ಬಾಂಗ್ಲಾದೇಶಕ್ಕೆ ಕಡಿಮೆ ದರದಲ್ಲಿ ವಿದ್ಯುತ್ ಸರಬರಾಜು.

ದಾನಿ ಪವರ್‌ ಬಾಂಗ್ಲಾದೇಶಕ್ಕೆ ಕಡಿಮೆ ದರದಲ್ಲಿ ವಿದ್ಯುತ್‌ ಅನ್ನು ಸರಬರಾಜು ಮಾಡಲಿದೆ ಎಂದು ವರದಿಯಾಗಿದೆ. ಈ ಹಿಂದೆ ಬಾಂಗ್ಲಾ ನಿರ್ವಹಣೆ ಮಾಡುವ ವಿದ್ಯುತ್ ಅಭಿವೃದ್ಧಿ ಮಂಡಳಿಯಾದ ಆದ ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿ (ಬಿಡಿಡಿಬಿ) ಜಾರ್ಖಂಡ್‌ನಲ್ಲಿರುವ ತನ್ನ ಉಷ್ಣ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಆಮದು ಮಾಡಿಕೊಳ್ಳಲು ಅದಾನಿ ಪವರ್‌ನೊಂದಿಗೆ ಮಾಡಿಕೊಂಡ ವಿದ್ಯುತ್ ಖರೀದಿ ಒಪ್ಪಂದವನ್ನು (ಪಿಪಿಎ) ಪರಿಷ್ಕರಿಸಲು ಹೇಳಿದೆ ಎಂದು ವರದಿಯಾಗಿದೆ.”ಬಾಂಗ್ಲಾದೇಶದ ಕಲ್ಲಿದ್ದಲು-ಚಾಲಿತ ಸ್ಥಾವರಗಳಿಂದ ಅದೇ ಬೆಲೆಗೆ ಅದಾನಿ ತನ್ನ ಸ್ಥಾವರಗಳಿಗೆ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತದೆ,” ಎಂದು ಅದಾನಿ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಬಾಂಗ್ಲಾದೇಶ ಮೂಲದ ಪ್ರೋಥೋಮ್ ಅಲೋ ಪತ್ರಿಕೆ ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. “ಬಾಂಗ್ಲಾದೇಶದ ಅದಾನಿ ಗುಂಪಿನ ಉನ್ನತ ಅಧಿಕಾರಿಯೊಬ್ಬರು ಪ್ರೋಥೋಮ್ ಅಲೋಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ,” ಎಂದು ಪತ್ರಿಕೆ ವರದಿ ಮಾಡಿದೆ. ಆದರೆ ಬಾಂಗ್ಲಾದೇಶದ ಅಧಿಕಾರಿಗಳು ನಿರಾಕರಿಸಿದ್ದಾರೆ.ಬಾಂಗ್ಲಾದೇಶ ನಿರ್ವಹಣೆ ಮಾಡುವ ಪವರ್ ಡೆವಲಪ್‌ಮೆಂಟ್ ಬೋರ್ಡ್ (ಪಿಡಿಬಿ) ಈ ತಿಂಗಳ ಆರಂಭದಲ್ಲಿ ಅದಾನಿ ಪವರ್ ಲಿಮಿಟೆಡ್‌ನೊಂದಿಗೆ 2017 ರ ವಿದ್ಯುತ್ ಖರೀದಿ ಒಪ್ಪಂದ ಪರಿಷ್ಕರಿಸಲು ಪ್ರಯತ್ನಿಸಿತ್ತು. ಏಕೆಂದರೆ ಕಲ್ಲಿದ್ದಲು-ಉತ್ಪಾದಿತ ವಿದ್ಯುತ್‌ನ ಬೆಲೆ ತುಂಬಾ ದುಬಾರಿಯಾಗಿದೆ. ಇನ್ನು ಭಾರತದ ಜಾರ್ಖಂಡ್‌ನಲ್ಲಿರುವ ಅದಾನಿ ಸ್ಥಾವರಕ್ಕಾಗಿ ಖರೀದಿಸಿದ ಕಲ್ಲಿದ್ದಲು ಬೆಲೆ ಹೆಚ್ಚಳದ ಬಗ್ಗೆ ಅದಾನಿ ಪವರ್ ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಸಂಧಾನಕ್ಕಾಗಿ ಐದು ಸದಸ್ಯರ ನಿಯೋಗವನ್ನು ಕಳುಹಿಸಿದೆ ಎಂದು ವರದಿಯಾಗಿದೆ.ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ 1,600 ಮೆಗಾವ್ಯಾಟ್ ಸ್ಥಾವರಕ್ಕೆ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಭಾರತದಲ್ಲಿ ಎಲ್‌ಸಿಗಳನ್ನು ತೆರೆಯುವ ವಿಚಾರವಾಗಿ ಅದಾನಿ ಪವರ್‌ ಮನವಿಯನ್ನು ಮಾಡಿದೆ. ಇದಾದ ಬೆನ್ನಲ್ಲೇ ಬಾಂಗ್ಲಾದೇಶವು ಬೆಲೆ ಪರಿಷ್ಕರಣೆಯನ್ನು ಕೋರಿದೆ ಎಂದು ವರದಿಯಾಗಿದೆ. ಅದಾನಿ ಪವರ್‌ಗೆ ಬಾಂಗ್ಲಾದೇಶದಿಂದ ಬೇಡಿಕೆಯ ಪಟ್ಟಿ ಲಭ್ಯವಾಗಬೇಕಾಗಿದೆ. ಈ ಬೇಡಿಕೆ ಪಟ್ಟಿಯನ್ನು ಕಲ್ಲಿದ್ದಲು ಆಮದಿನ ವಿರುದ್ಧ ಎಲ್‌ಸಿಗಳನ್ನು ತೆರೆಯುವ ಮೊದಲು ಭಾರತೀಯ ಅಧಿಕಾರಿಗಳಿಗೆ ಪ್ರಸ್ತುತಪಡಿಸಲಾಗುತ್ತದೆ.ಬಾಂಗ್ಲಾದೇಶವು ಪ್ರಸ್ತುತ ಭಾರತದಿಂದ 1,160MW ವಿದ್ಯುಚ್ಛಕ್ತಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ 2017 ರ ಒಪ್ಪಂದದ ಪ್ರಕಾರ ಅದಾನಿ ಪವರ್ ಲಿಮಿಟೆಡ್‌ನಿಂದ 25 ವರ್ಷಗಳವರೆಗೆ ವಿದ್ಯುತ್ ಖರೀದಿಸಲಿದೆ. ಇದು ಈ ವರ್ಷದ ಮಾರ್ಚ್‌ನಿಂದ ವಿದ್ಯುತ್ ಪಡೆಯುವುದನ್ನು ಪ್ರಾರಂಭಿಸುತ್ತದೆ. ಅದಾನಿ ಗ್ರೂಪ್‌ನ ಷೇರು ಬೆಲೆಗಳು ಇತ್ತೀಚೆಗೆ ಭಾರೀ ಇಳಿಕೆಯಾಗಿದೆ. ಸಂಸ್ಥೆಯ ವಿರುದ್ಧ ಹಿಂಡನ್‌ಬರ್ಗ್ ವಂಚನೆಯ ಆರೋಪ ಮಾಡಿದ ಬಳಿಕ ಹೂಡಿಕೆದಾರರಿಗೆ ಭಾರೀ ನಷ್ಟ ಉಂಟಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

