ಕಿವಿ ಚುಚ್ಚುವುದರಿಂದ ಇದೆ ಅನೇಕ ಸಮಸ್ಯೆಗಳಿಗೆ ʼಪರಿಹಾರʼ.

ಗುರುಕುಲ ಪ್ರವೇಶಿಸುವ ಸಮಯದಲ್ಲಿ ಮಕ್ಕಳಿಗೆ ಕಿವಿ ಚುಚ್ಚುವ ಪದ್ಧತಿ ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು. ಈಗಲೂ ಭಾರತದ ಅನೇಕ ಕಡೆ, ಮಕ್ಕಳು ಐದು ವರ್ಷದವರಾಗುವ ಮೊದಲೇ ಕಿವಿಯನ್ನು ಚುಚ್ಚಲಾಗುತ್ತದೆ.

ಇದು ಭಾರತದಲ್ಲಿ ಶತಮಾನಗಳಿಂದಲೂ ನಡೆದುಕೊಂಡು ಬಂದ ಪದ್ದತಿ.

ಇತ್ತೀಚಿನ ದಿನಗಳಲ್ಲಿ ಭಾರತವೊಂದೇ ಅಲ್ಲ ವಿದೇಶಿಯರು ಕೂಡ ಕಿವಿ ಚುಚ್ಚಿಸಿಕೊಳ್ತಿದ್ದಾರೆ. ಹುಡುಗಿಯರೊಂದೇ ಅಲ್ಲ ಹುಡುಗರು ಕೂಡ ಕಿವಿಯೋಲೆ ಹಾಕಿಕೊಳ್ತಿದ್ದಾರೆ.

ಸಂಪ್ರದಾಯದ ಜೊತೆಗೆ ವೈಜ್ಞಾನಿಕ ಕಾರಣ ಇದಕ್ಕಿದೆ. ಕೆಲವರು ಇದು ಫ್ಯಾಷನ್ ಎಂದ್ರೆ ಮತ್ತೆ ಕೆಲವರು ಆರೋಗ್ಯದ ದೃಷ್ಠಿಯಿಂದ ಕಿವಿ ಚುಚ್ಚಿಸಿಕೊಳ್ತಾರೆ. ಕಿವಿ ಚುಚ್ಚಿಸಿಕೊಳ್ಳುವುದು ಹಿಂದು ಧರ್ಮದ ಒಂದು ಪದ್ಧತಿಯಾಗಿರಬಹುದು, ಆದ್ರೆ ಅದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಇದರ ಹಿಂದಿರುವ ಕಾರಣವೇನು ಹಾಗೂ ಉಪಯೋಗಗಳೇನು ಎಂಬುದರ ವಿವರ ಇಲ್ಲಿದೆ.

ಕಿವಿಯ ಯಾವ ಭಾಗವನ್ನು ಚುಚ್ಚಲಾಗುತ್ತದೆಯೋ ಅಲ್ಲಿ ಎರಡು ಆಕ್ಯುಪ್ರೆಶರ್ ಪಾಯಿಂಟ್ ಇರುತ್ತದೆ. ಅವೆರಡೂ ಕಿವಿ ಸುಲಭವಾಗಿ ಕೇಳಲು ನೆರವಾಗುತ್ತವೆ. ಜೊತೆಗೆ ಧನುರ್ವಾಯುವಿನಂತಹ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಮಹಿಳೆ ಹಾಗೂ ಪುರುಷ ಇಬ್ಬರು ಎರಡೂ ಕಿವಿಗಳನ್ನು ಚುಚ್ಚಿಸಿಕೊಳ್ಳುವುದರಿಂದ ಸಾಕಷ್ಟು ಲಾಭಗಳಿವೆ. ಸಂತಾನೋತ್ಪತ್ತಿಗೆ ಇದು ಅನುಕೂಲ. ಮಹಿಳೆಯರಲ್ಲಿ ಕಂಡು ಬರುವ ಮುಟ್ಟಿನ ಸಮಸ್ಯೆಗಳಿಗೆ ಕಿವಿ ಚುಚ್ಚುವುದರಿಂದ ಪರಿಹಾರ ಸಿಗುತ್ತದೆ.

