ಬೆಲ್ಲವು ನೈಸರ್ಗಿಕ ಸಿಹಿಕಾರಕ. ಅನೇಕರು ಇದನ್ನು ಚಳಿಗಾಲದಲ್ಲಿ ಚಹಾ ಮಾಡಲು ಬಳಸುತ್ತಾರೆ.

ಬೆಲ್ಲವು ನೈಸರ್ಗಿಕ ಸಿಹಿಕಾರಕ. ಅನೇಕರು ಇದನ್ನು ಚಳಿಗಾಲದಲ್ಲಿ ಚಹಾ ಮಾಡಲು ಬಳಸುತ್ತಾರೆ. ಬೆಲ್ಲ ನಮ್ಮ ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಇದನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಚಹಾದ ಹೊರತಾಗಿ ಬೆಲ್ಲದಿಂದ ಮಾಡಿದ ಸಿಹಿತಿಂಡಿಗಳು, ಪಾಯಸ ಇವೆಲ್ಲವೂ ಆರೋಗ್ಯಕರವಾಗಿರುತ್ತವೆ.

ಬೆಲ್ಲ ಅನೇಕ ರೀತಿಯ ಪೋಷಕಾಂಶಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. ಪ್ರತಿದಿನ ಬೆಲ್ಲದ ಪಾನಕ ಕುಡಿಯುವುದರಿಂದ ಅನೇಕ ರೀತಿಯ ಲಾಭಗಳಿವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲದ ಪಾನಕ ಕುಡಿಯುವುದು ಅತ್ಯಂತ ಸೂಕ್ತ.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ

ಸೋಂಕುಗಳ ವಿರುದ್ಧ ಹೋರಾಡಲು ಬೆಲ್ಲದ ಪಾನಕ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ವಿಟಮಿನ್ ಬಿ1, ಬಿ6, ಸಿ ಮತ್ತು ಮೆಗ್ನೀಸಿಯಮ್ ಇದರಲ್ಲಿ ಕಂಡುಬರುತ್ತದೆ. ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಕೂಡ ಸಮೃದ್ಧವಾಗಿವೆ.

ತೂಕ ಕಡಿಮೆ ಮಾಡುತ್ತದೆ

ಅಧಿಕ ತೂಕದಿಂದ ನೀವು ತೊಂದರೆಗೊಳಗಾಗಿದ್ದರೆ, ಬೆಲ್ಲದ ಪಾನಕವನ್ನು ಬಳಸಬೇಕು. ಇದು ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ. ಬೆಲ್ಲದಲ್ಲಿ ಪೊಟ್ಯಾಸಿಯಮ್ ಇದೆ, ಇದು ದೇಹದಲ್ಲಿನ ಎಲೆಕ್ಟ್ರೋಲೈಟ್ ಮತ್ತು ಖನಿಜಗಳ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದಲ್ಲದೆ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಅನಗತ್ಯ ಕೊಬ್ಬನ್ನು ಕರಗಿಸುತ್ತದೆ.

ದೇಹವನ್ನು ಡಿಟಾಕ್ಸ್ ಮಾಡುತ್ತದೆ

ಬೆಲ್ಲದ ಪಾನಕ ಕುಡಿದರೆ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕಬಹುದು. ಇದರಲ್ಲಿ ಉತ್ತಮ ಪ್ರಮಾಣದ ನಾರಿನಂಶವಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಸದೃಢವಾಗಿಡಲು ನೆರವಾಗುತ್ತದೆ. ಆಹಾರ ಪೈಪ್, ಉಸಿರಾಟದ ವ್ಯವಸ್ಥೆ, ಶ್ವಾಸಕೋಶಗಳು, ಕರುಳು ಮತ್ತು ಹೊಟ್ಟೆಯನ್ನು ಸಹ ಸ್ವಚ್ಛಗೊಳಿಸುತ್ತದೆ.

ಬೆಲ್ಲದ ಪಾನಕ ತಯಾರಿಸುವುದುಹೇಗೆ?

ಬೆಲ್ಲದ ಪಾನಕ ತಯಾರಿಸಲು ನಿಮಗೆ ಕೇವಲ 3 ರಿಂದ 4 ವಸ್ತುಗಳು ಬೇಕಾಗುತ್ತವೆ. ಬೆಲ್ಲ, ಚಿಯಾ ಸೀಡ್ಸ್‌, ನಿಂಬೆ ರಸ ಮತ್ತು ಪುದೀನ ಎಲೆಗಳನ್ನು ತೆಗೆದುಕೊಳ್ಳಿ. ಮೊದಲು ಒಂದು ಲೋಟ ನೀರಿಗೆ ಬೆಲ್ಲವನ್ನು ಹಾಕಿ ಕುದಿಸಿ. ಬೆಲ್ಲವು ಸಂಪೂರ್ಣವಾಗಿ ಕರಗುವ ತನಕ ಈ ನೀರನ್ನು ಕುದಿಸಬೇಕು. ನಂತರ ಗ್ಯಾಸ್ ಆಫ್ ಮಾಡಿ ಬೆಲ್ಲದ ಪಾನಕ ತಣ್ಣಗಾಗಲು ಬಿಡಿ. ನಂತರ ಇದಕ್ಕೆ ಮೂರ್ನಾಲ್ಕು ಹನಿ ಅಥವಾ ಅರ್ಧ ಚಮಚ ನಿಂಬೆ ರಸವನ್ನು ಹಾಕಿ. ಈ ಬೆಲ್ಲದ ನೀರನ್ನು ಅರ್ಧ ಗಂಟೆ ಹಾಗೇ ಇಡಿ. ನಂತರ ಚಿಯಾ ಸೀಡ್ಸ್‌ ಮತ್ತು ಪುದೀನಾ ಎಲೆಗಳನ್ನು ಸೇರಿಸಿಕೊಳ್ಳಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು ಸವಿಯಿರಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆ.

Tue Jan 17 , 2023
  ಪಟ್ಟಣದ ಪಿಲೇಕೆಮ್ಮ ನಗರದ ಸಮಾಜ ಸೇವಕ ಪ್ರಶಾಂತ ಕಾಳೆಯವರು 2022-23ನೇ ಸಾಲಿನ ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಯುವ ಒಕ್ಕೂಟ ಬೆಂಗಳೂರ ಹಾಗೂ ದಕ್ಷೀಣ ಕನ್ನಡ ಜಿಲ್ಲೇಯ ಕಡಪಾ ತಾಲೂಕಿನಲ್ಲಿ ದಿ, 18 ಬುಧವಾರದಂದು ಹಮ್ಮಿಕೊಂಡಿರುವ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಹಾಗೂ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ, ಎಸ್ […]

Advertisement

Wordpress Social Share Plugin powered by Ultimatelysocial