‘ಯೋಗಿ ಸ್ಥಳಗಳ ಮರುನಾಮಕರಣ ಮಾಡುವ ಜ್ವರದಿಂದ ಬಳಲುತ್ತಿದ್ದಾರೆ’: ಓವೈಸಿ

ಫಿರೋಜಾಬಾದ್ ಡಿಸೆಂಬರ್ 26: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವ ಹೊತ್ತಲ್ಲೆ ಜನಪ್ರತಿನಿಧಿಗಳ ಆರೋಪ ಪ್ರತ್ಯಾರೋಪ ಜೋರಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಥಳಗಳನ್ನು ಮರುನಾಮಕರಣ ಮಾಡುವ ಜ್ವರದಿಂದ ಬಳಲುತ್ತಿದ್ದಾರೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ.

ಶನಿವಾರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, “ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಫಿರೋಜಾಬಾದ್‌ನಲ್ಲಿ 45-200 ಮಕ್ಕಳು ವೈರಲ್ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ನೀವು ಬಾಬಾ (ಸಿಎಂ) ಅನ್ನು ಪ್ರಶ್ನಿಸಿದರೆ, ಜಿಲ್ಲೆಯ ಹೆಸರಿನಿಂದಾಗಿ ಜ್ವರ ಬಂದಿದೆ ಎಂದು ಅವರು ಹೇಳುತ್ತಾರೆ. ಅವರು ಸ್ಥಳಗಳನ್ನು ಮರುನಾಮಕರಣ ಮಾಡುವ ಜ್ವರದಿಂದ ಬಳಲುತ್ತಿದ್ದಾರೆ” ಎಂದು ದೂರಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಓವೈಸಿ ಅವರು ರಾಜ್ಯದ 19 ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆಗೆ ಮತ ಚಲಾಯಿಸಲು ಮತ್ತು ತಮ್ಮದೇ ಆದ ರಾಜಕೀಯ ನಾಯಕತ್ವವನ್ನು ಆಯ್ಕೆ ಮಾಡಲು ತಮ್ಮ ಮನವಿಯನ್ನು ಪುನರುಚ್ಚರಿಸಿದರು.

ಮೊನ್ನೆಯಷ್ಟೇ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಒಡ್ಡುವ ವಿಡಿಯೋ ಭಾರಿ ವಿವಾದ ಸೃಷ್ಟಿಸಿದ ಬಳಿಕ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸ್ಪಷ್ಟೀಕರಣ ನೀಡಿದ್ದರು. ತಾವು ಹಿಂಸಾಚಾರಕ್ಕೆ ಪ್ರಚೋದನೆ ಅಥವಾ ಬೆದರಿಕೆ ಒಡ್ಡಿರುವುದಿಲ್ಲ ಎಂದು ಹೇಳಿದ್ದರು. ಕಾನ್ಪುರದಲ್ಲಿ ಓವೈಸಿ ನೀಡಿದ್ದ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಭಾರಿ ವಿರೋಧಕ್ಕೆ ಒಳಗಾಗಿತ್ತು. ಹರಿದ್ವಾರದಲ್ಲಿ ನಡೆದಿದ್ದ ಧಾರ್ಮಿಕ ಸಮ್ಮೇಳನ ಒಂದರಲ್ಲಿ ಹಿಂದುತ್ವ ನಾಯಕರು ದ್ವೇಷ ಭಾಷಣ ಮಾಡಿದ್ದಾರೆ ಎನ್ನಲಾದ ವಿಡಿಯೋಗಳು ವೈರಲ್ ಆಗಿದ್ದವು. ಅದರಲ್ಲಿ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡುವ ಹೇಳಿಕೆಗಳು ದಾಖಲಾಗಿದ್ದವು. ಈ ವಿವಾದದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ತಮ್ಮ ವಿಡಿಯೋವನ್ನು ಹರಿಬಿಡಲಾಗಿದೆ ಎಂದು ಓವೈಸಿ ಆರೋಪ ಮಾಡಿದ್ದಾರೆ. ‘ದಯವಿಟ್ಟು ನೆನಪಿಡಿ, ಯೋಗಿ (ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್) ಯಾವಾಗಲೂ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ. ಮೋದಿ’ಕಾನ್ಪುರದಲ್ಲಿ ನಾನು ಮಾಡಿದ 45 ನಿಮಿಷಗಳ ಭಾಷಣದಲ್ಲಿ 1 ನಿಮಿಷದ ವಿಡಿಯೋವನ್ನು ಮಾತ್ರ ಹರಿಬಿಡಲಾಗಿದೆ. ಹೀಗಾಗಿ ನನ್ನ ವಾದಗಳನ್ನು ನೇರವಾಗಿ ಮಂಡಿಸುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದರು. ನಾನು ಹಿಂಸೆಗೆ ಪ್ರಚೋದನೆ ನೀಡಿಲ್ಲ ಅಥವಾ ಬೆದರಿಕೆ ಒಡ್ಡಿಲ್ಲ. ಪೊಲೀಸರ ದೌರ್ಜನ್ಯದ ವಿರುದ್ಧ ನಾನು ಮಾತನಾಡಿದ್ದೇನೆ. ಅದರ ಪೂರ್ಣ ವಿಡಿಯೋ ಎರಡು ಭಾಗಗಳಲ್ಲಿವೆ.

