ಆಧಾರ್‌ ಕಾರ್ಡ್‌ ಬಳಸಿ ಆದಾಯ ತೆರಿಗೆ ರಿಟರ್ನ್ಸ್ (ITR) ಪರಿಶೀಲಿಸುವುದು ಹೇಗೆ?

ಇಂದಿನ ದಿನಗಳಲ್ಲಿ ಆಧಾರ್‌ ಕಾರ್ಡ್‌ ಪ್ರಮುಖವಾದ ದಾಖಲೆಗಳಲ್ಲಿ ಒಂದಾಗಿದೆ. ಇನ್ನು ಸಾರ್ಕರದ ಯಾವುದೇ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕೂ ಆಧಾರ್‌ ಕಾರ್ಡ್‌ ಪ್ರಮುಖವಾಗಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಆಧಾರ್‌ ಕಾರ್ಡ್‌ ಹೊಂದುವುದು ಅತ್ಯಗತ್ಯವಾಗಿದೆ.

ಆದರಿಂದ ಆಧಾರ್‌ ಕಾರ್ಡ್‌ ಅನ್ನು ಹಲವು ಸೇವೆಗಳಿಗೆ ಲಿಂಕ್‌ ಮಾಡುವ ಪ್ರಯತ್ನ ಕೂಡ ಸರ್ಕಾರದ ಕಡೆಯಿಂದ ನಡೆಯುತ್ತಿದೆ. ಈಗಾಗಲೇ ಪ್ಯಾನ್‌ ಕಾರ್ಡ್‌ ಜೊತೆಗೆ ಆಧಾರ್‌ ಲಿಂಕ್‌ ಮಾಡಿರುವ ಸರ್ಕಾರ ವೋಟರ್‌ ಐಡಿಗೂ ಲಿಂಕ್‌ ಮಾಡುವ ಪ್ಲಾನ್‌ ಮಾಡಿದೆ.

ಆಧಾರ್‌ ಕಾರ್ಡ್‌
 ಹೌದು, ಆಧಾರ್‌ ಕಾರ್ಡ್‌ ಸರ್ಕಾರದ ಸೇವೆಗಳನ್ನು ಪಡೆಯುವುದಕ್ಕೆ ಪ್ರಮುಖವಾದ ದಾಖಲೆಯಾಗಿದೆ. ಇವುಗಳ ಜೊತೆಗೆ ಬ್ಯಾಂಕ್‌ನಲ್ಲೂ ಕೂಡ ಅಧಾರ್‌ ಕಾರ್ಡ್‌ ದಾಖಲೆ ಸಲ್ಲಿಸುವುದು ಮುಖ್ಯವಾಗಿದೆ. ಇದರ ಜೊತೆಗೆ ಆದಾಯ ತೆರಿಗೆ ರಿಟರ್ನ್ (ITR) ಇ-ಪರಿಶೀಲನೆಗೆ ಸಹ ಆಧಾರ್ ಅನ್ನು ಬಳಸಬಹುದಾಗಿದೆ. ನೀವು ಸಲ್ಲಿಸಿರುವ ಆಧಾಯ ತೆರಿಗೆ ಬಗ್ಗೆ ಆನ್‌ಲೈನ್‌ನಲ್ಲಿ ಪರಿಶೀಲನೆ ನಡೆಸಲು ಅದಾರ್‌ ಕಾರ್ಡ್‌ ಬಳಸಬಹುದು. ಹಾಗಾದ್ರೆ ಆಧಾರ್ ಬಳಸಿ ನಿಮ್ಮ ITR ಅನ್ನು ಫೈಲ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

 

ಅನ್‌ಲೈನ್‌

ಆಧಾರ್‌ ಮೂಲಕ ಅನ್‌ಲೈನ್‌ನಲ್ಲಿ ನಿಮ್ಮ ಆದಾಯ ತೆರಿಗೆ ಪಾವತಿಯನ್ನು ಪರಿಶೀಲಿಸಲು ಅವಕಾಶವಿದೆ. ಆದರೆ ನಿಮ್ಮ ಆಧಾರ್‌ ಕಾರ್ಡ್‌ ಅನ್ನು ನಿಮ್ಮ ಪ್ಯಾನ್‌ ಕಾರ್ಡ್‌ನೊಂದಿಗೆ ಲಿಂಕ್‌ ಮಾಡಿದ್ದರೆ ಮಾತ್ರ ಸಾದ್ಯವಾಗಲಿದೆ. ಇದರಿಂದ ನೀವು ಆನ್‌ಲೈನ್‌ನಲ್ಲಿಯೇ ನಿಮ್ಮ ಐಟಿ ರಿಟರ್ನ್ಸ್‌ ಅನ್ನು ಇ-ವೆರಿಫೈ ಮಾಡಬಹುದು. ನೀವು ಪಾವತಿಸಿರುವ ತೆರಿಗೆ ವಿವರವನ್ನು ಕುಳಿತಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಇನ್ನು ನಿಮ್ಮ ಆಧಾರ್ ಬಳಸಿ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಅನ್ನು ಇ-ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

