ಭಾರತ ಸೇರಿ ವಿಶ್ವಾದ್ಯಂತ ಜಿಮೇಲ್‌ ಡೌನ್‌, ವಾರದಲ್ಲಿ 2ನೇ ಬಾರಿ ಬಳಕೆದಾರರಿಗೆ ತೊಂದರೆ,

ನವದೆಹಲಿ: ಇ-ಮೇಲ್‌ ಸೇವೆ ಒದಗಿಸುವ ಜಾಗತಿಕ ದೈತ್ಯ ಜಿಮೇಲ್‌ ಭಾರತ ಸೇರಿ ಜಗತ್ತಿನಾದ್ಯಂತ ಡೌನ್‌  ಆಗಿದೆ.ಇದರಿಂದಾಗಿ ಕಾರ್ಪೊರೇಟ್‌ ಕಂಪನಿಗಳು ಎಲ್ಲ ಬಳಕೆದಾರರಿಗೆ ಭಾರಿ ತೊಂದರೆಯಾಗಿದೆ. ಅದರಲ್ಲೂ, ವಾರದಲ್ಲಿಯೇ ಎರಡನೇ ಬಾರಿ ಜಿಮೇಲ್‌ ಡೌನ್‌ ಆದ ಕಾರಣ ಬಳಕೆದಾರರಿಗೆ ಕಿರಿಕಿರಿಯಾಗಿದೆ.ಶೇ.೬೦ರಷ್ಟು ಬಳಕೆದಾರರಿಗೆ ಗೂಗಲ್‌ ವೆಬ್‌ಸೈಟ್‌ನಲ್ಲಿ ತೊಂದರೆಯಾದರೆ, ಶೇ.೩೫ರಷ್ಟು ಜನರಿಗೆ ಲಾಗ್‌ ಇನ್‌ ತೊಂದರೆಯಾಗಿದೆ. ಇನ್ನೂ ಕೆಲವರಿಗೆ ಮೇಲ್‌ ಮಾಡುವಲ್ಲಿ ತೊಂದರೆಯಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಗೂಗಲ್‌ ಸಂಸ್ಥೆಯಿಂದ ಇದರ ಕುರಿತು ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಕೆಲ ದಿನಗಳ ಹಿಂದೆಯೂ ಜಿಮೇಲ್‌ ಡೌನ್‌ ಆಗಿತ್ತು.ಹೆಚ್ಚಿನ ಬಳಕೆದಾರರಿಗೆ ೫೦೨ ಎರರ್‌ ಕಾಣಿಸಿಕೊಂಡ ಕಾರಣ ಬಳಕೆದಾರರು ಟ್ವಿಟರ್‌ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ೫೦೨ ಎರರ್‌ನ ಸ್ಕ್ರೀನ್‌ಶಾಟ್‌ ಫೋಟೊ ಪೋಸ್ಟ್‌ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊಬೈಲ್‌ ಹಾಗೂ ಕಂಪ್ಯೂಟರ್‌ನಲ್ಲಿ ಬಳಕೆ ಮಾಡುವ ಜಿಮೇಲ್‌ ಗ್ರಾಹಕರಿಗೆ ತೊಂದರೆಯಾಗಿದೆ ಎಂದು ತಿಳಿದುಬಂದಿದೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ತುಂಗಭದ್ರಾ ಜಲಾಶಯಕ್ಕೆ ನೀರು ರೈತರ ವಿರೋಧ.

Tue Feb 28 , 2023
  ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ೭ ಟಿಎಂಸಿ ನೀರು ಹರಿಸುವುದನ್ನು ವಿರೋಧಿಸಿ ಭಾರತೀಯ ರೈತ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು ನಗರದ ಹಳೇ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇ ಶ್ವರ ದೇವಸ್ಥಾನದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷರಾದ ಎಚ್.ಆರ್. ಲಿಂಗರಾಜ್ ಶಾಮನೂರು ಮಾತನಾಡಿ ತುಂಗಭದ್ರಾ ಜಲಾಶಯ ಭಾಗದ ಶಾಸಕರು, ಸಂಸದರು, ಜನ […]

Advertisement

Wordpress Social Share Plugin powered by Ultimatelysocial