ರಸ್ತೆಯೊಂದಕ್ಕೆ ಪುನೀತ್​ ಹೆಸರಿಡುವುದಕ್ಕೆ ಅಂಬರೀಷ್​ ಅಭಿಮಾನಿಗಳು ಆಕ್ಷೇಪ;

ರಸ್ತೆಯೊಂದಕ್ಕೆ ಪುನೀತ್​ ಹೆಸರಿಡುವುದಕ್ಕೆ ಅಂಬರೀಷ್​ ಅಭಿಮಾನಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಪುನೀತ್​ ನಿಧನದ ಬಳಿಕ ಹಲವು ರಸ್ತೆಗಳಿಗೆ ಅವರ ಹೆಸರು ಇಡಲಾಗಿದೆ. ಎಷ್ಟೊ ಕಡೆ ಜನರೇ ಪುನೀತ್ ರಾಜ್‌ಕುಮಾರ್ ಅವರ ಹೆಸರಲ್ಲಿ ರಸ್ತೆಗಳ ಮಧ್ಯೆ ಬೋರ್ಡ್ ನೆಟ್ಟು ಬಿಟ್ಟಿದ್ದಾರೆ.

ಇದರ ಜೊತೆಗೆ ನಾಯಂಡ ಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್​ ಹೆಸರು ಇಡುವಂತೆ ಅಪ್ಪು ಅಭಿಮಾನಿಗಳು ಮನವಿ ಸಲ್ಲಿಸಿದ್ದರು.

ಆದರೆ ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳ ಮನವಿಗೆ ರೆಬೆಲ್‌ ಸ್ಟಾರ್‌ ಅಭಿಮಾನಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ಹಲವು ರಸ್ತೆಗಳಿಗೆ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನು ಇಡಲಾಗಿದೆ. ಅದೇ ರೀತಿ ‘ರೆಬೆಲ್​ ಸ್ಟಾರ್​’ ಅಂಬರೀಷ್ ಅವರಿಗೂ ಇಂಥ ಗೌರವಗಳು ಸಲ್ಲಬೇಕು ಎಂದು ಅಂಬಿ ಫ್ಯಾನ್ಸ್​ ಬೇಡಿಕೆ ಇಡುತ್ತಿದ್ದಾರೆ. ಬೆಂಗಳೂರಿನ ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್​ ಹೆಸರು ಇಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಬಿಬಿಎಂಪಿ ಒಪ್ಪಿಗೆ ಸೂಚಿಸಿದೆ.

ಇತ್ತೀಚೆಗೆ ಈ ಬಗ್ಗೆ ಜಾಹೀರಾತು ನೀಡಿದ್ದ ಬಿಬಿಎಂಪಿ, ಈ ನಿರ್ಧಾರಕ್ಕೆ ಜನವರಿ 29ರ ಒಳಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದು ಹೇಳಿತ್ತು. ಈಗ ಇದಕ್ಕೆ ಅಂಬರೀಷ್ ​ ಅಭಿಮಾನಿಗಳೇ ಆಕ್ಷೇಪಣೆ ಸಲ್ಲಿಕೆ ಮಾಡುತ್ತಿದ್ದಾರೆ. ಇದರಿಂದ ಅಪ್ಪು ಅಭಿಮಾನಿಗಳು ಹಾಗೂ ಅಂಬಿ ಅಭಿಮಾನಿಗಳ‌ ನಡುವೆ ಕೋಲ್ಡ್‌ ವಾರ್ ಆರಂಭ ಆಗಿವೆ ಎನ್ನುವ ಪ್ರಶ್ನೆ ಮೂಡಿದೆ.

