ಸೀಬೆ ಗಿಡದ ಎಲೆಗಳಲ್ಲೂ ಇದೆ ಔಷಧೀಯ ಗುಣ!

ಸೀಬೆಹಣ್ಣಿನ ಗಿಡದ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು, ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಇದರ ಇನ್ನಷ್ಟು ಪ್ರಯೋಜನಗಳ ಬಗ್ಗೆ ತಿಳಿಯಿರಿ.ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಸೀಬೆ ಎಲೆಗಳನ್ನು ಕುದಿಸಿದ ಟೀ ಮೂರು ತಿಂಗಳವರೆಗೆ ಸತತವಾಗಿ ಕುಡಿಯುವ ಮೂಲಕ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರಾಯ್ಡ್ ಎಂಬ ವಿಷ ವಸ್ತುಗಳನ್ನು ಕಡಿಮೆಗೊಳಿಸಬಹುದು.

ಅತಿಸಾರವನ್ನು ಶಮನಗೊಳಿಸುತ್ತದೆ

ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಅತಿಸಾರ ಮತ್ತು ಆಮಶಂಕೆಯನ್ನು ನಿವಾರಿಸಲು ಸೀಬೆ ಎಲೆಗಳ ಮಿಶ್ರಣ ಒಂದು ಉತ್ತಮ ಆಯುರ್ವೇದ ಔಷಧಿಯಾಗಿದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುವುದು

ಸೀಬೆ ಎಲೆಗಳ ಮಿಶ್ರಣದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಹಲವು ಪೋಷಕಾಂಶಗಳಿವೆ. ಸೀಬೆ ಎಲೆಗಳ ಕಷಾಯ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

Sun May 22 , 2022
ಬೆಂಗಳೂರು: ಮುಂದಿನ ವಿಧಾನ ಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಸಮುದಾಯಗಳ ಮತಬ್ಯಾಂಕ್‌ಗೆ ಲಗ್ಗೆ ಹಾಕಲು ಕಾಂಗ್ರೆಸ್‌ ಮುಂದಾಗಿದೆ. ಹಿಂದೆ ಕಾಂಗ್ರೆಸ್‌ನ ಖಚಿತ ಮತ ಬ್ಯಾಂಕ್‌ ಆಗಿದ್ದ ದಲಿತ, ಹಿಂದುಳಿದ ಸಮುದಾಯ ಬಿಜೆಪಿ ಕಡೆ ವಾಲಿದ್ದರಿಂದ ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಯಾಗಿತ್ತು. ಹೀಗಾಗಿ ಆ ಸಮುದಾಯವನ್ನು ತನ್ನತ್ತ ಸೆಳೆಯಲು ಈಗಿನಿಂದಲೇ ಕಾರ್ಯತಂತ್ರ ರೂಪಿಸಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾಕರ ಜತೆಗೆ ಒಕ್ಕಲಿಗ ಮತ್ತು ಲಿಂಗಾಯತ ಮತಗಳನ್ನೂ ಕ್ರೋಡೀ ಕರಿಸಿದರೆ […]

Advertisement

Wordpress Social Share Plugin powered by Ultimatelysocial