ಒಂದು ಕಾಲದಲ್ಲಿ ಕೊತ್ತಂಬರಿ ಸೊಪ್ಪನ್ನು ಕಾಮೊತ್ತೇಜನಕ್ಕಾಗಿ ಬಳಸುತ್ತಿದ್ದರಂತೆ.

 

ಅಡುಗೆಮನೆಯಲ್ಲಿ ಕೊತ್ತಂಬರಿ ಸೊಪ್ಪು ಇಲ್ಲದಿದ್ದರೆ ಅಡುಗೆಯಲ್ಲಿ ಸ್ವಾದ ಬರುವುದಿಲ್ಲ ಎನ್ನಲಾಗುತ್ತದೆ, ಆದರೆ, ವಿಶ್ವದ ಒಂದು ಭಾಗದಲ್ಲಿ ಕೊತ್ತಂಬರಿ ಸೊಪ್ಪನ್ನು ದ್ವೇಷಿಸಲಾಗುತ್ತದೆ ಎಂದು ಹೇಳಿದರೆ ನಿಮಗೂ ಆಶ್ಚರ್ಯವಾಗಬಹುದು, ಅಷ್ಟೇ ಅಲ್ಲ ಇನ್ನೂ ಆಶ್ಚರ್ಯಕಾರಕ ಸಂಗಟಿ ಎಂದರೆ ಆ ಜನರು ಫೆಬ್ರವರಿ 24 ಅನ್ನು ಕೊತ್ತಂಬರಿ ದ್ವೇಷಿಗಳ ದಿನವನ್ನಾಗಿ ಆಚರಿಸುತ್ತಾರಂತೆ.

ಇದರಂತೆಯೇ ಕೊತ್ತಂಬರಿ ಸೊಪ್ಪಿನ ಹೆಸರು ಕೂಡ ಹೀಗೆ ಬಳುವಳಿಗೆ ಬಂದಿದೆ. ಕೊತ್ತಂಬರಿ ಹೆಸರು ಗ್ರೀಕ್ ಪದ ಕೊರೊಸ್ ನಿಂದ ಬಂದಿದೆ, ಇದರರ್ಥ ಗಬ್ಬು ಹುಳು. 15-16 ನೇ ಶತಮಾನದಲ್ಲಿ, ಲೈಂಗಿಕ ಸಂಬಂಧಗಳನ್ನು ಜಾಗೃತಗೊಳಿಸಲು ಈ ಎಲೆಗಳನ್ನು ಬಳಸಲಾಗುತ್ತಿತ್ತು ಎಂದು ತಿಳಿದರೆ ನೀವೂ ಕೂಡ ಅವಾಕ್ಕಾಗುವಿರಿ. ಈ ಅಚ್ಚರಿಯ ಕಥೆಗಳ ಬಗ್ಗೆ ತಿಳಿಯೋಣ ಬನ್ನಿ.

ಕೊತ್ತಂಬರಿ ಸೊಪ್ಪಿನ ಇತಿಹಾಸ?
ಕೊತ್ತಂಬರಿ ಸೊಪ್ಪನ್ನು ಅಡುಗೆಮನೆಯಲ್ಲಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ಬೈಬಲ್ನಲ್ಲಿ ಸಹ ಅದರ ಬಗ್ಗೆ ಉಲ್ಲೇಖಿಸಲಾಗಿದೆ. ಇದಲ್ಲದೆ, ಇದರ ಬೀಜಗಳ ಪುರಾವೆಗಳು ಸುಮಾರು 5000 BC ಯಲ್ಲಿ ಕಂಡುಬಂದಿವೆ.

