ಗೂಗಲ್ ಸಿಇಒ:ಪದ್ಮ ಭೂಷಣ ಪ್ರಶಸ್ತಿಗೆ ಭಾಜರಾದ ಸುಂದರ್ ಪಿಚೈ;

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ವಿವಿಧ ಕ್ಷೇತ್ರಗಳ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಪ್ರಸಕ್ತ 2022 ಸಾಲಿನಲ್ಲಿ ಒಟ್ಟು 128 ಜನರಿಗೆ ಪದ್ಮಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತಂತ್ರಜ್ಞಾನ ವಲಯದಲ್ಲಿ ಭಾರತೀಯ ಮೂಲದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾರತದಲ್ಲಿ ಪದ್ಮ ಪ್ರಶಸ್ತಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಈ ಮೂರು ವಿಭಾಗಗಳಲ್ಲಿ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಸೇರಿದಂತೆ ಒಟ್ಟು 128 ಸಾಧಕರಿಗೆ ಪ್ರಶಸ್ತಿ ಗೌರವ ಸಿಗಲಿದೆ.

ಹಾಗೆಯೇ ಎಸ್‌ಐಐ ಎಂಡಿ ಸೈರಸ್ ಪೂನವಾಲಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಒಲಿಂಪಿಯನ್ ನೀರಜ್ ಚೋಪ್ರಾ, ಪ್ರಮೋದ್ ಭಗತ್, ವಂದನಾ ಕಟಾರಿಯಾ ಮತ್ತು ಗಾಯಕ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕರ್ನಾಟಕದ ಸುಬ್ಬಣ್ಣ ಅಯ್ಯಪ್ಪನ್ – ವಿಜ್ಞಾನ ಮತ್ತು ಎಂಜಿನಿಯರಿಂಗ್, ಎಚ್. ಆರ್. ಕೇಶವಮೂರ್ತಿ – ಧಾರವಾಡದ ಕೂರಿಗೆ ತಜ್ಞ ಕಲೆ, ಅಬ್ದುಲ್ ಖಾದರ್ ನಡಕಟ್ಟಿನ್ ಅವರಿಗೆ ಪದ್ಮಶ್ರೀ ಒಲಿದು ಬಂದಿದೆ. ನಡಕಟ್ಟಿನ್ ಅವರು ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ನಿವಾಸಿ. ಬಿತ್ತನೆ ಕೂರಿಗೆ ಸಂಶೋಧನೆ ಮಾಡಿದ್ದರು.

ಕಳೆದ ವರ್ಷ ನಿಧನರಾದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಸಾರ್ವಜನಿಕ ವ್ಯವಹಾರಗಳಿಗಾಗಿ ಪದ್ಮವಿಭೂಷಣ ಸ್ವೀಕರಿಸಲಿದ್ದಾರೆ. ದಿವಂಗತ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ನಾಗರಿಕ ಸೇವೆಗಾಗಿ ಪದ್ಮವಿಭೂಷಣ ಸ್ವೀಕರಿಸಲಿದ್ದಾರೆ. ಹಾಗೂ ಹಿಂದೂಸ್ತಾನೀ ಸಂಗೀತಕ್ಕೆ ವಿದುಷಿ ಪ್ರಭಾ ಅತ್ರ ಅವರಿಗೆ ಪದ್ಮವಿಭೂಷಣ ಪುರಸ್ಕಾರ ನೀಡಲಾಗುತ್ತಿದೆ. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಸಾರ್ವಜನಿಕ ವ್ಯವಹಾರಗಳಿಗಾಗಿ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭರ್ಜರಿ ಡಿಸ್ಕೌಂಟ್‌ನಲ್ಲಿ ಐಫೋನ್‌ SE ;

Wed Jan 26 , 2022
ಜನಪ್ರಿಯ ಇ ಕಾಮರ್ಸ್‌ ದೈತ್ಯ ಸಂಸ್ಥೆ ಆದ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ಆಫರ್‌ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಇನ್ನು ಗ್ರಾಹಕರು ಸಹ ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡುವಾಗ ಆನ್‌ಲೈನ್ ಸೇಲ್‌ ಮೇಳ, ರಿಯಾಯಿತಿ ಅಥವಾ ಎಕ್ಸ್‌ಚೇಂಜ್ ಕೊಡುಗೆಗಳ ಗಮನಿಸುತ್ತಾರೆ. ಹೀಗೆ ನೀವೇನಾದರೂ ಆಫರ್‌ನಲ್ಲಿ ಐಫೋನ್‌ SE ಫೋನ್ ಖರೀದಿಸುವ ಆಲೋಚನೆ ಹೊಂದಿದ್ದರೆ, ಅದಕ್ಕೆ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ಸದ್ಯ ಅತ್ಯುತ್ತಮ ತಾಣ ಎನಿಸಿವೆ. ಐಫೋನ್‌ ಹೌದು, ಫ್ಲಿಪ್‌ಕಾರ್ಟ್‌ ವೆಬ್‌ಸೈಟ್ […]

Advertisement

Wordpress Social Share Plugin powered by Ultimatelysocial