 

ಆಧಾರ್ ಬಳಸಿ ಆನ್‌ಲೈನ್‌ನಲ್ಲಿ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಪರಿಶೀಲಿಸುವುದು ಹೇಗೆ?

ಹಂತ:1 ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ತೆರೆಯಿರಿ.
ಹಂತ:2 ನಂತರ ಕ್ವಿಕ್‌ ಲಿಂಕ್‌ಗಳ ವಿಭಾಗದಲ್ಲಿ, ‘ಲಿಂಕ್ ಆಧಾರ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:3 ನೆಕ್ಸ್ಟ್‌ ಪೇಜ್‌ನಲ್ಲಿ , ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾದ ನಿಮ್ಮ ಹೆಸರು ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಎಲ್ಲಾ ಬಾಕ್ಸ್‌ಗಳನ್ನು ಪರಿಶೀಲಿಸಿ ಮತ್ತು ‘ಲಿಂಕ್ ಆಧಾರ್’ ಬಟನ್ ಕ್ಲಿಕ್ ಮಾಡಿ.
ಹಂತ:4 ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು ‘ಇ-ವೆರಿಫೈ ರಿಟರ್ನ್’ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ನಿಮ್ಮ ಪ್ಯಾನ್, ಮೌಲ್ಯಮಾಪನ ವರ್ಷ, ಐಟಿಆರ್ ಫೈಲಿಂಗ್ ಸಮಯದಲ್ಲಿ ಸ್ವೀಕರಿಸಿದ ಸ್ವೀಕೃತಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಂತರ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ.

 

ಹಂತ:6 ಸ್ಕ್ರೀನ್‌ ಮೇಲಿನ ಪ್ರಾಂಪ್ಟ್‌ಗಳನ್ನು ಅನುಸರಿಸಿ ಮತ್ತು ಕೊನೆಯಲ್ಲಿ, ವೆಬ್ ಪೇಜ್‌ ಅಪ್‌ಲೋಡ್ ಮಾಡಿದ ರಿಟರ್ನ್‌ಗಳ ವಿವರಗಳನ್ನು ಪ್ರದರ್ಶಿಸುತ್ತದೆ.
ಹಂತ:7 ಈಗ, ITR ಇ-ಪರಿಶೀಲನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಈ ಪುಟದಲ್ಲಿ ಇ-ವೆರಿಫೈ ಕ್ಲಿಕ್ ಮಾಡಿ.
ಹಂತ:8 ನಂತರ ನಿಮಗೆ ಇ-ಪರಿಶೀಲನೆ ಕೋಡ್ (EVC) ಅನ್ನು ಕ್ರಿಯೆಟ್‌ ಮಾಡಲು ಹಲವು ವಿಧಾನಗಳು ಕಾಣಲಿವೆ. ಈ ಪಟ್ಟಿಯಲ್ಲಿ ನೆಟ್ ಬ್ಯಾಂಕಿಂಗ್, ಪೂರ್ವ ಮೌಲ್ಯೀಕರಿಸಿದ ಬ್ಯಾಂಕ್ ಖಾತೆ, ಪೂರ್ವ ಮೌಲ್ಯೀಕರಿಸಿದ ಡಿಮ್ಯಾಟ್ ಖಾತೆ, ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರ ಅಥವಾ ಆಧಾರ್ ಅನ್ನು ಒಳಗೊಂಡಿದೆ. ಇದರಲ್ಲಿ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:9 ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಒಂದು ಬಾರಿಯ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ. ನಿಮ್ಮ ರಿಟರ್ನ್ ಅನ್ನು ಇ-ಪರಿಶೀಲಿಸಲು OTP ಅನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್ ಒತ್ತಿರಿ.

