ಮೈಗ್ರೇನ್ ಗೆ ಅತ್ಯುತ್ತಮ ಮದ್ದು ತುಪ್ಪ.

ಮೈಗ್ರೇನ್ ತಲೆನೋವಿನ ಕಿರಿಕಿರಿ ಅನುಭವಿಸಿದವರಿಗೇ ಗೊತ್ತು. ಆ ನೋವು ಸಹಿಸಲಸಾಧ್ಯ. ಈ ನೋವಿನ ತೀವ್ರತೆಯನ್ನು ಕಡಿಮೆ ಮಾಡಬಲ್ಲ ಕೆಲವಷ್ಟು ಮನೆಮದ್ದುಗಳು ಇಲ್ಲಿವೆ.ಒತ್ತಡದಿಂದ ಸಾಧ್ಯವಾದಷ್ಟು ದೂರವಿರಿ. ಬದುಕಿನಲ್ಲಿ ಎದುರಾಗಿದ್ದೆಲ್ಲವನ್ನೂ ಸಲೀಸಾಗಿ ಎದುರಿಸುವುದನ್ನು ಕಲಿಯಿರಿ.ಮೈಗ್ರೇನ್ ಗೆ ತುಪ್ಪ ಅತ್ಯುತ್ತಮ ಮದ್ದು. ತುಪ್ಪವನ್ನು ಕರಗಿಸಿ 2 ಹನಿ ತುಪ್ಪವನ್ನು ಮೂಗಿನ ಹೊಳ್ಳೆಗೆ ಬಿಡಿ. ದಿನದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಸಾಕು ಮೈಗ್ರೇನ್ ಕಡಿಮೆಯಾಗುತ್ತದೆ.ತುಪ್ಪದಲ್ಲಿ ಕಡಿಮೆ ಕೊಬ್ಬು ಇದ್ದು ಬೇಗ ಜೀರ್ಣವಾಗುತ್ತದೆ. ದೇಹ ತೂಕ ಇಳಿಸಲು ಮತ್ತು ಮೆದುಳನ್ನು ಚಟುವಟಿಕೆಯಿಂದ ಇಡಲು ಇದು ನೆರವಾಗುತ್ತದೆ.ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರು ಕುಡಿದರೆ ಮೈಗ್ರೇನ್ ಬರದಂತೆ ನೋಡಿಕೊಳ್ಳಬಹುದು. ನಿರ್ಜಲೀಕರಣ ಈ ತಲೆನೋವಿಗೆ ಪ್ರಮುಖ ಕಾರಣ. ಪ್ರತಿನಿತ್ಯ ಏಳರಿಂದ ಎಂಟು ಗಂಟೆ ನಿದ್ದೆ ಮಾಡಿ. ನಿದ್ದೆ ಕಡಿಮೆಯಾದಂತೆ ಮೈಗ್ರೇನ್ ಅಪಾಯ ಹೆಚ್ಚು. ನಿತ್ಯ ಅರ್ಧಗಂಟೆಯನ್ನು ವ್ಯಾಯಾಮಕ್ಕಾಗಿ ಮೀಸಲಿಡಿ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆಯಿಂದ ದೂರವಿರಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್. ಕಲ್ಯಾಣಮ್ಮ ಸ್ತ್ರೀಸಮಾಜದ ಮತ್ತು ಮಕ್ಕಳ ಏಳಿಗೆಗಾಗಿ ಅವಿರತವಾಗಿ ದುಡಿದ ಮಹನೀಯೆ.

Sun Feb 26 , 2023
ಕಲ್ಯಾಣಮ್ಮನವರು ಸ್ತ್ರೀಸಮಾಜದ ಮತ್ತು ಮಕ್ಕಳ ಏಳಿಗೆಗಾಗಿ ಅವಿರತವಾಗಿ ದುಡಿದ ಮಹನೀಯೆ.ಕಲ್ಯಾಣಮ್ಮನವರು 1892 ವರ್ಷದಲ್ಲಿ ಬೆಂಗಳೂರಿನ ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್. ತಾಯಿ ಜಾನಕಮ್ಮ.ಕಲ್ಯಾಣಮ್ಮನವರಿಗೆ ಕೇವಲ ಹತ್ತು ವರ್ಷ ವಯಸ್ಸಿನಲ್ಲಿಯೇ ವಿವಾಹವಾಯಿತು. ಮೂರೇ ತಿಂಗಳಿನಲ್ಲಿ ವಿಧವೆಯಾದರು. ದುರ್ದೈವಕ್ಕೆ ಅಂಜದೆ ಧೈರ್ಯದಿಂದ ಬದುಕಿನತ್ತ ಕ್ರಿಯಾಶೀಲ ನೋಟವನ್ನು ಹರಿಸಿದ ಅವರು ಪ್ರಗತಿಶೀಲ ವಿಚಾರವಂತ ಮನೋಧರ್ಮವನ್ನು ಎತ್ತಿಹಿಡಿದರು. ಹಲವು ವಿರೋಧಗಳ ನಡುವೆಯಯೂ 1906ರಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಸಂಸ್ಕೃತ, […]

Advertisement

Wordpress Social Share Plugin powered by Ultimatelysocial