G20 Summit 2023: ರಾಷ್ಟ್ರಪತಿ ಡಿನ್ನರ್ ವೇಳೆ 78 ಕಲಾವಿದರಿಂದ ವಸುಧೈವ ಕುಟುಂಬಕಂ ಸಂಗೀತ ಪ್ರದರ್ಶನ

ನವದೆಹಲಿ: ಜಿ20 ಶೃಂಗಸಭೆಯಲ್ಲಿ (G20 Summit 2023) ಎಲ್ಲ ವಿದೇಶಿ ಗಣ್ಯರು, ನಾಯಕರು ಇದೇ ಮೊದಲ ಬಾರಿಗೆ ದೇಶೀಯ ವಾದ್ಯ ಸಂಗೀತಗಳಿಗೆ ಸಾಕ್ಷಿಯಾಗಲಿದ್ದಾರೆ(instrumental music performances). ಈ ಸಂಗೀತ ಪ್ರದರ್ಶನವು ದೇಶದ ಎಲ್ಲ ರೀತಿಯ ಸಂಗೀತ ಪ್ರಕಾರಗಳನ್ನು ಒಳಗೊಂಡಿರುತ್ತದೆ.

ವಿಶ್ವ ನಾಯಕರು (World Leaders) ಮತ್ತು ಗಣ್ಯರಿಗೆ (foreign dignitaries) ಇದು ಹೊಸ ಅನುಭವವನ್ನು ನೀಡಲಿದೆ. ಸೆಪ್ಟೆಂಬರ್ 9ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೀಡಲಿರುವ ಡಿನ್ನರ್ ಪ್ರೋಗ್ರಾಮ್‌ ವೇಳೆ ಕಲಾವಿದರು ಸುಮಾರು ಮೂರು ಗಂಟೆಗಳ ಕಾಲ ಸಂಗೀತ ಪ್ರದರ್ಶನ ನೀಡಲಿದ್ದಾರೆ.

ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆ ಸಂಧ್ಯಾ ಪುರೇಚ ಅವರು ಸಂಗೀತ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ನವದೆಹಲಿಯ ಪ್ರಗತಿ ಮೈದಾನ ಸಂಕೀರ್ಣದಲ್ಲಿರುವ ಭಾರತ ಮಂಟಪದಲ್ಲಿ ಸಂಜೆ 6 ರಿಂದ 9 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದೇಶದ ಎಲ್ಲ ಭಾಗಗಳ ಸುಮಾರು 78 ವಾದ್ಯ ಸಂಗೀತಗಾರರು ಸೇರಿ ಮೂರು ಗಂಟೆಗಳ ಕಾಲ ಸಂಗೀತ ಪ್ರದರ್ಶನ ನೀಡಲಿದ್ದಾರೆ.

34 ಹಿಂದೂಸ್ತಾನಿ ವಾದ್ಯಗಳು, 18 ಕರ್ನಾಟಕ ವಾದ್ಯಗಳು ಮತ್ತು ಭಾರತದ ರಾಜ್ಯಗಳಾದ್ಯಂತ 40 ಜಾನಪದ ವಾದ್ಯಗಳ ತಂಡವು ಇದರಲ್ಲಿ ಭಾಗವಹಿಸಲಿವೆ.11 ಮಕ್ಕಳು, 13 ಮಹಿಳೆಯರು, 7 ವಿಶಿಷ್ಟ ಚೇತನರು, 26 ತರುಣ ಮತ್ತು 21 ಹಿರಿಯ ಕಲಾವಿದರು ಈ ಸಂಗೀತ ವಾದ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಸಂಗೀತ ಕಾರ್ಯಕ್ರಮವು ವಿಲಂಬಿತ್ ಲಯದಲ್ಲಿ (ನಿಧಾನಗತಿಯ ಗತಿ) ನಂತರ ಮಧ್ಯ ಲಯದಲ್ಲಿ (ಮಧ್ಯಮ ವೇಗದ ಗತಿ) ಸಂಯೋಜನೆಗಳೊಂದಿಗೆ ಪ್ರಾರಂಭವಾಗಲಿದೆ. ದ್ರುತ ಲಯದಲ್ಲಿ (ಫಾಸ್ಟ್ ಟೆಂಪೋ) ಕೆಲವು ಅಂಕಗಳೊಂದಿಗೆ ಕೊನೆಗೊಳ್ಳಲಿದೆ.

