್  ಬಳಕೆದಾರರ ಸಂಖ್ಯೆ ಹೆಚ್ಚಿದಂತೆ ಗೂಗಲ್‌ ಪ್ಲೇ ಸ್ಟೋರ್ , ಆಯಪಲ್‌ ಆಯಪ್‌ ಸ್ಟೋರ್‌ಗಳಲ್ಲಿ  ಅಪ್ಲಿಕೇಷನ್‌ ಅಥವಾ ಆಯಪ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಅದರಲ್ಲಿ ಕೆಲವು ಪ್ರಖ್ಯಾತ ಆಯಪ್‌ಗಳನ್ನು ಕೋಟ್ಯಂತರ ಮಂದಿ ಡೌನ್ಲೋಡ್  ಮಾಡಿರುತ್ತಾರೆ. ಈ ಆಯಪ್‌ಗಳಲ್ಲಿ ಬಹುತೇಕ ಉಚಿತ ಅಪ್ಲಿಕೇಷನ್‌ಗಳು ಇರುತ್ತವೆಯಾದರೂ, ಕೆಲವು ಫೀಚರ್‌ ಅಥವಾ ಇತರೆ ಅಂಶಗಳಿಗಾಗಿ ಅದಕ್ಕೆ ಹಣವನ್ನೂ ನೀಡಬೇಕಾಗಿದೆ. ಇನ್ನು ಕೆಲವು ಅಪ್ಲಿಕೇಷನ್‌ಗಳು ಪೇಯ್ಡ್‌ ಆಯಪ್‌ಗಳೇ ಆಗಿವೆ. ಒಟ್ಟಾರೆ 2021ರಲ್ಲಿ ಜನರು ಅತಿ ಹೆಚ್ಚು ಹಣ ಖರ್ಚು ಮಾಡಿದ ಮೊಬೈಲ್ ಅಪ್ಲಿಕೇಶನ್‌ಗಳು  ಯಾವುವು ಎಂಬುದನ್ನು ಸಂಶೋಧನಾ ಸಂಸ್ಥೆಯೊಂದು ವರದಿ ಮಾಡಿದೆ.

ಸಂಶೋಧನಾ ಸಂಸ್ಥೆ ಸೆನ್ಸರ್ ಟವರ್ಸ್ ಸ್ಟೋರ್ ಇಂಟೆಲಿಜೆನ್ಸ್ ಡೇಟಾ ಪ್ರಕಾರ, ಮೊಬೈಲ್ ಅಪ್ಲಿಕೇಶನ್‌ಗಳಿಗೆ ಸ್ಮಾರ್ಟ್‌ಫೋನ್‌ ಬಳಕೆದಾರರು ಹಣ ಸುರಿದಿರುವುದು 2021 ರಲ್ಲಿ ಮತ್ತೆ ಹೊಸ ಗರಿಷ್ಠವನ್ನು ದಾಖಲಿಸಿದೆ ಎಂದು ತಿಳಿದುಬಂದಿದೆ.

ಟಾಪ್-100 ನಾನ್-ಗೇಮ್ ಸಬ್‌ಸ್ಕ್ರಿಪ್ಶನ್-ಆಧಾರಿತ ಅಪ್ಲಿಕೇಶನ್‌ಗಳು ತಮ್ಮ ಆದಾಯವನ್ನು ವರ್ಷದಿಂದ ವರ್ಷಕ್ಕೆ ಶೇಕಡಾ 41 ರಷ್ಟು ಹೆಚ್ಚಿಸಿಕೊಂಡಿದೆಯಂತೆ. ಅಂದರೆ 13 ಬಿಲಿಯನ್‌ ಡಾಲರ್‌ನಿಂದ (ಭಾರತೀಯ ಬೆಲೆಯಲ್ಲಿ ಸುಮಾರು 97,572 ಕೋಟಿ ರೂ. ಗಳು) 18.3 ಬಿಲಿಯನ್‌ ಡಾಲರ್‌ಗೆ (ಸುಮಾರು 1,37,300 ಕೋಟಿ ರೂ.)ಗೆ ಪ್ರಪಂಚದಾದ್ಯಂತ ಬೆಳವಣಿಗೆಯನ್ನು ಕಂಡಿದೆ ಎಂದು ಡೇಟಾ ಬಹಿರಂಗಪಡಿಸುತ್ತದೆ.

ಟಾಪ್ 100 ಗಳಿಕೆಯ ಅಪ್ಲಿಕೇಶನ್‌ಗಳು ಕಳೆದ ವರ್ಷ ಜನರು ಆಯಪ್‌ನಲ್ಲಿನ ಖರೀದಿಗಳಿಗಾಗಿ 131.6 ಬಿಲಿಯನ್‌ ಡಾಲರ್‌ ಅಂದರೆ ಸುಮಾರು 14 ಪ್ರತಿಶತವನ್ನು ಗಳಿಸಿವೆ. ಇದು 2020 ರಲ್ಲಿ ಶೇಕಡಾ 11.7 ಕ್ಕಿಂತ ಹೆಚ್ಚಾಗಿದೆ ಎಂದು ಸೆನ್ಸರ್ ಟವರ್ ವರದಿ ಹೇಳಿದೆ.