ಅಂಬರೀಷ್​ ಹಾಗೂ ಪುನೀತ್​ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅಂಬರೀಷ್ ಕುಟುಂಬ ಮೊದಲಿನಿಂದಲೂ ರಾಜ್‌ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ​ಆದರೆ ಈಗ ಅಪ್ಪು ಮತ್ತು ಅಂಬಿ ಇಬ್ಬರೂ ಇಲ್ಲ. ರಸ್ತೆಗೆ ಅವರ ಹೆಸರು ಇಡುವ ವಿಚಾರದಲ್ಲಿ ಅಭಿಮಾನಿಗಳ ಮಧ್ಯೆ ಸಮರ ಶುರುವಾಗಿದೆ. “ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್​ ಹೆಸರು ಇಡಬಾರದು. ಇದಕ್ಕೆ ಅಂಬರೀಶ್‌ ಅವರ ಹೆಸರು ಇಡಬೇಕು. 1993ರ ಸಂದರ್ಭದಲ್ಲಿ ಈ ರಸ್ತೆಗೆ ಅಂಬರೀಶ್ ಅವರ ಹೆಸರು ಇಡಲು ಬಾಮಾ ಹರೀಶ್​ ಅವರು ಹೋರಾಟ ಮಾಡಿದ್ದರು ಎಂದು ನಮಗೆ ಮಾಹಿತಿ ಸಿಕ್ಕಿದೆ” ಎಂದು ಅಂಬರೀಷ್ ​ ಅಭಿಮಾನಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಜೊತೆಗೆ ಈ ರಸ್ತೆಗೆ ಅಂಬರೀಶ್‌ ಅವರ ಹೆಸರನ್ನೇ ಇಡಬೇಕು ಎನ್ನುವ ಮನವಿ ಸಲ್ಲಿಸಿದ್ದಾರೆ.

ಈ ಮೂಲಕ ಮತ್ತೇ ಫ್ಯಾನ್‌ ವಾರ್‌ ಹೊಗೆ ಆಡುತ್ತಿದೆ. ಇಬ್ಬರ ಅಭಿಮಾನಿಗಳು ಈಗ ತಮ್ಮ ನೆಚ್ಚನ ನಟರ ಹೆಸರನ್ನು ಈ ರಸ್ತೆಗೆ ಇಡಬೇಕು ಎನ್ನುವ ಬಗ್ಗೆ ಹೋರಾಟಕ್ಕಿಳಿದಿದ್ದಾರೆ. ಈಗ ಅಂಬಿ ಅಭಿಮಾನಿಗಳು ಆಕ್ಷೇಪ ಮಾಡಿರುವ ಕಾರಣಕ್ಕೆ, ಈ ರಸ್ತೆಗೆ ಪುನೀತ್‌ ರಾಜ್‌ಕುಮರ್ ಹೆಸರು ಇಡುವುದು ಅನುಮಾನ. ಆದರೆ ಅಪ್ಪು ಅಭಿಮಾನಿಗಳು ಮುಮದೆ ಯಾವ ಕ್ರಮಕ್ಕೆ ಮುಂದಾಗುತ್ತಾರೆ ಅಂತ ನೋಡಬೇಕು.

ಸದ್ಯ, ಈ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಯಾವುದೇ ಸಂದರ್ಭದಲ್ಲೂ ಈ ವಿಚಾರ ದೊಡ್ಡ ಮಟ್ಟದಲ್ಲಿ ಸ್ಫೋಟಗೊಳ್ಳಬಹುದು. ಈ ಬಗ್ಗೆ ಅಂಬರೀಷ್​ ಪತ್ನಿ, ಸಂಸದೆ, ಸುಮಲತಾ ಅಂಬರೀಷ್ ​ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಸರ್ಕಾರದಿಂದ 75 ಸರ್ಕಾರಿ ಶಾಲೆಗಳನ್ನು 'ನೇತಾಜಿ ಅಮೃತ ಶಾಲೆ'ಗಳೆಂದು ಘೋಷಣೆ;

Tue Jan 25 , 2022
ಬೆಂಗಳೂರು: ರಾಜ್ಯದಲ್ಲಿ ಪ್ರತಿ ಜಿಲ್ಲೆಯ 2 ಶಾಲೆಗಳಂತೆ 75 ಶಾಲೆಗಳನ್ನು ನೇತಾಜಿ ಅಮೃತ ಶಾಲೆಗಳೆಂದು ( Netaji Ambrut School ) ಸರ್ಕಾರ ಘೋಷಿಸಿದೆ. ಈ ಶಾಲೆಗಳಲ್ಲಿ ಎನ್ ಸಿಸಿ ಘಟಕಗಳನ್ನು ( NCC Training Unit ) ಸ್ಥಾಪಿಸಲಾಗುತ್ತದೆ ಎಂಬುದಾಗಿ ತಿಳಿಸಿದೆ. ಈ ಬಗ್ಗೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಕನಿಷ್ಟ 2ರಂತೆ ಒಟ್ಟು […]

Advertisement

Wordpress Social Share Plugin powered by Ultimatelysocial