ನೀವು ಮೇಲಿನ ವಿಡಿಯೋದಲ್ಲಿ ನೋಡಿರುವಂತೆ, ನಾನು ಇದರಲ್ಲಿ ಪೊಲೀಸ್ ದೌರ್ಜನ್ಯಗಳ ಬಗ್ಗೆ ಕಾನ್ಪುರದಲ್ಲಿ ಮಾತನಾಡಿದ್ದೆ. ಮೋದಿ-ಯೋಗಿ ಅವರ ಕಾರಣಕ್ಕಾಗಿ ಜನರ ಸ್ವಾತಂತ್ರ್ಯಗಳನ್ನು ಹತ್ತಿಕ್ಕುವ ಅಧಿಕಾರ ತಮಗಿದೆ ಎಂದು ಭಾವಿಸುವ ಅಂತಹ ಪೊಲೀಸರನ್ನು ಉದ್ದೇಶಿಸಿ ಹೇಳಿದ್ದೆ. ನಮ್ಮ ಮೌನವನ್ನು ಒಪ್ಪಿಗೆ ಎಂದು ಗೊಂದಲ ಮಾಡಿಕೊಳ್ಳುವುದು ಬೇಡ ಎಂದಿದ್ದೆ’ ಎಂದು ಓವೈಸಿ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.ಓವೈಸಿ ಹೇಳಿಕೆಗೆ ಬಿಜೆಪಿ ಅಲ್ಲದೆ, ಇತರೆ ಕೆಲವು ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿವೆ. ಓವೈಸಿ ಭಾಷಣವು ನಾಚಿಕೆಗೇಡಿನದ್ದು ಎಂದು ಶಿವಸೇನಾದ ಪ್ರಿಯಾಂಕಾ ಚತುರ್ವೇದಿ ಟೀಕಿಸಿದ್ದಾರೆ. ಎಂದೆಂದಿಗೂ ಪ್ರಧಾನಿಯಾಗಿ ಇರುವುದಿಲ್ಲ. ನಾವು ಮುಸ್ಲಿಮರು ನಿಮ್ಮ ಅನ್ಯಾಯಗಳನ್ನು ಮರೆಯುವುದಿಲ್ಲ. ಈ ಅನ್ಯಾಯವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅಲ್ಲಾಹು ತನ್ನ ಶಕ್ತಿಯಿಂದ ನಿಮ್ಮನ್ನು ನಾಶಪಡಿಸುತ್ತಾನೆ. ಸನ್ನಿವೇಶಗಳು ಬದಲಾಗಲಿವೆ. ಆಗ ನಿಮ್ಮನ್ನು ರಕ್ಷಿಸಲು ಯಾರು ಬರುತ್ತಾರೆ? ಯೋಗಿ ತಮ್ಮ ಮಠಕ್ಕೆ ಮರಳಿದಾಗ ಮತ್ತು ಮೋದಿ ಪರ್ವತಗಳತ್ತ ಹಿಮ್ಮೆಟ್ಟಿದ ಬಳಿಕ ಯಾರು ಬರುತ್ತಾರೆ?’ ಎಂದು ಹೇಳುವುದು ವಿಡಿಯೋದಲ್ಲಿ ದಾಖಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

UP Election | 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು: ಅಮಿತ್ ಶಾ

Sun Dec 26 , 2021
ಲಖನೌ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಭವಿಷ್ಯ ನುಡಿದಿದ್ದಾರೆ. ಉತ್ತರ ಪ್ರದೇಶದ ಜಲಗಾಂವ್‌ನಲ್ಲಿ ಪಕ್ಷ ಆಯೋಜಿಸಿರುವ ‘ಜನ ವಿಶ್ವಾಸ ಯಾತ್ರೆ’ಯಲ್ಲಿ ಭಾಗವಹಿಸಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಯಕತ್ವದಲ್ಲಿ ‘ಸಬ್ […]

Advertisement

Wordpress Social Share Plugin powered by Ultimatelysocial