Delhi Liquor Policy Case: ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ವಿಚಾರಣೆ ನಡೆಸುತ್ತಿರುವ ಸಿಬಿಐ, ಬಂಧನವಾಗುತ್ತಾ?

Sun Feb 26 , 2023
  ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi Liquor Policy Case) ಸಂಬಂದಿಸಿದಂತೆ ಕೇಂದ್ರ ತನಿಖಾ ದಳ(CBI) ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಭಾನುವಾರ ವಿಚಾರಣೆಗೊಳಪಡಿಸುತ್ತಿದೆ. ಆಪ್‌ ಬೆಂಬಲಿಗರ ಭಾರೀ ಬೆಂಬಲದೊಂದಿಗೆ ಸಿಸೋಡಿಯಾ (Manish Sisodia) ಅವರು ಭಾನುವಾರ ದಿಲ್ಲಿಯ ಸಿಬಿಐ ಪ್ರಧಾನ ಕಚೇರಿಗೆ ಬೆಳಗ್ಗೆ ಆಗಮಿಸಿದರು. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಈ ಹಿಂದೆ ಸಿಬಿಐ ನೋಟಿಸ್ ನೀಡಿತ್ತು. ಇದೇ ವೇಳೆ, ಮುಂದಿನ ಏಳೆಂಟು ತಿಂಗಳು ದೂರ […]

Advertisement

Wordpress Social Share Plugin powered by Ultimatelysocial