ಉತ್ತರನ ಆಗಮನ. ವಿರಾಟನ ಹರ್ಷ. ಧರ್ಮಜನೊಂದಿಗೆ ಕೋಪ.

ಉತ್ತರನ ಆಗಮನ. ವಿರಾಟನ ಹರ್ಷ. ಧರ್ಮಜನೊಂದಿಗೆ ಕೋಪ.
ಅರ್ಜುನನು ಮುನ್ನಿನಂತೆಯೇ ಉತ್ತರನೊಂದಿಗೆ ನಗರಕ್ಕೆ ಬಂದನು. ಉತ್ತರನೇ ಯುದ್ಧವನ್ನು ಗೆದ್ದುದು ಎಂದು ಹೇಳುವಂತೆ ದೂತರಿಗೆ ಹೇಳಿಕಳಿಸಿದರು. ಇತ್ತ ವಿಜಯದಿಂದ ಬಂದ ವಿರಾಟನು ಮಗನನ್ನು ಕಾಣದೆ ಎಲ್ಲಿ ಎನ್ನಲು ಕೌರವರೊಂದಿಗೆ ಯುದ್ಧಕ್ಕೆ ಹೋದನೆಂದು ತಿಳಿದು ಭಯಗೊಂಡನು. ಸಹಾಯವನ್ನು ಮಾಡಲು ಹೊರಡುವಷ್ಟರಲ್ಲಿ ದೂತರು ಬಂದು ವಿಜಯವಾರ್ತೆಯನ್ನು ಹೇಳಿದರು. ಅಪಾರವಾದ ಸಂತೋಷದಿಂದ ರಾಜನು ಉಬ್ಬಿದನು. ಸ್ವಾಗತಕ್ಕೆ ಸಿದ್ಧತೆಗಳಾದವು.
ಈ ಸಂತಸದಲ್ಲಿ ಪಗಡೆಯಾಟ ಆಡಲು ಕಂಕನೊಂದಿಗೆ ಕುಳಿತಾಗ ವಿರಾಟನು ಪದೇ ಪದೇ ಉತ್ತರನ ಗೆಲುವಿನ ಬಗ್ಗೆ ಹೇಳಲು ಧರ್ಮಜನು ಸಾರಥಿಯು ಯುದ್ಧವನ್ನು ಗೆದ್ದುದೆಂದನು. ಕೋಪ ಬಂದು ರಾಜನು ಬಂಗಾರದ ದಾಳದಿಂದ ಬೀಸಿ ಹೊಡೆದಾಗ ಧರ್ಮಜನ ಹಣೆಗೆ ಗಾಯವಾಗಿ ರಕ್ತ ಸುರಿಯಿತು. ಅದು ಕೆಳಗೆ ಬೀಳದಂತೆ ಬೊಗಸೆ ಹಿಡಿದು ದ್ರೌಪದಿಯನ್ನು ನೋಡಿದನು. ಅವಳು ಬಂದು ಸೆರಗಿನಿಂದ ಅದನ್ನು ತೆಗೆದಳು. ಇದೇನಾದರೂ ಕೆಳಗೆ ಬಿದ್ದಿದ್ದರೆ ನಿನ್ನ ರಾಜ್ಯ ಉರಿದುಹೋಗುತ್ತಿತ್ತು ಎಂದಾಗ ವಿರಾಟನಿಗೆ ಆಶ್ಚರ್ಯ. ಇವರಾರು ಎಂದು. ಆ ವೇಳೆಗೆ ಉತ್ತರನು ಬಂದ ಸುದ್ದಿಯಿಂದ ಅದನ್ನು ಮರೆತನು.
ಉತ್ತರನ ಮೊಗದಲ್ಲಿ ಜಯದ ಗೆಲುವಿಲ್ಲ ಎಂದು ಕೆಲವರು ಅರಿತರು. ಒಳಬಂದ ಮಗನನ್ನು ಮೈದಡವಿ ಮುದ್ದಾಡಲು ಹೊರಟ ರಾಜನನ್ನು ತಡೆದ ಉತ್ತರನು ಗೆಲಿದವನು ಬೇರೆ. ನಾನಲ್ಲ. ಬೆಳಿಗ್ಗೆ ತೋರಿಸುವೆನೆಂದು ಹೇಳಿ ಒಳಹೋದನು. ಅರ್ಜುನನು ಉತ್ತರೆಗೆ ಆಭರಣ, ವಸ್ತ್ರಗಳನ್ನು ಕೊಟ್ಟನು.

ಪಾಂಡವರೆಲ್ಲರೂ ಒಟ್ಟಿಗೆ ಸೇರಿದರು. ತಮ್ಮ ತಮ್ಮ ಯುದ್ಧದ ವಿಷಯಗಳನ್ನು ಹೇಳುತ್ತಿರಲು ಧರ್ಮಜನ ಹಣೆಯ ಗಾಯವನ್ನು ಗುರುತಿಸಿದ ಅರ್ಜುನನು ಗಾಬರಿಯಿಂದ ವಿಚಾರಿಸಿದನು. ನಡೆದ ಸಂಗತಿ ತಿಳಿದ ಭೀಮ ವಿರಾಟನನ್ನು ಕೊಲ್ಲುವೆನೆಂದು ಆರ್ಭಟಿಸಿದನು. ಅವನನ್ನು ಸಮಾಧಾನಿಸಿದ ಧರ್ಮಜನು ಸಹಿಸಿಕೊಳ್ಳಲು ಹೇಳಿ ಮರುದಿನ ಎಲ್ಲರೂ ನಿಜರೂಪದಲ್ಲಿ ಕಾಣಿಸೋಣವೆಂದು ಸಂತೈಸಿದನು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾದೊಂದಿಗೆ ಮಾತುಕತೆ ತುಂಬಾ ಕಷ್ಟ: ಉಕ್ರೇನ್

Sat Mar 26 , 2022
ರಷ್ಯಾದೊಂದಿಗಿನ ಮಾತುಕತೆಯು “ಬಹಳ ಕಷ್ಟಕರವಾಗಿದೆ” ಏಕೆಂದರೆ ಅದು ತನ್ನ ಬೇಡಿಕೆಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಉಕ್ರೇನ್ ಶುಕ್ರವಾರ ಹೇಳಿದೆ. “ಸಂಧಾನ ಪ್ರಕ್ರಿಯೆಯು ತುಂಬಾ ಕಷ್ಟಕರವಾಗಿದೆ” ಎಂದು ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ರೂಟರ್ಸ್ಗೆ ತಿಳಿಸಿದರು “ಉಕ್ರೇನಿಯನ್ ನಿಯೋಗವು ಬಲವಾದ ಸ್ಥಾನವನ್ನು ತೆಗೆದುಕೊಂಡಿದೆ ಮತ್ತು ಅದರ ಬೇಡಿಕೆಗಳನ್ನು ಬಿಟ್ಟುಕೊಡುವುದಿಲ್ಲ. ನಾವು ಮೊದಲನೆಯದಾಗಿ, ಕದನ ವಿರಾಮ, ಭದ್ರತಾ ಖಾತರಿಗಳು ಮತ್ತು ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆಯನ್ನು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು. ರಷ್ಯಾದೊಂದಿಗೆ ಪ್ರಮುಖ […]

Advertisement

Wordpress Social Share Plugin powered by Ultimatelysocial