ಈ ಸುದ್ದಿಯನ್ನೂ ಓದಿ : G20 Summit 2023: ಜಿ20 ಶೃಂಗಸಭೆಗೆ ಬರುವ ವಿಶ್ವ ನಾಯಕರನ್ನು ಲೈವ್‌ ಆಗಿ ಇಲ್ಲಿ ನೋಡಿ!

ಜಿ20 ಶೃಂಗ ಸಭೆ ವೇಳೆ ಪಟ್ಟಿಯಾಗಿರುವ ಕಾರ್ಯಕ್ರಮಗಳ ಪೈಕಿ ಮ್ಯೂಸಿಕಲ್ ಪ್ರೋಗ್ರಾಮ್ ಮಾತ್ರವೇ ಏಕೈಕ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ತಂತಿ ವಾದ್ಯಗಳು, ಪೊರೆಗಳನ್ನು ಹೊಂದಿರುವ ವಾದ್ಯಗಳು, ಗಾಳಿ ವಾದ್ಯಗಳು ಮತ್ತು ಲೋಹದ ವಾದ್ಯಗಳು. ಸುರ್ಬಹಾರ್, ಜಲತರಂಗ್, ನಲ್ತರಂಗ್, ವೀಣೆ, ರುದ್ರ ವೀಣೆ, ಸರಸ್ವತಿ ವೀಣೆ, ಧಾಂಗ್ಲಿ, ಸುಂದ್ರಿ, ಭಾಪಾಂಗ್ ಮತ್ತು ದಿಲ್ರುಬಾದಂತಹ ಹಲವಾರು ಅಪರೂಪದ ವಾದ್ಯಗಳು ಈ ಕಾರ್ಯಕ್ರಮದಲ್ಲಿ ಬಳಕೆಯಾಗಲಿವೆ. ಸಂಗೀತ ಪ್ರದರ್ಶನದ ಅಂತಿಮ ಚರಣದಲ್ಲಿ ಎಲ್ಲ ಸಂಗೀತಗಾರರು ವಸುಧೈವ ಕುಟುಂಬಕಂ ಗೀತೆಯನ್ನು ಪ್ರಸ್ತುತಪಡಿಸಲಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ .

The post G20 Summit 2023: ರಾಷ್ಟ್ರಪತಿ ಡಿನ್ನರ್ ವೇಳೆ 78 ಕಲಾವಿದರಿಂದ ವಸುಧೈವ ಕುಟುಂಬಕಂ ಸಂಗೀತ ಪ್ರದರ್ಶನ first

Please follow and like us:

tmadmin

Leave a Reply

Your email address will not be published. Required fields are marked *

Next Post

ಕರ್ನಾಟಕದಲ್ಲಿ 'ಝೀರೊ ಕರೆಂಟ್ ಝೀರೋ ಬಿಲ್': ನವೆಂಬರ್‌ನಲ್ಲಿ ರಾಜ್ಯಕ್ಕೆ ಕತ್ತಲು: ಬೊಮ್ಮಾಯಿ ಭವಿಷ್ಯ

Fri Sep 8 , 2023
ಬೆಂಗಳೂರು, ಸೆಪ್ಟಂಬರ್ 08: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರೆಂಟಿಗಳ ಹೆಸರಲ್ಲಿ ದೋಖಾ, ವರ್ಗಾವಣೆ ದಂಧೆಯಲ್ಲಿ ಅಧಿಕಾರಿಗಳ ಹರಾಜು ನಡೆಯುತ್ತಿದೆ. ವಿದ್ಯುತ್ ಉಚಿತ ಎಂದಿತ್ತು, ಈಗ ನೋಡಿದರೆ ವಿದ್ಯುತ್ ಸಿಗದಂತೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.   ರಾಜ್ಯ ಸರ್ಕಾರದ ವೈಫಲ್ಯಗಳ ವಿರೋಧಿಸಿ ರಾಜ್ಯ ಬಿಜೆಪಿ ವತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ 200 ವಿದ್ಯುತ್ ಉಚಿತ […]

Advertisement

Wordpress Social Share Plugin powered by Ultimatelysocial