ಸರ್ಕಾರದ ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆ ಖಾಲಿ ಇವೆ?

 

 ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳ ಪೈಕಿ ಶೇ.34 ರಷ್ಟು ಅಂದರೆ 2,58,709 ಹುದ್ದೆಗಳು ಖಾಲಿ ಇವೆ (Job News ) ಎಂದು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್‌ನಲ್ಲಿ ಪ್ರಕಟಿಸಿದ್ದರು.ಖಾಲಿ ಇರುವ ಹುದ್ದೆಗಳ ಪೈಕಿ ಅತ್ಯಗತ್ಯವಿರುವ ಸುಮಾರು 1 ಲಕ್ಷ ಹುದ್ದೆಗಳ ಭರ್ತಿಗೆ ಪ್ರಸಕ್ತ ವರ್ಷದಲ್ಲಿಯೇ ಕ್ರಮವಹಿಸಲಾಗುವುದು. ಈಗಾಗಲೇ 11 ಸಾವಿರ ಸಫಾಯಿ ಕರ್ಮಚಾರಿಗಳ ನೇಮಕಾತಿಯಾಗಿದೆ. 12 ಸಾವಿರ ಸಫಾಯಿ ಕರ್ಮಚಾರಿಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.ವಿಧಾನ ಪರಿಷತ್‌ ಸದಸ್ಯ ಸಿ ಎನ್ ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಒಟ್ಟು 7,69,981 ಮಂಜೂರಾದ ಹುದ್ದೆಗಳಿವೆ. ಇದರಲ್ಲಿ 5,11,272 ಹುದ್ದೆಗಳಲ್ಲಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 2,58,709 ಹುದ್ದೆಗಳು ಖಾಲಿ ಇವೆ ಎಂದಿದ್ದರು.ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ರಾಜ್ಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಕಿರಿಯ ಅಭಿಯಂತರರ (ಗ್ರೂಪ್‌-ಸಿ) ನೇಮಕಕ್ಕೆ ಸಂಬಂಧಿಸಿದಂತೆ ಕೀ ಉತ್ತರ ಪ್ರಕಟಿಸಿದೆ.ಡಿಸೆಂಬರ್‌ 24 ಮತ್ತು 25 ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪ್ರತಿಯೊಂದು ಪ್ರಶ್ನೆಗೂ ಒಂದೊಂದು ಅಂಕ ನಿಗದಿಯಾಗಿದ್ದು, ಅಭ್ಯರ್ಥಿಗಳು ತಪ್ಪು ಉತ್ತರ ಗುರುತಿಸಿದ್ದರೆ 1/4 ಅಂಕ ಕಳೆಯಲಾಗುತ್ತದೆ ಎಂದು ಕೆಪಿಎಸ್‌ಸಿಯು ತಿಳಿಸಿದೆ.ಈ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದು, ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿಯೇ ಆಕ್ಷೇಪಣೆ ಸಲ್ಲಿಸಬೇಕಿರುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

ಅಲ್ಲು ಅರ್ಜುನ್ ಹೆಂಡತಿಯನ್ನು ಪ್ರೀತಿಯಿಂದ ಕರೆಯೋದು ಹೀಗಂತೆ!

Mon Dec 26 , 2022
  ಸಾಮಾನ್ಯವಾಗಿ ನಮಗೆ ಪ್ರೀತಿ ಪಾತ್ರರಾದವರನ್ನು ಅಡ್ಡ ಹೆಸರಿನಿಂದ ಕರೆಯುವುದು ರೂಢಿ. ಎಲ್ಲರೂ ಅವರಿಗೆ ಇಷ್ಟವಾದ ವ್ಯಕ್ತಿಗಳಿಗೊಂದು ಮುದ್ದಾದ ನಿಕ್‌ ನೇಮ್‌ ಇಟ್ಟಿರುತ್ತಾರೆ. ಅದರಲ್ಲೂ ಮಕ್ಕಳಿಗೆ, ಪತಿ-ಪತ್ನಿ ಅಥವಾ ಗರ್ಲ್‌ ಫ್ರೆಂಡ್‌ ಬಾಯ್‌ ಫ್ರೆಂಡ್‌ ಗೆ ಹೀಗೆ ಹೆಸರಿಡೋದು ಕಾಮನ್‌ ಅಲ್ಲು ಅರ್ಜುನ್ ಮತ್ತು ಅವರ ಪತ್ನಿ ಸ್ನೇಹಾ ದಕ್ಷಿಣದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಕಪಲ್‌ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅನೇಕ ಅಭಿಮಾನಿಗಳಿಗೆ ಇವರು ರೋಲ್‌ ಮಾಡೆಲ್‌ ಕೂಡ ಹೌದು. […]

Advertisement

Wordpress Social Share Plugin powered by Ultimatelysocial