ತನ್ನ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ.

ತನ್ನ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ.

ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಕಾರ್ಯದಿಂದ ಮರಳಿ ಮನೆ ಸೇರಿದ ಅಜ್ಜಿ.

ಆಂಕರ್..
ಕೊರಟಗೆರೆ : ಪಟ್ಟಣದ ಮೂರನೇ ವಾರ್ಡಿನ ಕಾವಲಮ್ಮ ಎನ್ನುವ ವೃದ್ದೆಯನ್ನು ತನ್ನ ಮೊಮ್ಮಗನೇ ಮನೆಯಿಂದ ಹೊರ ಹಾಕಿದ್ದ ದಾರುಣ ಘಟನೆ ನಡೆದ ಹಿನ್ನೆಲೆ…

ಮದುಗಿರಿ ಉಪ ವಿಭಾಗಾಧಿಕಾರಿಗಳ ಆದೇಶದಂತೆ ಕೊರಟಗೆರೆ ತಹಸಿಲ್ದಾರ್ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಅಡಿಯಲ್ಲಿ ಸುಮಾರು 80 ವಯಸ್ಸಿನ ಕಾವಲಮ್ಮ ವೃದ್ದೆಗೆ ತಾನು ವಾಸಿಸುತ್ತಿದ್ದ ಮನೆಯನ್ನು ಅಜ್ಜಿಯ ಮೊಮ್ಮಗನೇ ಆದ ಮಾರುತಿ ಬಲವಂತವಾಗಿ ಮನೆಯಿಂದ ಅಜ್ಜಿಯನ್ನು ಹೊರ ಹಾಕಿದ್ದ ಇದನ್ನು ಗಮನಿಸಿದ ಅಧಿಕಾರಿಗಳು ಕಾನೂನಿನ ಪ್ರಕಾರ ಅಜ್ಜಿಗೆ ತನ್ನ ಮನೆಯನ್ನು ಹಿಂತಿರುಗಿಸಿ ಕೊಟ್ಟಿರುವ ಘಟನೆ ಕೊರಟಗೆರೆ ಪಟ್ಟಣದ ಮೂರನೇ ವಾರ್ಡಿನಲ್ಲಿ ನಡೆದಿದೆ..

ವಾಯ್ಸ್ ಓವರ್..
ತಹಶೀಲ್ದಾರ್ ನರಸಿಂಮೂರ್ತಿ ಮಾತನಾಡಿ :- ಮಾನ್ಯ ಉಪವಿಭಾಗಾಧಿಕಾರಿಗಳ ಆದೇಶದಂತೆ ಪಟ್ಟಣದ ಮೂರನೇ ವಾರ್ಡಿನ ಕಾವಲಮ್ಮ ಲೇಟ್ ರಾಮಯ್ಯ ಎನ್ನುವವರನ್ನು ಮಾರುತಿ ಎನ್ನುವವರು ಬಲವಂತದಿಂದ ಮನೆಯಿಂದ ಹೊರ ಹಾಕಿದ್ದ ದೂರಿನ ಅನ್ವಯ ಮೇಲಾಧಿಕಾರಿಗಳ ಆದೇಶದಂತೆ ಸ್ಥಳಕ್ಕೆ ಭೇಟಿ ನೀಡಿ ವಯೋವೃದ್ದೆಯಾದ ಕಾವಲಮ್ಮನಿಗೆ ಇವರ ಮುಂದಿನ ಜೀವನವನ್ನು ಮನದಲ್ಲಿಟ್ಟುಕೊಂಡು ಕಾವಲಮ್ಮನಿಗೆ ಮನೆಯನ್ನು ಅಧಿಕಾರಿಗಳ ಸಮಕ್ಷಮದಲ್ಲಿ ಹಿಂತಿರುಗಿಸಲಾಯಿತು
ವಯೋವೃದ್ದೆಯಾದ ಕಾವಲಮ್ಮ ಇನ್ನು ಮುಂದೆ ಸಂತೋಷದಿಂದ ತನ್ನ ಮನೆಯಲ್ಲಿ ವಾಸಿಸಬಹುದು ಎಂದು ತಿಳಿಸಿದರು…

ಬೈಟ್ 1:- ತಹಶೀಲ್ದಾರ್ ನರಸಿಂಹಮೂರ್ತಿ..