ಯಾವ ಪುರುಷ ಕಿವಿ ಚುಚ್ಚಿಸಿಕೊಂಡಿದ್ದಾನೋ ಆತನಿಗೆ ಪಾರ್ಶ್ವವಾಯುವಾಗುವ ಭಯವಿರುವುದಿಲ್ಲ. ವೀರ್ಯ ಕ್ರೋಢಿಕರಿಸುವ ಕೆಲಸ ಮಾಡುತ್ತದೆ. ವಿವಿಧ ಬಗೆಯ ಸೋಂಕು, ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಂಡವಾಯು ಸಮಸ್ಯೆಯಿಂದ ದೂರವಿರಿಸುತ್ತದೆ. ಮುಖದಲ್ಲಿ ಗ್ಲೋ ಬರಲು ಇದು ಕಾರಣ.

ಜೀರ್ಣಕ್ರಿಯೆಗೂ ಇದು ಸಹಕಾರಿ. ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡಿ, ಮನುಷ್ಯ ಆರೋಗ್ಯವಾಗಿರುವಂತೆ ಮಾಡುತ್ತದೆ. ಜೊತೆಗೆ ಸ್ಥೂಲಕಾಯವನ್ನು ಕಡಿಮೆ ಮಾಡಲು ಬಯಸುವವರು ಅವಶ್ಯವಾಗಿ ಕಿವಿ ಚುಚ್ಚಿಸಿಕೊಳ್ಳಿ.

ಕಿವಿ ಚುಚ್ಚುವುದರಿಂದ ದೃಷ್ಠಿ ಸುಧಾರಿಸುತ್ತದೆ. ಆಕ್ಯುಪ್ರಶರ್ ಪ್ರಕಾರ ಕಿವಿ ಚುಚ್ಚುವ ಬಿಂದು ಕಣ್ಣಿನ ಜೊತೆ ಸಂಪರ್ಕ ಹೊಂದಿರುತ್ತದೆ. ಆ ಬಿಂದುವಿಗೆ ಒತ್ತಡ ಬಿದ್ದಾಗ ಕಣ್ಣಿನ ದೃಷ್ಠಿ ಸ್ಪಷ್ಟವಾಗುತ್ತದೆ.

ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇದು ಸಹಕಾರಿ. ಕಿವಿ ಚುಚ್ಚುವುರಿಂದ ಮೆದುಳಿನಲ್ಲಿ ರಕ್ತ ಸಂಚಾರ ಸುಲಭವಾಗುತ್ತದೆ. ಇದರಿಂದ ಬುದ್ದಿ ವೇಗವಾಗಿ ಕೆಲಸ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನವೂ ಬಹಳ ಒತ್ತಡದಿಂದ ಕೂಡಿದೆ.

Mon Jan 16 , 2023
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನವೂ ಬಹಳ ಒತ್ತಡದಿಂದ ಕೂಡಿದೆ. ಪ್ರತಿ ಕ್ಷಣವೂ ಪೈಪೋಟಿ, ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಖಿನ್ನತೆ ಆವರಿಸಿಕೊಳ್ಳುತ್ತದೆ. ಕೇವಲ ಮೊಸರು ತಿನ್ನುವ ಮೂಲಕ ನೀವು ಖಿನ್ನತೆಯಿಂದ ಪಾರಾಗಬಹುದು. ಸಂಶೋಧನೆಯೊಂದರಲ್ಲಿ ಮೊಸರು ಖಿನ್ನತೆಗೆ ಮದ್ದು ಅನ್ನೋದು ದೃಢಪಟ್ಟಿದೆ. ಮೊಸರಿನಲ್ಲಿರುವ ಪ್ರೋ ಬ್ಯಾಕ್ಟೀರಿಯಾ ಲ್ಯಾಕ್ಟೋಬ್ಯಾಸಿಲ್ಲಸ್, ಖಿನ್ನತೆ ಮತ್ತು ಆತಂಕವನ್ನು ದೂರ ಮಾಡುತ್ತದೆ. ಮೊಸರು ಸೇವನೆಯಿಂದ […]

Advertisement

Wordpress Social Share Plugin powered by Ultimatelysocial