ಕಿತ್ತೋದ ಬಸ್ ನಿಲ್ದಾಣದ ಉದ್ಘಾಟನೆಗೆ MLA ಬದಲು ಎಮ್ಮೆ ಚೀಫ್ ಗೆಸ್ಟ್ ಮಾಡಿದ ಸ್ಥಳೀಯರು..!

ಗದಗ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದಲ್ಲಿ ಬಿದ್ದುಹೋಗಿರುವ ಬಸ್ ನಿಲ್ದಾಣದ ಎದುರು ತೆಂಗಿನ ಗರಿಯ ಮೂಲಕ ಚಪ್ಪರ ಕಟ್ಟಿ, ಚಪ್ಪರದ ಬಸ್ ನಿಲ್ದಾಣವನ್ನ ಉದ್ಘಾಟನೆ ಮಾಡಲಾಯ್ತು.

ಕಿತ್ತೋಗಿರೋ ಬಸ್ ನಿಲ್ದಾಣದ ಉದ್ಘಾಟನೆಗೆ ಎಮ್ ಎಲ್ ಎ ಬದಲು ಎಮ್ಮೆಯನ್ನ ಚೀಫ್ ಗೆಸ್ಟ್ ಮಾಡಲಾಗಿತ್ತು.. ದಶಕದ ಹಿಂದೆಯೇ ಬಾಲೇಹೊಸೂರು ಗ್ರಾಮದ ಬಸ್ ನಿಲ್ದಾಣ ಬಿದ್ದು ಹೋಗಿವೆ.. ಈ ಬಗ್ಗೆ ಸ್ಥಳೀಯ ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್ ಉದಾಸಿಯವರಿಗೆ ಮನವಿ ಸಲ್ಲಿಸಲಾಗಿತ್ತು.. ಆದ್ರೆ ಸೂಕ್ತ ಭರವಸೆ ಸಿಕ್ಕಿರಲಿಲ್ವಂತೆ.. ಹೀಗಾಗಿ ಗ್ರಾಮಸ್ಥರು ಸೇರ್ಕೊಂಡು ಚಪ್ಪರದ ಬಸ್ ನಿಲ್ದಾಣ ಮಾಡಿ, ಉದ್ಘಾಟನೆಯನ್ನೂ ಮಾಡಿದಾರೆ.

