ಬಿಡುಗಡೆಗೂ ಪೂರ್ವದಲ್ಲೇ ತೆಲುಗು,ತಮಿಳಿಗೆ ಭಾರಿ ಮೊತ್ತಕ್ಕೆ ಮಾರಾಟವಾದ ರಾಮ್ ತೇಜ್ ನಿರ್ದೇಶನದ “ಭೈರವ” !

ವಿಸೀಕಾ ಪಿಲಂಸ್ ಸಂಸ್ಥೆಯಡಿಯಲ್ಲಿ ನಿರ್ಮಾಣವಾಗಿರುವ “ಭೈರವ” ಚಿತ್ರ
ಮೇಕಿಂಗ್ ನಿಂದಲೆ ಸದ್ದು ಮಾಡಿದೆ. ಚಿತ್ರೀಕರಣ ಮುಕ್ತಾಯವಾಗಿದ್ದು, ಹಿನ್ನೆಲೆ ಸಂಗೀತದಿಂದ “ಭೈರವ” ಸಿಂಗಾರವಾಗುತ್ತಿದ್ದಾನೆ.

ರಾಮ್ ತೇಜ್ ನಿರ್ದೇಶನದ ಈ ಚಿತ್ರ ತೆರೆಗೆ ಬರುವ ಮೊದಲೆ ಪ್ರಸಿದ್ದವಾಗುತ್ತಿದೆ. “ಭೈರವ” ಚಿತ್ರದ
ತಮಿಳು,ತೆಲುಗು ಹಕ್ಕುಗಳನ್ನು ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ.

ನಮ್ಮ ಭೈರವ ಚಿತ್ರ ತೆಲುಗು, ತಮಿಳು ಹಕ್ಕುಗಳನ್ನು ಒಳ್ಳೆಯ ಮೊತ್ತಕ್ಕೆ ಮಾರಾಟ ಮಾಡಿದ್ದೇವೆ. ಇದಕ್ಕೆ ಕಾರಣವೆಂದರೆ ನಮ್ಮ ಚಿತ್ರದ ವಿಭಿನ್ನ ಕಥೆ , ಉನ್ನತ ತಂತ್ರಜ್ಞರ ಕೆಲಸ ಹಾಗೂ ಕಲಾವಿದರ ಉತ್ತಮ ಅಭಿನಯ ಈ ಫಲಿತಾಂಶಕ್ಕೆ ಕಾರಣವಾಗಿದೆ. ಸದ್ಯ ಮುಂಬೈನಲ್ಲಿ ಬಾಲಿವುಡ್‌ ನ ಹೆಸರಾಂತ ಸಂಗೀತ ನಿರ್ದೇಶಕ ಬಾಪಿ ಟುಟುಲ್ ಅವರು ಹಿನ್ನೆಲೆ ಸಂಗೀತ ಅಳವಡಿಸುತ್ತಿದ್ದಾರೆ ಮತ್ತು ರೀರೆಕಾರ್ಡಿಂಗ್ ಸಮಯದಲ್ಲಿ ಚಿತ್ರ ವೀಕ್ಷಿಸಿರುವ ಬಾಲಿವುಡ್ ತಂತ್ರಜ್ಞರು ವಿಭಿನ ಕಥೆಯುಳ್ಳ ಈ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು ನಿರ್ದೇಶಕ ರಾಮತೇಜ್ ಅ ತಿಳಿಸಿದ್ದಾರೆ.

ವಿಸಿಕಾ ಫಿಲಂಸ್ ಸಂಸ್ಥೆ ಯಡಿಯಲ್ಲಿ ನಿರ್ಮಾಣವಾಗುತ್ತಿರುವ “ಭೈರವ” ಚಿತ್ರಕ್ಕೆ ಚರಣ್ ಸುವರ್ಣ ಕಥೆ ಬರೆದಿದ್ದಾರೆ.ಹನಿ ಚೌಧರಿ ಹಾಗೂ ವೈಭವ್ ಬಜಾಜ್ ನಿರ್ಮಾಣದ ಮಾಡಿದ್ದಾರೆ‌.ಶ್ರೀನಿವಾಸ ಸಿ.ವಿ ಈ ಚಿತ್ರದ ಸಹ ನಿರ್ಮಾಪಕರು.

“ಕಮರೊಟ್ಟು ಚೆಕ್ ಪೋಸ್ಟ್” ಖ್ಯಾತಿಯ ಸನತ್ ,ಶೈಲಜಾ ಮುಲ್ಕಿ,ಉಮೇಶ್ ಸಕ್ಕರೆನಾಡು, ಬಾಲಿವುಡ್‌ ನ ನಟಿ ನಜ್ನಿಂ ಪಟ್ನಿ ಸೇರಿದಂತೆ ಹಲವು ಕಲಾವಿದರ ದಂಡೆ ಈ ಚಿತ್ರದಲ್ಲಿದೆ.

ಸುದೀಪ್ ಫೆಡ್ರಿಕ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಆರ್.ಲಿಂಗರಾಜು ಅವರ ಸಂಕಲನವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

2,927 ತಾಜಾ ಸೋಂಕುಗಳಲ್ಲಿ, ದೈನಂದಿನ ಕೋವಿಡ್ -19 ಪ್ರಕರಣಗಳು 18% ಹೆಚ್ಚಾಗುತ್ತವೆ!

Wed Apr 27 , 2022
ಭಾರತದಲ್ಲಿ ಒಂದು ದಿನದಲ್ಲಿ 2,927 ಹೊಸ ಸೋಂಕುಗಳು ದಾಖಲಾಗಿವೆ, ಇದು ಪ್ರಕರಣಗಳ ಸಂಖ್ಯೆಯನ್ನು 4,30,65,496 ಕ್ಕೆ ತಳ್ಳಿದೆ ಮತ್ತು ಸಕ್ರಿಯ ಕ್ಯಾಸೆಲೋಡ್ 16,279 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಬುಧವಾರ ತಿಳಿಸಿವೆ. 32 ಸಾವುಗಳೊಂದಿಗೆ ಸಾವಿನ ಸಂಖ್ಯೆ 5,23,654 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ಡೇಟಾವನ್ನು ನವೀಕರಿಸಲಾಗಿದೆ. ಸಕ್ರಿಯ ಪ್ರಕರಣಗಳು ಒಂದು ದಿನದಲ್ಲಿ 643 ರಷ್ಟು ಹೆಚ್ಚಾಗಿದೆ ಮತ್ತು ಒಟ್ಟು ಸೋಂಕುಗಳ 0.04 […]

Advertisement

Wordpress Social Share Plugin powered by Ultimatelysocial