ಜಿ. ಕೆ. ಸತ್ಯ ಪ್ರಸಿದ್ಧ ಕಲಾವಿದರಾಗಿ, ಪತ್ರಕರ್ತರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಕನ್ನಡಪರ ಹೋರಾಟಗಾರರಾಗಿ ವ್ಯಕ್ತಿತ್ವದವರು.

ಜಿ. ಕೆ. ಸತ್ಯ ಅವರು 1943ರ ಫೆಬ್ರವರಿ 7ರಂದು ಜನಿಸಿದರು.ಬಹುಮುಖಿ ಪ್ರತಿಭೆಯ ಜಿ. ಕೆ. ಸತ್ಯ ಅವರು ಎದ್ದು ಕಾಣುವುದು ಅವರ ಸುಂದರ ರೇಖಾಚಿತ್ರಗಳಿಂದ. 1960ರ ವರ್ಷದಿಂದ 5 ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾಲೋಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸತ್ಯ ಅವರ ಪ್ರಾರಂಭಿಕ ಚಿತ್ರಗಳು ಜನಪ್ರಗತಿಯಂತಹ ಪತ್ರಿಕೆಗಳಲ್ಲಿ ಕಂಡುಬರುತ್ತವೆ.ನಾಡಿನ ಪ್ರಸಿದ್ಧ ಚಿತ್ರಕಲಾವಿದರೂ ಮತ್ತು ಹಿರಿಯ ಗೌರವಾನ್ವಿತ ಪತ್ರಕರ್ತರೂ ಆದ ಸತ್ಯ ಅವರು ಮುಂದೆ ಮೂರು ದಶಕಗಳ ಕಾಲ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹದಲ್ಲಿ ಸೇವೆ ಸಲ್ಲಿಸಿದರು. ಸತ್ಯ ಅವರು ರಚಿಸಿದ ಶ್ರೇಷ್ಠ ಮಟ್ಟದ ಚಿತ್ರಗಳು ಪತ್ರಿಕಾಲೋಕದ ಅನೇಕ ಕಥೆ ಕಾವ್ಯಗಳ ಮೌಲ್ಯವನ್ನು ಹೆಚ್ಚಿಸಿರುವುದರ ಜೊತೆಗೆ, ಅವರು ರಚಿಸಿರುವ ಚಿತ್ರಗಳು ಸಹಸ್ರಾರು ಪುಸ್ತಕಗಳ ಹೊದಿಕೆಗಳಾಗಿ ಹಾಗೂ ಕಥಾಚಿತ್ರಗಳ ಭಾಗವಾಗಿಯೂ ಕಂಗೊಳಿಸಿ ಕೃತಿಮೌಲ್ಯವನ್ನು ವೃದ್ಧಿಸಿವೆ.ಪ್ರಸಕ್ತದಲ್ಲಿಯೂ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಜಿ. ಕೆ. ಸತ್ಯ ಅವರು ‘ಇಂಡಸ್ಟ್ರಿಯಲ್ ನ್ಯೂಸ್ ಅಂಡ್ ಅನಾಲಿಸಿಸ್’ನ ಪ್ರಧಾನ ಸಂಪಾದಕತ್ವ ನಿರ್ವಹಿಸುತ್ತಿದ್ದಾರೆ.ಜಿ. ಕೆ. ಸತ್ಯ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಯಾಗಿದ್ದರಲ್ಲದೆ, ಇಂಡಿಯನ್ ಫೆಡರೇಷನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ಒಕ್ಕೂಟದಲ್ಲೂ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.ಜಿ. ಕೆ. ಸತ್ಯ ಅವರ ಮತ್ತೊಂದು ವಿಶಿಷ್ಟ ಸೇವೆ ಅಂದರೆ ಕನ್ನಡ ಸಾಹಿತಿ ಕಲಾವಿದರ ಬಳಗದ ಚಟುವಟಿಕೆಗಳ ಮುಂಚೂಣಿಯಲ್ಲಿದ್ದು ಗೋಕಾಕ್ ಚಳವಳಿಯೂ ಸೇರಿದಂತೆ ಅನೇಕ ಕನ್ನಡ ಪರ ಚಳವಳಿಗಳಲ್ಲಿ ಅಪಾರ ಕಾಳಜಿಯಿಂದ ಕಾರ್ಯನಿರ್ವಹಿಸಿದ್ದದ್ದು. ಎತ್ತರದ ನಿಲುವಿನ, ಕಂಚಿನ ಕಂಠದಲ್ಲಿನ ಅವರ ಪ್ರೇರಕ ಮಾತುಗಳನ್ನು ಕೇಳುತ್ತಾ ಅವರ ಹಿಂದೆ ನಡೆಯವುದು ಕನ್ನಡ ಪರ ಹೋರಾಟಳಲ್ಲಿ ಭಾಗವಹಿಸುತ್ತಿದ್ದ ನಮ್ಮಂತಹವರಿಗೆ ಖುಷಿ ಕೊಡುವ ವಿಚಾರವಗಿತ್ತು.ಭಾವಸಾರ್ ಕ್ಷತ್ರಿಯ ಸಂಘದ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲರಾದ ಜಿ. ಕೆ. ಸತ್ಯ ಅವರು ಆ ಒಕ್ಕೂಟದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು. ಪ್ರಸಕ್ತದಲ್ಲಿ ಅಂತರ ರಾಷ್ಟ್ರೀಯ ಭಾವಸಾರ್ ಮಹಾಸಭಾದ ಹಿರಿಯ ಸಲಹೆಗಾರರಾಗಿ ಮತ್ತು ದಕ್ಷಿಣ ಬೆಂಗಳೂರು ವಲಯದ ಅಧ್ಯಕ್ಷರಾಗಿ, ಅಮೃತನಿಧಿಯ ಅಧ್ಯಕ್ಷರಾಗಿ ಸಹಾ ಅವರ ಸೇವೆ ಸಲ್ಲುತ್ತಿದೆ. ಕರ್ನಾಟಕದ ಹಿಂದುಳಿದ ವರ್ಗಗಳ ಒಕ್ಕೂಟದ ಹಿರಿಯ ಉಪಾಧ್ಯಕ್ಷರಾಗಿಯೂ ಅವರ ಸೇವೆ ಸಲ್ಲುತ್ತಿದೆ.ಜಿ.ಕೆ. ಸತ್ಯ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೌಲ್ಯ ಕೊಟ್ಟಿದ್ದ 1st ಗಿಫ್ಟ್ ವಾಟರ್ ಮಿಲನ್ ಅಂತೆ..!

Wed Feb 16 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial