LEGENF LEGUE: ಫೈನಲ್ ತಲುಪಲು ಇದೊಂದೇ ದಾರಿ;

ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿರುವ ವಿಶ್ವದ ಹಲವಾರು ಮಾಜಿ ಕ್ರಿಕೆಟಿಗರು ಮತ್ತೊಮ್ಮೆ ಮೈದಾನದಲ್ಲಿ ಸೆಣಸಾಡುವುದನ್ನು ನೋಡಲು ಕಾಯುತ್ತಿದ್ದ ಕ್ರಿಕೆಟ್ ಪ್ರೇಕ್ಷಕರಿಗೆ ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಮನರಂಜನೆಯನ್ನು ತಂದಿದೆ ಎಂದು ಹೇಳಬಹುದು.

ಈ ಟೂರ್ನಿಯಲ್ಲಿ 3 ತಂಡಗಳಾದ ಇಂಡಿಯಾ ಮಹಾರಾಜಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳು ಕಣಕ್ಕಿಳಿಯುತ್ತಿದ್ದು ಟೂರ್ನಿಯ ಮೊದಲನೇ ಪಂದ್ಯ ಜನವರಿ 20ರಂದು ಆರಂಭವಾಗಿದ್ದು ಅಂತಿಮ ಪಂದ್ಯ ಜನವರಿ 29ರಂದು ನಡೆಯಲಿದೆ.

ಇಂಡಿಯಾ ಮಹಾರಾಜಸ್ ತಂಡ ಭಾರತದ ನಿವೃತ್ತ ಕ್ರಿಕೆಟಿಗರನ್ನು ಒಳಗೊಂಡ ತಂಡವಾಗಿದ್ದರೆ, ಏಷ್ಯಾ ಲಯನ್ಸ್ ಭಾರತದ ಕ್ರಿಕೆಟಿಗರನ್ನು ಹೊರತುಪಡಿಸಿ ಏಷ್ಯಾ ಖಂಡದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿದೆ ಹಾಗೂ ವರ್ಲ್ಡ್ ಜಿಯಂಟ್ಸ್ ಏಷ್ಯಾ ಖಂಡವನ್ನು ಹೊರತುಪಡಿಸಿ ವಿಶ್ವದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ.

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡುತ್ತಿದ್ದು, ಟೂರ್ನಿಯ ಲೀಗ್ ಹಂತದ 5 ಪಂದ್ಯಗಳು ಈಗಾಗಲೇ ಮುಗಿದಿದ್ದು, ಆರನೇ ಪಂದ್ಯ ಇಂದು ( ಜನವರಿ 27 ) ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳ ನಡುವೆ ರಾತ್ರಿ 8 ಗಂಟೆಗೆ ನಡೆಯಲಿದೆ. ಇದು ಟೂರ್ನಿಯ ಲೀಗ್ ಹಂತದ ಅಂತಿಮ ಪಂದ್ಯವಾಗಿದ್ದು, ಈ ಪಂದ್ಯದ ಫಲಿತಾಂಶವು ಟೂರ್ನಿಯಲ್ಲಿ ಯಾವ ತಂಡಗಳು ಫೈನಲ್ ಪ್ರವೇಶಿಸಲಿವೆ ಎಂಬುದನ್ನು ನಿರ್ಧರಿಸಲಿದೆ. ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವರ್ಲ್ಡ್ ಜಿಯಂಟ್ಸ್ ತಂಡ ಫೈನಲ್ ಪ್ರವೇಶಿಸುವುದು ಖಚಿತವಾಗಿದ್ದು, ಇನ್ನುಳಿದ ಏಷ್ಯಾ ಲಯನ್ಸ್ ಮತ್ತು ಇಂಡಿಯಾ ಮಹಾರಾಜಾಸ್ ತಂಡಗಳಲ್ಲಿ ಯಾವ ತಂಡ ಫೈನಲ್ ಪ್ರವೇಶಿಸಲಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ಓದಿ.

ಜನವರಿ 26ರಂದು ನಡೆದ ವರ್ಲ್ಡ್ ಜಿಯಂಟ್ಸ್ ಮತ್ತು ಏಷ್ಯಾ ಲಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ವರ್ಲ್ಡ್ ಜಿಯಂಟ್ಸ್ 7 ವಿಕೆಟ್‍ಗಳ ಭರ್ಜರಿ ಗೆಲುವನ್ನು ಸಾಧಿಸಿದ ನಂತರ ಅಂಕಪಟ್ಟಿಯಲ್ಲಿ 3 ತಂಡಗಳು ಈ ಕೆಳಕಂಡಂತೆ ಸ್ಥಾನ ಪಡೆದುಕೊಂಡಿವೆ.

ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 3 ಪಂದ್ಯಗಳನ್ನಾಡಿರುವ ವರ್ಲ್ಡ್ ಜಿಯಂಟ್ಸ್ 2 ಪಂದ್ಯಗಳಲ್ಲಿ ಗೆದ್ದು, ಉಳಿದೊಂದು ಪಂದ್ಯದಲ್ಲಿ ಸೋತಿದ್ದು, 4 ಅಂಕಗಳೊಂದಿಗೆ +1.244 ನೆಟ್ ರನ್ ರೇಟ್ ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅತ್ತ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 4 ಪಂದ್ಯಗಳನ್ನಾಡಿರುವ ಏಷ್ಯಾ ಲಯನ್ಸ್ 2 ಪಂದ್ಯಗಳಲ್ಲಿ ಗೆದ್ದು, ಉಳಿದೆರಡು ಪಂದ್ಯಗಳಲ್ಲಿ ಸೋತು, 4 ಅಂಕಗಳೊಂದಿಗೆ -0.452 ನೆಟ್ ರನ್ ರೇಟ್ ಪಡೆದುಕೊಂಡು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಹಾಗೂ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 3 ಪಂದ್ಯಗಳನ್ನಾಡಿರುವ ಇಂಡಿಯಾ ಮಹಾರಾಜಾಸ್ 1 ಪಂದ್ಯದಲ್ಲಿ ಗೆದ್ದು, ಉಳಿದೆರಡು ಪಂದ್ಯಗಳಲ್ಲಿ ಸೋತು, 2 ಅಂಕಗಳನ್ನು ಪಡೆದುಕೊಳ್ಳುವುದರ ಜತೆಗೆ -0.503 ನೆಟ್ ರನ್ ರೇಟ್ ಹೊಂದಿ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊಣಕಾಲು ಕೀಲು ನೋವುಗಳು ಮತ್ತು ಎಲೆಯೊಂದಿಗೆ ಎಲ್ಲಾ ಸಾಮಾನ್ಯ ಸಣ್ಣ ದೇಹದ ನೋವುಗಳಿಗೆ ಸರಳ ನೈಸರ್ಗಿಕ ಪರಿಹಾರ

Thu Jan 27 , 2022
ಆಂಧ್ರಪ್ರದೇಶದ ಗ್ರಾಮಾಂತರದಲ್ಲಿ ಪೊದೆಯಂತೆ ಬೆಳೆಯುವ ವಾವಿಲಿ ಗಿಡದ ಎಲೆಗಳನ್ನು ಜನರು ಸಂಗ್ರಹಿಸುತ್ತಾರೆ. ನೀವು ಅದನ್ನು ಬಿಸಿ ನೀರಿನಲ್ಲಿ ಕುದಿಸಿದರೆ, ದ್ರವವು ನೋವು ನಿವಾರಕ ಗುಣಗಳನ್ನು ಹೊಂದಿದೆ. ಮಗುವಿನ ಹೆರಿಗೆಗೆ ಒಳಗಾದ ಮಹಿಳೆಯರಿಗೆ ಸ್ನಾನ ಮಾಡುವಾಗ ಸಾರವನ್ನು ಹೆಚ್ಚಾಗಿ ಬಳಸಲಾಗುತ್ತದೆ, ಇದರಿಂದಾಗಿ ಅವರು ಹೆರಿಗೆಯ ಸಮಯದಲ್ಲಿ ಅವರು ಹೊಂದಿದ್ದ ಸಾಮಾನ್ಯ ದೇಹದ ನೋವಿನಿಂದ ಪರಿಹಾರವನ್ನು ಪಡೆಯುತ್ತಾರೆ. ಕೀಲು ನೋವನ್ನು ನಿವಾರಿಸಲು ಅಸ್ಥಿಸಂಧಿವಾತದಿಂದ ಬಳಲುತ್ತಿರುವವರಿಗೂ ಇದನ್ನು ಬಳಸಲಾಗುತ್ತದೆ. ಈ ಆಯುರ್ವೇದ ಮೂಲಿಕೆಗೆ ಇತರ […]

Advertisement

Wordpress Social Share Plugin powered by Ultimatelysocial