ಖಾನಾಪುರ: ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಖಾನಾಪುರ: ತಾಲ್ಲೂಕಿನ ರಾಜವಾಳಾ ಗೌಳಿವಾಡಾ ಶಾಲೆಯ ಶಿಕ್ಷಕರ ವಿರುದ್ಧ ಶನಿವಾರ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಗೌಳಿವಾಡಾ ಶಾಲೆಯ ಮುಂಭಾಗದಲ್ಲಿ ಶಾಲೆಯ ವಿದ್ಯಾರ್ಥಿಗಳು ನಿಂತು ಶನಿವಾರ ಮಧ್ಯಾಹ್ನ 12ರವರೆಗೆ ಶಾಲೆ ಇದ್ದರೂ ಶಿಕ್ಷಕರು ಬೇಗ ಕೊಠಡಿಗಳಿಗೆ ಬೀಗ ಜಡಿದು ತೆರಳಿದ್ದನ್ನು ಖಂಡಿಸಿದ ದೃಶ್ಯಗಳು ಹರಿದಾಡುತ್ತಿವೆ.1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಶಿಕ್ಷಕರು ನಿಯಮಿತವಾಗಿ ಶಾಲೆಗೆ ಬರುವುದಿಲ್ಲ, ಮಧ್ಯಾಹ್ನ ಬೇಗ ಮನೆಗೆ ತೆರಳುತ್ತಾರೆ, ಶಾಲಾ ಅವಧಿಯಲ್ಲಿ ವರ್ಗ ಕೊಠಡಿಯಲ್ಲಿ ಹಾಸಿಗೆ ಹಾಸಿ ಮಲಗುತ್ತಾರೆ. ತಮಗೆ ಶೌಚಾಲಯ ತೊಳೆಯುವಂತೆ, ನೀರು ತರುವಂತೆ ಕೆಲಸ ಹೇಳುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.ಇಂಥ ಬೇಜವಾಬ್ದಾರಿ ಶಿಕ್ಷಕರಿಂದ ತಮ್ಮ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. ಕರ್ತವ್ಯಲೋಪ ಎಸಗುತ್ತಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡು ಬೇರೆ ಶಿಕ್ಷಕರ ವ್ಯವಸ್ಥೆ ಮಾಡುವಂತೆ ಹೇಳುವ ದೃಶ್ಯಗಳಿವೆ. ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಿರಾಜ್ ಗೆ ಕೊಹ್ಲಿ ಕೊಟ್ಟ ಸರ್ಪ್ರೈರ್ಸ್ ಎಂಥದ್ದು ಗೊತ್ತಾ..?

Mon Feb 21 , 2022
ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಗೆ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ವಿಶೇಷವಾದ ಒಡನಾಟವಿದೆ.ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಹೈದರಾಬಾದ್ ಬೌಲರ್‌ ಗೆ ಕೊಹ್ಲಿ ನೀಡಿದ ಪ್ರೋತ್ಸಾಹ ಮತ್ಯಾರು ನೀಡಿಲ್ಲ.ಕಷ್ಟದ ಸಮಯದಲ್ಲಿ ಕೊಹ್ಲಿ ನನಗೆ ಬೆಂಬಲವಾಗಿ ನಿಂತಿದ್ದರು ಎಂದು ಸಿರಾಜ್ ಈಗಾಗಲೇ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.ಐಪಿಎಲ್ ಮೆಗಾ ಹರಾಜು-2022 ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ. ವಿರಾಟ್ ಕೊಹ್ಲಿ […]

Advertisement

Wordpress Social Share Plugin powered by Ultimatelysocial