ಒಮ್ಮೆ ನೀವು OTP ಅನ್ನು ಸಲ್ಲಿಸಿದ ನಂತರ, ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ. ನಂತರ ಸ್ವೀಕೃತಿಯನ್ನು ಡೌನ್‌ಲೋಡ್ ಮಾಡಿ. ಈ ದೃಢೀಕರಣ ಸಂದೇಶವನ್ನು ನಿಮ್ಮ ನೋಂದಾಯಿತ ಇಮೇಲ್ ಐಡಿಯಲ್ಲಿಯೂ ನಿಮಗೆ ಕಳುಹಿಸಲಾಗುತ್ತದೆ. ಈ ಮೂಲಕ ಅಧಾರ್‌ ಕಾರ್ಡ್‌ ಬಳಸಿ ಆದಾಯ ತೆರಿಗೆ ರಿಟರ್ನ್ಸ್‌ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

 

ಐಟಿಆರ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವುದು ಹೇಗೆ ?

ಹಂತ 1: ಆದಾಯ ತೆರಿಗೆ ಇಲಾಖೆ ಪೋರ್ಟಲ್ ಗೆ ಹೋಗಿ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ. ನೀವು ಹೊಸ ಬಳಕೆದಾರರಾಗಿದ್ದರೆ, ನಿಮ್ಮ ಪ್ಯಾನ್ ಬಳಸಿ ಪೋರ್ಟಲ್‌ನಲ್ಲಿ ನೋಂದಾಯಿಸಿ.
ಹಂತ 2: ಪೋರ್ಟಲ್ ಒಳಗೆ, ‘ಡೌನ್‌ಲೋಡ್’ ವಿಭಾಗವನ್ನು ತೆರೆಯಿರಿ ಮತ್ತು ಸಂಬಂಧಿತ ಮೌಲ್ಯಮಾಪನ ವರ್ಷದ ಅಡಿಯಲ್ಲಿ ಇ-ಫೈಲಿಂಗ್‌ಗೆ ಹೋಗಿ ಮತ್ತು ಸೂಕ್ತವಾದ ಐಟಿಆರ್ ಫಾರ್ಮ್ ಅನ್ನು ಆಯ್ಕೆ ಮಾಡಿ. ನೀವು ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ ನೀವು ಐಟಿಆರ್ -1 Return Preparation Software ಅನ್ನು ಡೌನ್‌ಲೋಡ್ ಮಾಡಬಹುದು.
ಹಂತ 3: ಈಗ ಡೌನ್‌ಲೋಡ್ ಮಾಡಿದ Return Preparation Software (ಎಕ್ಸೆಲ್ ಯುಟಿಲಿಟಿ) ತೆರೆಯಿರಿ ಮತ್ತು ಎಲ್ಲಾ ಸೂಚನೆಗಳನ್ನು ಅನುಸರಿಸಿ ಮತ್ತು ಅದೇ ಸಮಯದಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ನಿಮ್ಮ ಫಾರ್ಮ್ 16 ರಿಂದ ಉಪಯುಕ್ತತೆಗೆ ಸೇರಿಸಿ.
ಹಂತ 4: ಈಗ ನೀವು ಪಾವತಿಸಬೇಕಾದ ತೆರಿಗೆಯನ್ನು ಲೆಕ್ಕಾಚಾರ ಮಾಡಬಹುದು, ತೆರಿಗೆ ಪಾವತಿಸಬಹುದು ಮತ್ತು ತೆರಿಗೆ ರಿಟರ್ನ್‌ನಲ್ಲಿ ಸಂಬಂಧಿತ ಚಲನ್ ವಿವರಗಳನ್ನು ನಮೂದಿಸಬಹುದು. ಯಾವುದೇ ತೆರಿಗೆ ಹೊಣೆಗಾರಿಕೆ ಇಲ್ಲದಿದ್ದರೆ, ನೀವು ಮುಂದೆ ಹೋಗಿ ಈ ಹಂತವನ್ನು ಬಿಟ್ಟುಬಿಡಬಹುದು.

