ಆತ ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬ ಸೂಪರ್‌ ಸ್ಟಾರ್‌ ಹೀರೋ.

ತ ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬ ಸೂಪರ್‌ ಸ್ಟಾರ್‌ ಹೀರೋ. ಮಾಡಿದ ಸಿನಿಮಾವೆಲ್ಲ ಬ್ಲಾಕ್‌ ಬಸ್ಟರ್‌ ಆಗಿದ್ದರಿಂದ, ಸಹಜವಾಗಿಯೇ ಇವನ ಜೊತೆ ಸಿನಿಮಾ ಮಾಡಲು ನಿರ್ಮಾಪಕರು, ನಿರ್ದೇಶಕರು ತುದಿಗಾಲಿನಲ್ಲಿರುತ್ತಾರೆ. ಆದರೆ ಇವನೋ ಹೇಳಿ-ಕೇಳಿ ತಿಕ್ಕಲು ಸ್ವಭಾವದವನು.

ಸ್ವಲ್ಪ ಹೆಚ್ಚು- ಕಡಿಮೆಯಾದರೂ ತನ್ನೊಂದಿಗೆ ಸಿನಿಮಾ ಮಾಡುವ ನಿರ್ಮಾಪಕರು, ನಿರ್ದೇಶಕರನ್ನು ತನ್ನ ಕು(ಕಪಿ)ಚೇಷ್ಟೆಯಿಂದ ಹೈರಾಣಾಗಿಸದೆ ಬಿಡಲಾರ. ಮುಂದೆ ಎಲ್ಲರಿಂದ ಹೊಗಳಿಸಿಕೊಳ್ಳುವ, ಹಿಂದಿನಿಂದ ಹಿಡಿ ಶಾಪ ಹಾಕಿಸಿಕೊಳ್ಳುವ ಇಂಥ ಸೂಪರ್‌ ಸ್ಟಾರ್‌ ಹೀರೋ ಒಬ್ಬ ಕುರುಡಿ ದೆವ್ವದ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಅವನ ಪಾಡು ಹೇಗಿರಬಹುದು? ಇಂಥದ್ದೊಂದು ಕಥೆಯನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ನಟ ಭಯಂಕರ’.

ಇನ್ನು ಸಿನಿಮಾದ ಟೈಟಲ್ಲೇ ಹೇಳುವಂತೆ ಒಬ್ಬ ಸೂಪರ್‌ ಸ್ಟಾರ್‌ “ನಟ’ ಮತ್ತು “ಭಯಂಕರ’ ದೆವ್ವದ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಕನ್ನಡದಲ್ಲಿ ಸ್ವಲ್ಪ ವಿರಳ ಎಂದೇ ಹೇಳಲಾಗುವ ಹಾರರ್‌-ಕಾಮಿಡಿ ಶೈಲಿಯಲ್ಲಿ ಇಡೀ ಸಿನಿಮಾವನ್ನು ತೆರೆಮೇಲೆ ತರಲಾಗಿದೆ. ಹಾರರ್‌-ಕಾಮಿಡಿ ಜೊತೆಗೆ ಲವ್‌, ರೊಮ್ಯಾಂಟಿಕ್‌ ಸಾಂಗ್ಸ್‌, ಫೈಟ್ಸ್‌ ಹೀಗೆ ಒಂದಷ್ಟು ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ ಸೇರಿಸಿ ಕಂಪ್ಲೀಟ್‌ ಪ್ಯಾಕೇಜ್‌ ಸಿನಿಮಾ ಕೊಡುವ ಪ್ರಯತ್ನ ಮಾಡಿದ್ದಾರೆ. ನಟ ಕಂ ನಿರ್ದೇಶಕ ಪ್ರಥಮ್‌. ಸಿನಿಮಾದ ಕಥೆ ಎಳೆ ಚೆನ್ನಾಗಿದ್ದರೂ, ಚಿತ್ರಕಥೆ ಮತ್ತು ಕೆಲ ಅನಗತ್ಯ ಸಂಭಾಷಣೆಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರೆ, “ನಟ ಭಯಂಕರ’ನ ಓಟ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದ್ದವು.

ಇನ್ನು “ನಟ ಭಯಂಕರ’ ಸಿನಿಮಾದಲ್ಲಿ ಪ್ರಥಮ್‌ ಅವರದ್ದು ಡಬಲ್‌ ರೋಲ್‌ ಎನ್ನಬಹುದು. ತೆರೆಮುಂದೆ ನಾಯಕನಾಗಿ, ತೆರೆಹಿಂದೆ ನಿರ್ದೇಶಕನಾಗಿ ಎರಡೂ ಪಾತ್ರವನ್ನು ಪ್ರಥಮ್‌ ನಿಭಾಯಿಸಿದ್ದಾರೆ. ಎರಡರಲ್ಲೂ ಪ್ರಥಮ್‌ ಹಾಕಿರುವ ಪರಿಶ್ರಮ ತೆರೆಮೇಲೆ ಕಾಣುತ್ತದೆ.

ಇನ್ನು ನಾಯಕಿಯರಾದ ನಿಹಾರಿಕಾ, ಸುಶ್ಮಿತಾ ಜೋಶಿ ತಮ್ಮ ಪಾತ್ರಗಳಿಂದ ಇಷ್ಟವಾಗುತ್ತಾರೆ. ಉಳಿದಂತೆ ಕುರಿ ಪ್ರತಾಪ್‌, ಓಂ ಪ್ರಕಾಶ್‌ ರಾವ್‌ ಅಲ್ಲಲ್ಲಿ ನಗುವಿನ ಕಚಗುಳಿ ಇಟ್ಟರೆ, ಸಾಯಿಕುಮಾರ್‌ ಮತ್ತು ಶೋಭರಾಜ್‌ ತಮ್ಮ ವಿಭಿನ್ನ ಮ್ಯಾನರಿಸಂನಿಂದ ಗಮನ ಸೆಳೆಯುತ್ತಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪವರ್ ಸ್ಟಾರ್ ಪವನ್ ಕಲ್ಯಾಣ್ ಮೂರು ಮದುವೆ ಸುದ್ದಿ.

Sat Feb 4 , 2023
ಪವರ್ ಸ್ಟಾರ್ ಪವನ್ ಕಲ್ಯಾಣ್ ಮೂರು ಮದುವೆ ಸುದ್ದಿ ಸಖತ್ ಜೋರಾಗಿಯೇ ಕೇಳಿ ಬರುತ್ತಿದೆ. ನಟನ ವೈಯಕ್ತಿಕ ಜೀವನ ಹಳ್ಳ ಹಿಡಿದಿರುವ ಬಗ್ಗೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ನಟ ಬಾಲಯ್ಯನ ಮುಂದೆ ಮೂರು ಮದುವೆ ಬಗ್ಗೆ ಪವನ್ ಕಲ್ಯಾಣ್ ಓಪನ್ ಆಗಿ ಮಾತನಾಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಸ್ಟಾರ್ ಆಗಿ ಮಿಂಚಿದವರು ಪವನ್ ಕಲ್ಯಾಣ್, ಸಿನಿಮಾ ಜೊತೆಗೆ ರಾಜಕೀಯದಲ್ಲೂ ಪವನ್ ಸದ್ದು ಮಾಡುತ್ತಿದ್ದಾರೆ. ಹೀಗಿರುವಾಗ ಇತ್ತೀಚಿಗೆ ಬಾಲಯ್ಯ […]

Advertisement

Wordpress Social Share Plugin powered by Ultimatelysocial