ಪ್ರೊ. ಸಿ. ಎನ್. ರಾಮಚಂದ್ರನ್ ಮಹಾನ್ ವಿದ್ವಾಂಸರು

ರಾಮಚಂದ್ರನ್ 1936ರ ಜನವರಿ 8ರಂದು ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ ಜನಿಸಿದರು. ತಂದೆ ನಾಗಪ್ಪ ಶಾಸ್ತ್ರಿ, ತಾಯಿ ಪದ್ಮಾವತಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಅಲ್ಲದೆ ನ್ಯಾಯಶಾಸ್ತ್ರದಲ್ಲಿ ಎಲ್.ಎಲ್.ಬಿ. ಪದವಿಯನ್ನು ಪಡೆದರು. ಮುಂದೆ ಅವರು ಅಮೆರಿಕದ ಮಿಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಗಳಿಸಿದರು.
ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ರಾಮಚಂದ್ರನ್ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, 1996ರಲ್ಲಿ ಪ್ರೊಫೆಸರ್ ಎಮಿರೆಟಸ್ ಆಗಿ ನಿವೃತ್ತರಾದರು.
ಸಿ.ಎನ್.ಆರ್. ಅವರು ದೆಹಲಿ, ಸ್ಯಾನ್‌ಫ್ರಾನ್ಸಿಸ್ಕೋ, ಟೋಕಿಯೋ, ತುರ್ಕಿ, ಸೇರಿದಂತೆ ದೇಶವಿದೇಶಗಳ ಅನೇಕ ಪ್ರಮುಖ ವಿಚಾರಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿ ಖ್ಯಾತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಬರೆಯುವ ಕನ್ನಡದ ಕೆಲವೇ ಕೆಲವು ಶ್ರೇಷ್ಠರಲ್ಲಿ ಸಿಎನ್‌ಆರ್ ಒಬ್ಬರು. ವಿದೇಶಗಳಲ್ಲಿ ಬಹಳ ವರ್ಷಗಳ ಕಾಲ ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮತ್ತು ಅಧ್ಯಾಪನ ಮಾಡಿದವರಾದರೂ ಪ್ರೊ. ಸಿ. ಎನ್. ರಾಮಚಂದ್ರನ್ ಕನ್ನಡದ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯ ಕೃತಿಗಳನ್ನು ಮೂಲರೂಪದಲ್ಲಿ ಪೂರ್ಣಪ್ರಮಾಣದಲ್ಲಿ ಅಧ್ಯಯನ ಮಾಡಿ, ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸಜೀವ ಕೊಟ್ಟ ಬಗೆ ಅಚ್ಚರಿಹುಟ್ಟಿಸುವಂತದ್ದಾಗಿದೆ. ಕನ್ನಡದ ಲಿಖಿತ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಿರುವ ಸಿ.ಎನ್.ಆರ್, ಕನ್ನಡ ಮೌಖಿಕ ಪರಂಪರೆಯ ಜನಪದ ಮಹಾಕಾವ್ಯಗಳನ್ನು ವ್ಯಾಪಕವಾಗಿ ಅಭ್ಯಾಸಮಾಡಿ, ಜಾನಪದದ ವಿನ್ಯಾಸಗಳನ್ನು ಮತ್ತು ಚಿಂತನೆಗಳನ್ನು ತಮ್ಮ ಸಾಹಿತ್ಯವಿಮರ್ಶೆಯ ಆಲೋಚನಾ ಕ್ರಮದ ಜೊತೆಗೆ ಸೇರಿಸಿಕೊಂಡವರು.
ರಾಮಚಂದ್ರನ್ ಅವರ ವಿಮರ್ಶಾ ಕೃತಿಗಳಲ್ಲಿ ಶಿಲ್ಪ ವಿನ್ಯಾಸ, ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು, ಭಾಷಾಂತರ: ಸೈದ್ಧಾಂತಿಕ ಮತ್ತು ಅನ್ವಯಿಕ ನೆಲೆಗಳು, ಡಾ. ಯು. ಆರ್. ಅನಂತಮೂರ್ತಿ ಮತ್ತು ಡಾ.ಎಸ್. ಎಲ್. ಭೈರಪ್ಪ ಕಥನ ಮತ್ತು ತಾತ್ವಿಕತೆ, ಆಶಯ- ಆಕೃತಿ, ರಕ್ತಿ – ರೂಪಣೆ, ಆಖ್ಯಾನ -ವ್ಯಾಖ್ಯಾನ ಮುಂತಾದವು ಸೇರಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿತ್ರಕಲಾ ಪರಿಷತ್ತು ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು: ಸಿಎಂ ಬೊಮ್ಮಾಯಿ.

Sun Jan 8 , 2023
ಬೆಂಗಳೂರು, ಜನವರಿ 08: ಚಿತ್ರ ಕಲಾ ಪರಿಷತ್ತು ಅತ್ಯಂತ ವಿಶಿಷ್ಟ ಸಂಸ್ಥೆಯಾಗಿದ್ದು, ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತು ಹಾಗೂ ಉನ್ನತ ಶಿಕ್ಷಣ ಇಲಾಖೆ ಸಹಯೋದಲ್ಲಿ ಆಯೋಜಿಸಿರುವ 20 ನೇ ಚಿತ್ರಸಂತೆಯನ್ನು ಉದ್ಘಾಟಿಸಿ ಮಾತನಾಡಿದರು. ಎನ್.ಎಸ್.ಡಿ ದೆಹಲಿಯಲ್ಲಿ ಅತ್ಯಂತ ಉನ್ನತ ಸ್ಥಾನವನ್ನು ಪಡೆದಿದೆ. ಬೆಂಗಳೂರಿಗೆ ಸೀಮಿತವಾಗದೆ ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆಯನ್ನು ಕಟ್ಟಲು […]

Advertisement

Wordpress Social Share Plugin powered by Ultimatelysocial