ಗಣ್ಯರ ಸಮ್ಮುಖದಲ್ಲಿ “ದಂಡಿ” ಹಾಡುಗಳ ಲೋಕಾರ್ಪಣೆ.

 

ವಿಶಾಲ್ ರಾಜ್ ನಿರ್ದೇಶಿಸಿರುವ “ದಂಡಿ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

ಆದಿಚುಂಚನಗಿರಿ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಮೇಜರ್ ಸಿ.ಆರ್.ರಮೇಶ್, ಎನ್.ಮುನಿರಾಜುಗೌಡ ಮುಂತಾದ ಗಣ್ಯರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಲೋಕಾರ್ಪಣೆಯಾದವುಪೂಜ್ಯ ಶ್ರೀಗಳು ತಮ್ಮ ಹಿತನುಡಿಗಳ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. ಉಳಿದ ಗಣ್ಯರು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡಿದರು.

ಪ್ರೊಫೆಸರ್ ರಾಜಶೇಖರ ಮಠಪತಿ ಅವರ ಕಾದಂಬರಿ ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ. 1904 ರಿಂದ 1942 ರವರೆಗೆ ದೇಶದಲ್ಲಿ ನಡೆದ ಚಳುವಳಿಗಳು ನಮ್ಮ ಚಿತ್ರಕ್ಕೆ ಸ್ಪೂರ್ತಿಯಾಗಿದೆ. ಆದರೆ “ದಂಡಿ” ಚಳುವಳಿಯನ್ನು ಕೇಂದ್ರಿಕರಿಸಲಾಗಿದೆ. ಗಾಂಧಿಯವರ ಸಾರಥ್ಯದಲ್ಲಿ “ದಂಡಿ” ಸತ್ಯಾಗ್ರಹ ನಡೆಯುತ್ತಿದಾಗಲೇ, ನಮ್ಮ ಉತ್ತರ ಕನ್ನಡದಲ್ಲೂ ಹೋರಾಟ ಆರಂಭವಾಯಿತು. ಅದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿರುವುದು ಖುಷಿಯ ವಿಚಾರವೆಂದರು ನಿರ್ದೇಶಕ ವಿಶಾಲ್ ರಾಜ್.

ನಾನು ವಿಶಾಲ್ ರಾಜ್ ಅವರ ಹಿಂದಿನ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತಾರಾ ಅವರೊಡನೆ ಅಭಿನಯಿಸಿದು ಸಂತೋಷ. ಈ ರೀತಿಯ ವಿಭಿನ್ನ ಕಥೆಯುಳ್ಳ ಚಿತ್ರಗಳನ್ನು ವಿಶಾಲ್ ರಾಜ್ ಹೆಚ್ಚು ನಿರ್ದೇಶಿಸಲಿ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು ನಟ ಸುಚೀಂದ್ರ ಪ್ರಸಾದ್.

ಈ ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಸಂತಸವಾಗಿದೆ. ನಮ್ಮ ಚಿತ್ರಕ್ಕೆ ಈ ಬಾರಿ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಕೂಡ ಬಂದಿದೆ. ಇಂತಹ ಚಿತ್ರವನ್ನು ನಿರ್ದೇಶಿಸಿರುವುದಕ್ಕೆ ವಿಶಾಲ್ ರಾಜ್ ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ ಎಂದರು ನಟಿ ತಾರಾ.

ಕಥೆ ಬರೆದಿರುವ ರಾಗಂ(ರಾಜಶೇಖರ ಮಠಪತಿ) ಸವಿಸ್ತಾರವಾಗಿ ಕಾದಂಬರಿ ಬಗ್ಗೆ ಹಾಗೂ ಚಿತ್ರದ ಬಗ್ಗೆ
ಮಾಹಿತಿ ನೀಡಿದರು.

ಸಂಗೀತ ನೀಡಿರುವ ರಾಮ್ ಕ್ರಿಶ್, ಛಾಯಾಗ್ರಾಹಕ ರಮೇಶ್ ಬಾಬು, ನಾಯಕ ಯುವಾನ್ ದೇವ್, ನಾಯಕಿ ಶಾಲಿನಿ ಭಟ್ ಹಾಗೂ ನಿರ್ಮಾಪಕಿ, ನಟಿ ಉಷಾರಾಣಿ “ದಂಡಿ” ಯ ಬಗ್ಗೆ ಅನುಭವದ ಮಾತುಗಳಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್ ನಾಗೇಶ್

Tue Mar 15 , 2022
ಆರ್ ನಾಗೇಶ್ ಕರ್ನಾಟಕ ರಂಗಭೂಮಿಗೆ ಹೊಸ ದಾರಿಹಾಕಿಕೊಟ್ಟ ನವ್ಯ ಪರಂಪರೆಯಲ್ಲಿನ ಪ್ರಮುಖರು. ಅವರು ರಂಗನಟ, ನಿರ್ದೇಶಕ, ಬೆಳಕು ತಜ್ಞ, ರಂಗ ವಿನ್ಯಾಸಕ ಹೀಗೆ ರಂಗಭೂಮಿಯ ಹಲವಾರು ಆಯಾಮಗಳಲ್ಲಿ ದುಡಿದವರು. ಆರ್. ನಾಗೇಶ್ 1943ರ ಮಾರ್ಚ್ 13ರಂದು ಬೆಂಗಳೂರು ಸಮೀಪದ ರಾಮೋಹಳ್ಳಿಯಲ್ಲಿ ಜನಿಸಿದರು. ತಂದೆ ರಾಮರಾಜ ಅರಸು. ತಾಯಿ ಲಕ್ಷ್ಮೀದೇವಮ್ಮ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿ ಮೊದಲು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಲ್ಲಿ ನಂತರ, ತಮ್ಮ ಅಭಿರುಚಿಗೆ ತಕ್ಕಂತೆ ವಾರ್ತಾ […]

Advertisement

Wordpress Social Share Plugin powered by Ultimatelysocial