ವಾಯ್ಸ್ ಓವರ್..
ತನ್ನ ಮನೆಗೆ ಮರಳಿ ಬಂದ ಅಜ್ಜಿ ಕಾವಲಮ್ಮ ಮಾತನಾಡಿ.. ಯಾವಾಗಲೂ ತನ್ನ ಮೊಮ್ಮಗ ಮಾರುತಿ ನನಗೆ ಬಹಳ ತೊಂದರೆ ಕೊಟ್ಟು ಸದಾ ಹಿಂಸೆ ಕೊಡುತ್ತಿದ್ದ ನನ್ನ ಗಂಡ ನಾನು ಕಷ್ಟಪಟ್ಟು ಕೂಲಿ ನಾಲಿ ಮಾಡಿ ಕಟ್ಟಿಕೊಡ ಮನೆಯಿಂದ ನನ್ನನ್ನೇ ಹೊರಹಾಕಿದ ಎಷ್ಟು ಬಾರಿ ಹೇಳಿದರೂ ಕೇಳುತ್ತಿರಲಿಲ್ಲ ಇದೀಗ ಅಧಿಕಾರಿಗಳು ಬಂದು ನನ್ನ ಮನೆಯನ್ನು ನನಗೆ ಹಿಂತಿರುಗಿಸಿ ಕೊಟ್ಟಿದ್ದಾರೆ ತುಂಬಾ ಸಂತೋಷವಾಗಿದೆ ನನ್ನ ಮುಂದಿನ ಜೀವನವನ್ನು ಸಂತೋಷದಿಂದ ನನ್ನ ಮನೆಯಲ್ಲಿ ನಡೆಸುತ್ತೇನೆ ಎಲ್ಲಾ ಅಧಿಕಾರಿಗಳಿಗೂ ಧನ್ಯವಾದ ಎಂದು ತಿಳಿಸಿದರು….

ಬೈಟ್ 2:- ಮರಳಿ ಮನೆ ಸೇರಿದ ಅಜ್ಜಿ ಕವಲಮ್ಮ…

ವಾಯ್ಸ್ ಓವರ್..
ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳಾದ ಎ ಎಸ್ ಐ ಧರ್ಮೆಗೌಡ ಸಿಬ್ಬಂದಿ ಮಲ್ಲೇಶ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಾದ ಆರ್ ಐ ಪ್ರತಾಪ್, ಪವನ್ ಕುಮಾರ್, ಬಸವರಾಜ್, ರಾಘವೇಂದ್ರ, ದೊಡ್ಡೇಗೌಡ ಸೇರಿದಂತೆ ಸ್ಥಳೀಯ ಸಾರ್ವಜನಿಕರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನಿಂದ ನನಗೆ ಯಾವುದೇ ನಿರೀಕ್ಷೆ ಇಲ್ಲ.

Tue Jan 31 , 2023
  ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನಿಂದ ನನಗೆ ಯಾವುದೇ ನಿರೀಕ್ಷೆ ಇಲ್ಲ. ಇದು ಭರವಸೆಗಳಿಂದ ತುಂಬಿರುತ್ತದೆ. ಆದರೆ ಅದನ್ನು ಈಡೇರಿಸುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳಿನ ಬಿಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 2023-24ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಾಳಿನ ಬಜೆಟ್ ಹೇಗಿರಲಿದೆ ಎನ್ನುವ ಬಗ್ಗೆ ಇಂದೇ ಮಾಹಿತಿಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ‘ಮೇ ತಿಂಗಳಲ್ಲಿ […]

Advertisement

Wordpress Social Share Plugin powered by Ultimatelysocial