ನೀರು ಕುತಿಯುವುದು ನಮಗೆ ಎಷ್ಟೊಂದು ಮುಖ್ಯ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ. ನೀರು ಕೇವಲ ನಮ್ಮ ಬಾಯಾರಿಕೆಯನ್ನು ನೀಗಿಸದೆ, ನಮ್ಮ ದೇಹವನ್ನು ಸಾಕಷ್ಟು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ ಮತ್ತು ಆರೋಗ್ಯಕರವಾಗಿರಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಆದರೂ ಕೂಡ ನಾವು ನೀರು ಕುಡಿಯುವ ಅಭ್ಯಾಸಗಳು ಆರೋಗ್ಯಕರವೇ ಅಥವಾ ಇಲ್ಲವೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಏಕೆಂದರೆ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ, ಚಯಾಪಚಯ, ಹಾರ್ಮೋನುಗಳು ಇತ್ಯಾದಿಗಳ ಮೇಲೆ ಅದು ಪರಿಣಾಮ ಬೀರುವುದರಿಂದ ಹಾವು ಯಾವಾಗ ಮತ್ತು ಹೇಗೆ ನೀರನ್ನು ಕುಡಿಯುತ್ತೇವೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಆರೋಗ್ಯಕರ ರೀತಿಯಲ್ಲಿ ನೀರನ್ನು ಕುಡಿಯುವ 4 ಬೇಸಿಕ್ ನಿಯಮಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
1. ಆಯುರ್ವೇದದಲ್ಲಿ ಉಷಾಪಾನ್ ಎಂದು ಕರೆಯಲ್ಪಡುವ ನೀರನ್ನು ಬೆಳಗಿನ ಜಾವದಲ್ಲಿ ಕುಡಿಯಿರಿ. ಆರೋಗ್ಯವಾಗಿರಲು ಬಿಸಿ ನೀರು ಅಥವಾ ತಾಮ್ರದ ನೀರನ್ನು ಕುಡಿಯಬೇಕು. ಈ ಅಭ್ಯಾಸವು ನಮಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
2. ತಿಂದ ತಕ್ಷಣ ನೀರು ಕುಡಿಯಬೇಡಿ. ನಾವು ಆಹಾರವನ್ನು ಸೇವಿಸಿದ ತಕ್ಷಣ ನೀರನ್ನು ಕುಡಿಯುತ್ತಿದ್ದರೆ, ನಮ್ಮ ಆಹಾರವು ನಿಧಾನವಾಗಿ ಜೀರ್ಣವಾಗುತ್ತದೆ, ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀರ್ಣಕಾರಿ ಶಕ್ತಿ ಕಡಿಮೆಯಾಗುತ್ತದೆ.
3. ಯಾವಾಗಲೂ ಕುಳಿತುಕೊಂಡು ನೀರು ಕುಡಿಯಿರಿ, ಬೇಗನೆ ಅಥವಾ ನಿಂತ ಭಂಗಿಯಲ್ಲಿ ನೀರನ್ನು ಕುಡಿಯಬೇಡಿ. ಬೇಗನೆ ನೀರು ಕುಡಿಯಬೇಡಿ, ಬದಲಿಗೆ ಗುಟುಕು ನೀರು ಕುಡಿಯಿರಿ.
https://play.google.com/store/apps/details?id=com.speed.newskannada