ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನವೂ ಬಹಳ ಒತ್ತಡದಿಂದ ಕೂಡಿದೆ.

ತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನವೂ ಬಹಳ ಒತ್ತಡದಿಂದ ಕೂಡಿದೆ. ಪ್ರತಿ ಕ್ಷಣವೂ ಪೈಪೋಟಿ, ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ಖಿನ್ನತೆ ಆವರಿಸಿಕೊಳ್ಳುತ್ತದೆ. ಕೇವಲ ಮೊಸರು ತಿನ್ನುವ ಮೂಲಕ ನೀವು ಖಿನ್ನತೆಯಿಂದ ಪಾರಾಗಬಹುದು. ಸಂಶೋಧನೆಯೊಂದರಲ್ಲಿ ಮೊಸರು ಖಿನ್ನತೆಗೆ ಮದ್ದು ಅನ್ನೋದು ದೃಢಪಟ್ಟಿದೆ. ಮೊಸರಿನಲ್ಲಿರುವ ಪ್ರೋ ಬ್ಯಾಕ್ಟೀರಿಯಾ ಲ್ಯಾಕ್ಟೋಬ್ಯಾಸಿಲ್ಲಸ್, ಖಿನ್ನತೆ ಮತ್ತು ಆತಂಕವನ್ನು ದೂರ ಮಾಡುತ್ತದೆ.

ಮೊಸರು ಸೇವನೆಯಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಖಿನ್ನತೆಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಬಹಳಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಖಿನ್ನತೆಗೆ ಮೊಸರೇ ಮದ್ದು ಅನ್ನೋದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ. ಇಲಿಗಳ ಆಹಾರದಲ್ಲಿ ಲ್ಯಾಕ್ಟೋಬ್ಯಾಸಿಲ್ಲಸ್ ಪ್ರಮಾಣ ಕಡಿಮೆ ಮಾಡಿದಾಗ ಅವು ಖಿನ್ನತೆಗೆ ಒಳಗಾಗಿದ್ದವು. ಆಹಾರದಲ್ಲಿ ಪ್ರೋ ಬ್ಯಾಕ್ಟೀರಿಯಾ ಅಂಶವನ್ನು ಸೇರ್ಪಡೆ ಮಾಡಿದಾಗ ಸಹಜ ಸ್ಥಿತಿಗೆ ಮರಳಿದ್ದವು.

ಹೊಟ್ಟೆಯಲ್ಲಿರುವ ಲ್ಯಾಕ್ಟೋಬ್ಯಾಸಿಲ್ಲಸ್ ಪ್ರಮಾಣ ಮೆಟಾಬೊಲಿಕ್ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಖಿನ್ನತೆ ಆವರಿಸಿಕೊಳ್ಳುತ್ತದೆ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ಮೇಲೆ ನಿಮ್ಮ ಡಯಟ್ ನಲ್ಲಿ ಮೊಸರನ್ನೂ ಸೇರಿಸಿ. ಆದ್ರೆ ಮೊಸರನ್ನು ಯಾವ ಪ್ರಮಾಣದಲ್ಲಿ ಸೇವಿಸಿದ್ರೆ ಉತ್ತಮ ಅನ್ನೋ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಬೆಂಗಳೂರಿಗೆ ಪ್ರಿಯಾಂಕಾ ಗಾಂಧಿ ಆಗಮನ.

Mon Jan 16 , 2023
ಇಂದು ಪ್ರಿಯಾಂಕಾ ಗಾಂಧಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ನಾ ನಾಯಕಿ  ಎಂಬ ಮಹಿಳಾ ಸಮಾವೇಶವನ್ನು   ಉದ್ಘಾಟಿಸಲಿದ್ದಾರೆ.ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ನಾನಾ ಕಸರತ್ತಿಗೆ ಇಳಿದಿವೆ. ಭರ್ಜರಿ ಪ್ರಚಾರಕ್ಕೆ ವೇದಿಕೆ ಸಿದ್ದಪಡಿಸುತ್ತಿವೆ. ಸದ್ಯ ಬೆಂಗಳೂರಿನ ರಸ್ತೆಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ  ಅವರ ಬೃಹತ್ ಕಟೌಟ್​ಗಳು ರಾರಾಜಿಸುತ್ತಿವೆ. ಇಂದು ಪ್ರಿಯಾಂಕಾ ಗಾಂಧಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ನಾ ನಾಯಕಿ  ಎಂಬ ಮಹಿಳಾ ಸಮಾವೇಶವನ್ನು  […]

Advertisement

Wordpress Social Share Plugin powered by Ultimatelysocial