ಪವರ್ ಸ್ಟಾರ್ ಪವನ್ ಕಲ್ಯಾಣ್ ಮೂರು ಮದುವೆ ಸುದ್ದಿ.

ವರ್ ಸ್ಟಾರ್ ಪವನ್ ಕಲ್ಯಾಣ್ ಮೂರು ಮದುವೆ ಸುದ್ದಿ ಸಖತ್ ಜೋರಾಗಿಯೇ ಕೇಳಿ ಬರುತ್ತಿದೆ. ನಟನ ವೈಯಕ್ತಿಕ ಜೀವನ ಹಳ್ಳ ಹಿಡಿದಿರುವ ಬಗ್ಗೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ನಟ ಬಾಲಯ್ಯನ ಮುಂದೆ ಮೂರು ಮದುವೆ ಬಗ್ಗೆ ಪವನ್ ಕಲ್ಯಾಣ್ ಓಪನ್ ಆಗಿ ಮಾತನಾಡಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಸ್ಟಾರ್ ಆಗಿ ಮಿಂಚಿದವರು ಪವನ್ ಕಲ್ಯಾಣ್, ಸಿನಿಮಾ ಜೊತೆಗೆ ರಾಜಕೀಯದಲ್ಲೂ ಪವನ್ ಸದ್ದು ಮಾಡುತ್ತಿದ್ದಾರೆ. ಹೀಗಿರುವಾಗ ಇತ್ತೀಚಿಗೆ ಬಾಲಯ್ಯ ಅವರ ನಿರೂಪಣೆಯ ಟಾಕ್ ಶೋವೊಂದರಲ್ಲಿ ನಟ ಪವನ್ ಭಾಗವಹಿಸಿದ್ದಾರೆ. ಮದುವೆ, ರಾಜಕೀಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಪವನ್ ಕಲ್ಯಾಣ್ ಎಂದಾಕ್ಷಣ ಗಾಸಿಪ್ ಪ್ರಿಯರಿಗೆ ಚರ್ಚೆಗೆ ಗ್ರಾಸವಾಗೋದೇ ಅವರ ಮದುವೆ ಮತ್ತು ಡಿವೋರ್ಸ್ ವಿಚಾರ. ಅದಕ್ಕೆಲ್ಲಾ ಪವನ್ ಕಲ್ಯಾಣ್ ಖಡಕ್ ಉತ್ತರ ಕೊಟ್ಟಿದ್ದಾರೆ. ವೈಯಕ್ತಿಕ ಜೀವನವನ್ನ ರಾಜಕೀಯಕ್ಕೆ ಹೋಲಿಸಿ ಮಾತನಾಡುವವರಿಗೂ ತಿರುಗೇಟು ನೀಡಿದ್ದಾರೆ. ಇದೀಗ ಬಾಲಯ್ಯ ನಡೆಸಿ ಕೊಡುವ ಅನ್‌ಸ್ಟಾಪೆಬಲ್ ಶೋನಲ್ಲಿ ಮೂರು ಮದುವೆಯಾಗಿದ್ದು ಯಾಕೆ? ಅದೆಲ್ಲ ಹೇಗಾಯಿತು ಎನ್ನುವುದನ್ನು ಮಾತನಾಡಿದ್ದಾರೆ.

ನಾನು ಜೀವನದಲ್ಲಿ ಮದುವೆಯನ್ನೇ ಆಗಬಾರದು ಎಂದು ಯೋಚಿಸಿದ್ದೆ. ಒಂಟಿಯಾಗಿರಬೇಕು ಎಂದು ಅಂದುಕೊಂಡಿದ್ದೆ, ಈಗ ಹಿಂದುರುಗಿ ನೋಡಿದರೆ ಇದು ನಾನೇನಾ ಅನ್ನಿಸುತ್ತದೆ. ಮೊದಲು ಮದುವೆಯಾದೆ ಹೊಂದಾಣಿಕೆ ಆಗಲಿಲ್ಲ, ಎರಡನೇಯದು ಇದೇ ರೀತಿ ಆಯ್ತು. ಪ್ರತಿ ಬಾರಿಯೂ ಭಿನ್ನಾಭಿಪ್ರಾಯಗಳು ಬೆಳೆಯುತ್ತಿತ್ತು. ಕೊನೆಗೆ ಮೂರನೇ ಬಾರಿ ಮದುವೆಯಾಗಬೇಕಾಯ್ತು. ಮೂರು ಮದುವೆಯಾದೆ ಅಂತಾರಲ್ಲ. ನಾನೇನು ಮೂರು ಮದುವೆಯನ್ನ ಒಟ್ಟಿಗೆ ಆಗಿದ್ದೇನಾ? ಡಿವೋರ್ಸ್ ಪಡೆದ ಬಳಿಕ ತಾನೇ ಮದುವೆ ಆಗಿದ್ದು, ನಾನೇನು ಮದುವೆಯ ವ್ಯಾಮೋಹದಿಂದ ಆಗಿದ್ದಲ್ಲ. ರಾಜಕೀಯದಲ್ಲಿರುವ ಕಾರಣ ಕೆಲವರಿಗೆ ಇದೇ ನನ್ನ ವಿರುದ್ಧದ ಅಸ್ತ್ರವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಲವ್ ಬಡ್ಸ್ ಸಿದ್ದಾರ್ಥ್​ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಹಸೆಮಣೆ ಏರುತ್ತಿದ್ದಾರೆ.

Sat Feb 4 , 2023
ಬಾಲಿವುಡ್ ಲವ್ ಬಡ್ಸ್ ಸಿದ್ದಾರ್ಥ್​ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಹಸೆಮಣೆ ಏರುತ್ತಿದ್ದಾರೆ. ರಾಜಸ್ಥಾನದಲ್ಲಿ ಈ ಜೋಡಿಯ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ. ಸೂರ್ಯಗಡ ಪ್ಯಾಲೇಸ್​ನಲ್ಲಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್​ ಮಲ್ಹೋತ್ರಾ ಸಪ್ತಪದಿ ತುಳಿಯಲಿದ್ದಾರೆ. ಸಿದ್ದಾರ್ಥ್ ಹಾಗೂ ಕಿಯಾರ ಮದುವೆಯ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರು ಜೋಡಿಗಳು ಮಾತ್ರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ನಟಿ ಕಂಗನಾ ರಣಾವತ್, ‘ಇವರಿಬ್ಬರದ್ದು ನಿಜವಾದ ಪ್ರೀತಿ’ ಎಂದು ಹಾಡಿ […]

Advertisement

Wordpress Social Share Plugin powered by Ultimatelysocial