ವಿಶ್ವದಾದ್ಯಂತ ಗಳಿಸುವ ಟಾಪ್ 100 ಅಪ್ಲಿಕೇಶನ್‌ಗಳ ಪೈಕಿ 86 ಆಯಪ್‌ಗಳು Q4 2021 ರಲ್ಲಿ, ಚಂದಾದಾರಿಕೆಗಳನ್ನು ನೀಡಿವೆ ಎಂದು ಸಂಶೋಧನಾ ಸಂಸ್ಥೆ ಹೇಳಿದೆ. ಇದು Q4 2020 ರಲ್ಲಿ 87 ಶೇಕಡಾ ಮತ್ತು Q4 2019 ರಲ್ಲಿ 89 ಶೇಕಡಾದಿಂದ ಕಡಿಮೆಯಾಗಿದೆ.

ಉನ್ನತ ಚಂದಾದಾರಿಕೆ ಅಪ್ಲಿಕೇಶನ್‌ಗಳು ಆಯಪ್‌ ಸ್ಟೋರ್ ಮತ್ತು Google Play Store ನಲ್ಲಿ 2 ಪಟ್ಟು ಹೆಚ್ಚು ಖರ್ಚು ಮಾಡಿದೆ ಎಂದು ವರದಿ ಹೇಳಿದೆ. 2021 ರಲ್ಲಿ ಚಂದಾದಾರಿಕೆ ಮಾದರಿಯೊಂದಿಗೆ ಟಾಪ್ 100 ನಾನ್-ಗೇಮ್ ಅಪ್ಲಿಕೇಶನ್‌ಗಳು 13.5 ಬಿಲಿಯನ್ ಡಾಲರ್‌ (ಸುಮಾರು 1,01,300 ಕೋಟಿ ರೂ. ಗಳು) ಅನ್ನು ಗಳಿಸಿವೆ – ಇದು 2020 ಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 31 ಪ್ರತಿಶತದಷ್ಟು ಹೆಚ್ಚಾಗಿದೆ. Google Play Store ನಲ್ಲಿ ಅಗ್ರ ಚಂದಾದಾರಿಕೆ ಅಪ್ಲಿಕೇಶನ್‌ಗಳು ಆದಾಯದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು, ಆಯಪ್‌ ಸ್ಟೋರ್‌ನಲ್ಲಿನ ಟಾಪ್‌ ಅಪ್ಲಿಕೇಶನ್‌ಗಳಿಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಮೂರು ಪಟ್ಟು ಹೆಚ್ಚು ಖರ್ಚು ಮಾಡಲಾಗಿದೆ ಎಂದೂ ವರದಿ ಹೇಳುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ 'ತಕ್ಷಣದ ಕದನ ವಿರಾಮ', ರಷ್ಯಾದ ವಾಪಸಾತಿಗೆ ಒತ್ತಾಯಿಸುತ್ತದೆ

Mon Feb 28 , 2022
  “ರಷ್ಯಾದ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಮಾತುಕತೆಯಲ್ಲಿ ಪಾಲ್ಗೊಳ್ಳಲು ಉಕ್ರೇನಿಯನ್ ನಿಯೋಗವು ಉಕ್ರೇನಿಯನ್-ಬೆಲರೂಸಿಯನ್ ಗಡಿಗೆ ಆಗಮಿಸಿದೆ” ಎಂದು ಉಕ್ರೇನಿಯನ್ ಪ್ರೆಸಿಡೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ. “ಮಾತುಕತೆಯ ಪ್ರಮುಖ ವಿಷಯವೆಂದರೆ ತಕ್ಷಣದ ಕದನ ವಿರಾಮ ಮತ್ತು ಉಕ್ರೇನ್‌ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವುದು.” ಮೂಲ: ರಾಯಿಟರ್ಸ್ ದೇಶದ ವಿರುದ್ಧ ಕ್ರೆಮ್ಲಿನ್‌ನ ಆಕ್ರಮಣದ ಐದನೇ ದಿನದಂದು ರಷ್ಯಾದ ಸಮಾಲೋಚಕರೊಂದಿಗೆ ಮಾತುಕತೆಗಾಗಿ ಕೈವ್ ನಿಯೋಗ ಆಗಮಿಸಿದ್ದರಿಂದ ಉಕ್ರೇನ್ ತಕ್ಷಣ ರಷ್ಯಾದ ಕದನ ವಿರಾಮ ಮತ್ತು ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು. “ರಷ್ಯಾದ […]

Advertisement

Wordpress Social Share Plugin powered by Ultimatelysocial