ಟ್ಯಾಪ್

ಹಂತ 5: ಈಗ ‘ಎಕ್ಸ್‌ಎಂಎಲ್ ಫೈಲ್ ರಚಿಸಿ’ ಬಟನ್ ಟ್ಯಾಪ್ ಮಾಡಿ, ಅದು ನಿಮ್ಮ ಕಂಪ್ಯೂಟರ್‌ನಲ್ಲಿ ಸ್ವಯಂಚಾಲಿತವಾಗಿ ಸೇವ್‌ ಆಗಲಿದೆ.
ಹಂತ 6: ಐಟಿಆರ್ ಪೋರ್ಟಲ್‌ಗೆ ಹಿಂತಿರುಗಿ ಮತ್ತು ‘ಸಲ್ಲಿಕೆ ರಿಟರ್ನ್’ ವಿಭಾಗಕ್ಕೆ ಹೋಗಿ.
ಹಂತ 7: ನೀವು ರಚಿಸಿದ XML ಫೈಲ್ ಅನ್ನು ಅಪ್‌ಲೋಡ್ ಮಾಡಿ. ತದನಂತರ ಫೈಲ್ಗೆ ಡಿಜಿಟಲ್ ಸಹಿ ಮಾಡಿ. ನಿಮ್ಮಲ್ಲಿ ಡಿಜಿಟಲ್ ಸಹಿ ಇಲ್ಲದಿದ್ದರೆ, ನೀವು ಈ ಹಂತವನ್ನು ಬಿಟ್ಟುಬಿಡಬಹುದು.
ಹಂತ 8: ಸಲ್ಲಿಸುವಾಗ, ಐಟಿಆರ್-ಪರಿಶೀಲನೆಯನ್ನು ರಚಿಸಲಾಗುತ್ತದೆ ಮತ್ತು ನಿಮ್ಮ ನೋಂದಾಯಿತ ಇಮೇಲ್ ಖಾತೆಗೆ ಕಳುಹಿಸಲಾಗುತ್ತದೆ. ಇದನ್ನು ಪುಟದಿಂದಲೇ ಡೌನ್‌ಲೋಡ್ ಮಾಡಬಹುದು.
ಹಂತ 9: ಇದರ ನಂತರ, ನೀವು ರಿಟರ್ನ್ ಅನ್ನು ಇ-ವೆರಿಫೈ ಮಾಡಬೇಕಾಗುತ್ತದೆ, ಇದನ್ನು ಆರು ವಿಧಾನಗಳ ಮೂಲಕ ಮಾಡಬಹುದು. ಈ ವಿಧಾನಗಳಲ್ಲಿ ನೆಟ್‌ಬ್ಯಾಂಕಿಂಗ್, ಬ್ಯಾಂಕ್ ಎಟಿಎಂ, ಆಧಾರ್ ಒಟಿಪಿ, ಬ್ಯಾಂಕ್ ಖಾತೆ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಸೇರಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Telegram: ಟೆಲಿಗ್ರಾಂ ಬಳಕೆದಾರರಿಗೆ ಸಿಹಿ ಸುದ್ದಿ.. ಶೀಘ್ರದಲ್ಲೇ ಬಳಕೆಗೆ ಸಿಗಲಿದೆ ಕ್ರಿಪ್ಟೋಕರೆನ್ಸಿ ಟನ್​ಕಾಯಿನ್​

Mon Dec 27 , 2021
ಟೆಲಿಗ್ರಾಂ (Telegram) ಬಳಕೆದಾರರು ಶೀಘ್ರದಲ್ಲೇ ಕ್ರಿಪ್ಟೋಕರೆನ್ಸಿ ಟನ್​ಕಾಯಿನ್​ನಲ್ಲಿ   ದೇಣಿಗೆಗಳನ್ನು ನೀಡಲು ಮತ್ತು ತಮ್ಮ ಚಂದಾದಾರಕೆಗಳಿಗೆ ಪಾವತಿಸಲು ಸಾಧ್ಯವಾಗುತ್ತದೆ ಎಂದು ಟೆಲಿಗ್ರಾಂ​ನ ಓಪನ್ ನೆಟ್‌ವರ್ಕ್ (TON) ಸಮುದಾಯವು ಬ್ಲಾಗ್ ಪೋಸ್ಟ್‌ನಲ್ಲಿ (Blogpost) ತಿಳಿಸಿದೆ. ಮಾತ್ರವಲ್ಲದೆ, ಚಾನಲ್ ನಿರ್ವಾಹಕರು ತಮ್ಮ ಆದಾಯವನ್ನು ಅದೇ ಕ್ರಿಪ್ಟೋಕರೆನ್ಸಿಯಲ್ಲಿ   ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ “TON ಸಮುದಾಯವು TON ಬ್ಲಾಕ್‌ಚೈನ್, ಡೊನೇಟ್ ಮತ್ತು ಟೆಲಿಗ್ರಾಂ-ಪರಿಶೀಲಿಸಿದ ಪಾವತಿ ಸೇವೆಗಳಲ್ಲಿ ಅಧಿಕೃತ ಪಾಲುದಾರರಾಗಿದ್ದಾರೆ ಎಂದು ಘೋಷಿಸಲು ಹೆಮ್ಮೆಪಡುತ್ತದೆ” ಅಧಿಕೃತ ಟೆಲಿಗ್ರಾಂ […]

Advertisement

Wordpress Social Share Plugin powered by Ultimatelysocial