G20 Summit: ಅಕ್ಷರಧಾಮ ದೇವಾಲಯದಲ್ಲಿ ಪೂಜೆ ನೆರವೇರಿಸಿದ ರಿಷಿ ಸುನಕ್ ದಂಪತಿ

G20 Summit: ಅಕ್ಷರಧಾಮ ದೇವಾಲಯದಲ್ಲಿ ಪೂಜೆ ನೆರವೇರಿಸಿದ ರಿಷಿ ಸುನಕ್ ದಂಪತಿ

ವದೆಹಲಿ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ದಂಪತಿ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ಜಿ- 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ನಿನ್ನೆ (ಶನಿವಾರ) ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಉಭಯ ನಾಯಕರು ವ್ಯಾಪಾರ ಸಂಬಂಧಗಳನ್ನು ಗಾಢವಾಗಿಸುವ ಮತ್ತು ಹೂಡಿಕೆ ಹೆಚ್ಚಿಸುವ ಮಾರ್ಗಗಳ ಕುರಿತು ಸಮಾಲೋಚಿಸಿದರು.

ಶುಕ್ರವಾರವೇ ನಗರಕ್ಕೆ ಬಂದಿರುವ ಸುನಕ್‌ ಅವರು, ಶೃಂಗಸಭೆಯ ಮೊದಲ ಗೋಷ್ಠಿಯ ನಂತರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು.

ಸಭೆಯ ನಂತರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮೋದಿ ಅವರು, ‘ದೆಹಲಿಯಲ್ಲಿ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ರಿಷಿ ಸುನಕ್‌ ಅವರನ್ನು ಭೇಟಿಯಾಗಿರುವುದು ಅದ್ಭುತವಾಗಿದೆ. ನಾವು ವ್ಯಾಪಾರ ಸಂಬಂಧಗಳನ್ನು ಗಾಢವಾಗಿಸಲು ಮತ್ತು ಹೂಡಿಕೆಯನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.

ಉಭಯ ರಾಷ್ಟ್ರಗಳು ಸಮೃದ್ಧ ಮತ್ತು ಸುಸ್ಥಿರ ಗ್ರಹಕ್ಕಾಗಿ ಕೆಲಸ ಮಾಡುತ್ತಲೇ ಇರುತ್ತವೆ ಎಂದು ಅವರು ಹೇಳಿದರು.

ಮೋದಿ ಅವರು ಜಪಾನ್ ಪ್ರಧಾನಿ ಫ್ಯುಮಿಯೊ ಕಿಶಿಡಾ ಅವರೊಂದಿಗೆ ಸಹ ದ್ವಿಪಕ್ಷೀಯ ಮಾತುಕತೆ ನಡೆಸಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

ಹಸಿರು ಪರಿಸರ ನಿಧಿಗೆ ದಾಖಲೆ 2 ಬಿಲಿಯನ್ ಡಾಲರ್ ನೆರವು ಘೋಷಿಸಿದ ರಿಷಿ ಸುನಕ್

Sun Sep 10 , 2023
ನವದೆಹಲಿ: ಭಾರತದ ಜಿ 20 ಶೃಂಗಸಭೆಯು ಮುಕ್ತಾಯದ ಹಂತ ತಲುಪಿದ್ದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಹವಾಮಾನ ನಿಧಿಗೆ ದಾಖಲೆಯ ನೆರವು ಘೋಷಿಸಿದ್ದಾರೆ. ಹಸಿರು ಪರಿಸರ ನಿಧಿಗೆ(ಜಿಸಿಎಫ್) ಬ್ರಿಟನ್‌ನಿಂದ 2 ಶತಕೋಟಿ ಡಾಲರ್ ಒದಗಿಸುವುದಾಗಿ ಅವರು ತಿಳಿಸಿದ್ದಾರೆ. ಇದು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ವಿಶ್ವಕ್ಕೆ ಸಹಾಯ ಮಾಡಲು ದೇಶವೊಂದು ನೀಡಿದ ಅತಿದೊಡ್ಡ ನೆರವಾಗಿದೆ. ಕೋಪನ್ ಹೇಗನ್ ಒಪ್ಪಂದದ ನಂತರ, 194 ದೇಶಗಳು ಈ ನಿಧಿಯನ್ನು ಸ್ಥಾಪಿಸಿವೆ. ಯಾವುದೇ G7 […]

Advertisement

Wordpress Social Share Plugin powered by Ultimatelysocial