ಬಾಲೇಹೊಸೂರು ಗ್ರಾಮದಲ್ಲಿ ಸುಮಾರು 40 ವರ್ಷದ ಹಿಂದೆ ಬಸ್ ನಿಲ್ದಾಣ ನಿರ್ಮಾಣವಾಗಿತ್ತು. ಸುಮಾರು 10 ವರ್ಷದ ಹಿಂದೆಯೇ ಛಾವಣಿ ಕುಸಿದು ಬಸ್ ನಿಲ್ದಾಣದ ಕಟ್ಟಡ ಸಂಪೂರ್ಣವಾಗಿ ಹಾಳಾಗಿದೆ. ಕಟ್ಟಡದ ಆವರಣದಲ್ಲಿ ಕಸ ಚೆಲ್ಲುವ ಮೂಲಕ ಡಂಪಿಂಗ್ ಯಾರ್ಡ್ ಆಗಿ ಪರಿಣಮಿಸಿದೆ. ಗ್ರಾಮದ ಮಹಿಳೆಯರು ಬಸ್ ನಿಲ್ದಾಣದ ಪಕ್ಕದ ಕಟ್ಟೆ ಮೇಲೆ ಕೂತು ಬಸ್ ಗೆ ಕಾಯಬೇಕಾದ ಪರಿಸ್ಥಿತಿ ಇದೆ. ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್ ಉದಾಸಿ ಅವರಿಗೆ ಬಸ್ ನಿಲ್ದಾಣದ ದುರಸ್ಥಿ ಬಗ್ಗೆ ಮನವರಿಕೆ ಮಾಡ್ಲಾಗಿತ್ತು. ಮನವಿಯನ್ನೂ ಸಲ್ಲಿಸಲಾಗಿದೆ ಅಂತಾ ರೈತ ಮುಖಂಡ ಲೋಕೇಶ್ ಜಾಲವಾಡಗಿ ಅವರು ಹೇಳ್ತಿದಾರೆ. ಸ್ಪಂದನೆ ಸಿಗದ ಕಾರಣ ವಿಶೇಷ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಗ್ರಾಮದಲ್ಲಿ ಸುಮಾರು 5 ಸಾವಿರ ಜನ ಸಂಖ್ಯೆ ಇದೆ. ವಿದ್ಯಾಭ್ಯಾಸದ ನಿಮಿತ್ತ ನಿತ್ಯ 100 ವಿದ್ಯಾರ್ಥಿಗಳು ಲಕ್ಷ್ಮೇಶ್ವರ ಹಾಗೂ ಗುತ್ತಲ ಗ್ರಾಮಕ್ಕೆ ಹೋಗ್ತಾರೆ. ಬಸ್ ಗಾಗಿ ಕಾಯಲು ಬಸ್ ನಿಲ್ದಾಣದ ಪಕ್ಕದ ಹೋಟೆಲ್ ಕಟ್ಟೆ ಆಶ್ರಯಸಬೇಕಾಗಿದೆ ಅಂತಾ ಗ್ರಾಮಸ್ಥ ವಿರೂಪಾಕ್ಷ ಇಟಗಿ ಹೇಳಿದ್ದಾರೆ. ಮನವಿ ಸಲ್ಲಿಸಿ ರೋಸಿ ಹೋಗಿದ್ರಿಂದ ರೈತ್ರು ವಿನೂತನ ಕಾರ್ಯಕ್ರಮ ಮಾಡಿದ್ದಾರೆ. ಸ್ಪಂದನೆ ಸಿಗದಿದ್ದರೆ ಹೋರಾಟ ಮಾಡೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿ ಬ್ರೇಕಿಂಗ್ : ಶಾಲೆ ಬಿಟ್ಟು ಪ್ರತಿಭಟನೆಗೆ ಇಳಿದ ಮಕ್ಕಳು.

Wed Jul 20 , 2022
ರಾಜ್ಯ ಹೆದ್ದಾರಿ ಬಂದ್ ಮಾಡಿ ಶಿಕ್ಷಕಿ ವರ್ಗಾವಣೆ ಮಾಡುವಂತೆ ಪಟ್ಟು. ಗಣಿತ ಶಿಕ್ಷಕಿ ಪಾಠ ಅರ್ಥವಾಗಲ್ಲ ವರ್ಗಾವಣೆ ಮಾಡಿ. ಯಾದಗಿರಿ ತಾಲೂಕಿನ ಅರಕೇರಾ ಕೆ ಹೈಸ್ಕೂಲ್ ನಲ್ಲಿ ಹೈಡ್ರಾಮ್. ಗಣಿತ ಶಿಕ್ಷಕಿ ಶೈಲಜಾ ಹಾಗೂ ಮುಖ್ಯೋಪಾಧ್ಯಾಯ ನಡುವೆ ಜಟಾಪಟಿ. ಇಬ್ಬರ ನಡುವೆ ಶಿಕ್ಷಣ ಬಿಟ್ಟು ಪ್ರತಿಭಟನೆ ಇಳಿದ ಮಕ್ಕಳು. ಶಿಕ್ಷಣ ಸಚಿವರು ನೋಡಲೇಬೇಕಾದ ಸ್ಟೋರಿ. ಶಿಕ್ಷಕರ ಒಳ ಜಗಳಕ್ಕೆ ಮಕ್ಕಳನ್ನೆ ಆಯುದವಾಗಿ ಬಳಸಿಕೊಂಡ ಮುಖ್ಯ ಶಿಕ್ಷಕಿ .. ಸಂಬಂದಿಕರನ್ನು ಕರೆತಂದು […]

Advertisement

Wordpress Social Share Plugin powered by Ultimatelysocial