ಗಿರಿಜಾ ಲೋಕೇಶ್ ಹುಟ್ಟುಹಬ್ಬದ ಸಂಭ್ರಮ

ನಟಿ ಗಿರಿಜಾ ಲೋಕೇಶ್ ಅವರು ಜನವರಿ 10, 1951 ರಂದು ಜನಿಸಿದ್ದಾರೆ.ರಂಗಭೂಮಿ ಕಲಾವಿದರಾಗಿ, ಸಿನಿಮಾ ಲೋಕದಲ್ಲಿ ಮಿಂಚಿದ್ದಾರೆ. ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ.ಗಿರಿಜಾ ಲೋಕೇಶ್ ಕನ್ನಡದ ಹೆಸರಾಂತ ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆ ನಟಿ. ಕಾಕನ ಕೋಟೆ, ದಾಹ, ಭುಜಂಗಯ್ಯನ ದಶಾವತಾರ ಮತ್ತು ಯಾರಿಗೂ ಹೇಳ್ಬೇಡಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಗಿರಿಜಾ ಲೋಕೇಶ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡು ಸ್ಮರಣೀಯ ಅಭಿನಯ ಮಾಡಿದ್ದಾರೆ. ಗಿರಿಜಾ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ.ಚಿತ್ರರಂಗಕ್ಕೆ ಬರುವುದಕ್ಕಿಂತ ಮೊದಲೇ ರಂಗಭೂಮಿ ಕಲಾವಿದೆಯಾಗಿರುವ ಗಿರಿಜಾ ಪ್ರಭಾತ್ ಶಿಶುವಿಹಾರ, ರಂಗಸಂಪದ, ನಟರಂಗ ಮುಂತಾದ ಜನಪ್ರಿಯ ತಂಡಗಳಲ್ಲಿ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಕನ್ನಡವಲ್ಲದೇ ಉರ್ದು, ತಮಿಳು, ತೆಲುಗು, ಮಲಯಾಳಂ ನಾಟಕಗಳಲ್ಲೂ ನಟಿಸಿದ್ದಾರೆ. ಗಿರಿಜಾ ಅಭಿನಯದ ಕಿರುತೆರೆ ಧಾರಾವಾಹಿಗಳ ಸಂಖ್ಯೆ 300 ದಾಟುತ್ತದೆ.ವೈಶಾಲಿ ಕಾಸರವಳ್ಳಿ ನಿರ್ದೇಶನದ ಮುತ್ತಿನ ತೋರಣ ಗಿರಿಜಾ ಅವರ ಪ್ರತಿಭೆಯನ್ನು ಒರೆಗೆ ಹಚ್ಚಿದ ಧಾರಾವಾಹಿ. ಭುಜಂಗಯ್ಯನ ದಶಾವತಾರ ಮತ್ತು ಸಿದ್ಲಿಂಗು ಚಿತ್ರಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಪೆÇೀಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.ಗಿರಿಜಾ ಅವರ ಪತಿ ಕನ್ನಡದ ಮೇರುನಟ ದಿವಂಗತ ಲೋಕೇಶ್. ಪ್ರಖ್ಯಾತ ಕಿರುತೆರೆ ಮತ್ತು ಚಲನಚಿತ್ರ ನಟ ಸೃಜನ್ ಲೋಕೇಶ್ ಮತ್ತು ನಟಿ ಪೂಜಾ ಲೋಕೇಶ್ ಈ ದಂಪತಿಯ ಮಕ್ಕಳು.ಸದ್ಯ ಸತ್ಯ ಧಾರಾವಾಹಿಯಲ್ಲಿ ನಟಿಯ ಅಜ್ಜಿಯ ಪಾತ್ರ ಮಾಡುತ್ತಿದ್ದಾರೆ. ಆ ಪಾತ್ರದಲ್ಲೂ ಗಿರಿಜಮ್ಮ ಎಲ್ಲರ ಗಮನ ಸೆಳೆದಿದ್ದಾರೆ. ಈಗಲೂ ಸಹ ನಟನೆ ಅಂದ್ರೆ ಅವರಿಗೆ ತುಂಬಾ ಇಷ್ಟ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾವುದೇ ಶುಲ್ಕ ಪಾವತಿಸಬೇಕಿಲ್ಲ!

Tue Jan 10 , 2023
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಪ್ರಯಾಣಿಕರ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಇನ್ಮುಂದೆ ಸಾಮಾನ್ಯ ಟಿಕೆಟ್‌ ಪಡೆದು ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸಬಹುದು. ವಿಶೇಷವೆಂದರೆ ಇದಕ್ಕಾಗಿ ನೀವು ಒಂದೇ ಒಂದು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.ಬಡವರು ಮತ್ತು ವೃದ್ಧರಿಗಾಗಿ ಮಹತ್ವದ ನಿರ್ಧಾರ.ದೇಶದಾದ್ಯಂತ ಕಠಿಣ ಚಳಿಗಾಲದ ಹಿನ್ನೆಲೆಯಲ್ಲಿ, ಭಾರತೀಯ ರೈಲ್ವೆ ಈ ನಿರ್ಧಾರ ಕೈಗೊಂಡಿದೆ. ಸಾಮಾನ್ಯ ಟಿಕೆಟ್ ತೆಗೆದುಕೊಳ್ಳುವ ಪ್ರಯಾಣಿಕರು ಸಹ ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸಬಹುದು. ವೃದ್ಧರು ಮತ್ತು ಬಡವರನ್ನು ಗಮನದಲ್ಲಿಟ್ಟುಕೊಂಡು […]

Advertisement

Wordpress Social Share Plugin powered by Ultimatelysocial