ತಿಗಣೆಗಳಿಗೆ ಹೋಲಿಸಲಾಗುತ್ತಿತ್ತು
ಆಹಾರ ಪದಾರ್ಥಗಳ ಟೇಸ್ಟ್ ಹೆಚ್ಚಿಸಲು ನಾವು ತರಕಾರಿ, ಅವಲಕ್ಕಿ ಹಾಗೂ ಉಪ್ಪಿಟ್ಟಿನಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸುತ್ತೇವೆ. ಆದರೆ ಈ ಸೊಪ್ಪಿನ ಇತಿಹಾಸದಲ್ಲಿ ಅಪಾರ ರೋಚಕ ಸಂಗತಿಗಳು ಅಡಗಿವೆ. ಈ ಹೆಸರು ಕೊರೊಸ್ ಎಂಬ ಗ್ರೀಕ್ ಪದದಿಂದ ಬಂದಿದೆ. ಇದರ ಅರ್ಥ ಬೆಡ್ಬಗ್ ಅಥವಾ ಸ್ಟಿಂಕ್ ಬಗ್. ಅನೇಕ ಸ್ಥಳಗಳಲ್ಲಿ ಇದನ್ನು ಗಬ್ಬು ನಾರುವ ಮೂಲಿಕೆ ಎಂದೂ ಕೂಡ ಕರೆಯುತ್ತಾರೆ. ಈ ಎಲ್ಲಾ ವಿಷಯಗಳಿಂದ ಜನರು ಅದನ್ನು ಏಕೆ ದ್ವೇಷಿಸುತ್ತಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.

ಈ ಜನರಿಗೆ ಕೊತ್ತಂಬರಿ ಸೊಪ್ಪು ಇಷ್ಟವಿಲ್ಲ
ಆಸ್ಟ್ರೇಲಿಯಾದ ಹೆಚ್ಚಿನ ಜನರು ಕೊತ್ತಂಬರಿ ಸೊಪ್ಪಿನ ವಾಸನೆ ಕಂಡು ದೂರಕ್ಕೆ ಓಡುತ್ತಾರೆ, ಕೊತ್ತಂಬರಿ ಸೊಪ್ಪ ಅಲ್ಲಿ ಅತಿ ಹೆಚ್ಚು ದ್ವೇಷಿಸಲ್ಪಡುವ ತರಕಾರಿಯಾಗಿದೆ . ಇದಕ್ಕಾಗಿ ಐ ಹೇಟ್ ಕೋರಿಎಂಡರ್ ಡೇ ಅನ್ನು 14 ವರ್ಷಗಳ ಹಿಂದೆ ಆರಂಭಿಸಲಾಯಿತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇದರಲ್ಲಿ ಕೊತ್ತಂಬರಿ ಸೊಪ್ಪಿನ ವಾಸನೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಜನರು ತಮ್ಮ ಅನುಭವಗಳನ್ನು ಹಂಚಿಕೊಲ್ಲುತ್ತಾರಂತೆ. ಇದೇ ವರ್ಷದಿಂದ ಪ್ರತಿ ವರ್ಷ ಫೆಬ್ರವರಿ 24 ರಂದು ಕೊತ್ತಂಬರಿ-ಹೇಟರ್ಸ್ ಡೇ ಆರಂಭಿಸಲಾಯಿತು ಎಂಬುದು ಐತಿಹ್ಯ.

ಕೊತ್ತಂಬರಿಯು ಲೈಂಗಿಕ ಬಯಕೆ ಹೆಚ್ಚಿಸುತ್ತಂತೆ
ಕೊತ್ತಂಬರಿ ಸೊಪ್ಪನ್ನು ಹಿಂದಿನ ಕಾಲದಲ್ಲಿ ವಿವಿಧ ಉದ್ದೇಶಗಳಿಗೆ ಬಳಸುತ್ತಿದ್ದರು. ಆ ಸಮಯದಲ್ಲಿ, ಇದನ್ನು ತರಕಾರಿಗಳಲ್ಲಿ ಮಸಾಲೆಯಾಗಿ ಅಥವಾ ಸಾರುಗಳಲ್ಲಿ ಅಲಂಕಾರಕ್ಕಾಗಿ ಬಳಸಲಾಗುತ್ತಿತ್ತು. ಇದಲ್ಲದೆ, ಇದನ್ನು ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಗಿಡಮೂಲಿಕೆಯಾಗಿಯೂ ಬಳಸಲಾಗುತ್ತಿತ್ತು. 15 ನೇ-16 ನೇ ಶತಮಾನದ ನಡುವೆ, ಯುರೋಪ್ನಲ್ಲಿ, ಕೊತ್ತಂಬರಿ ಎಲೆಗಳನ್ನು ವೈನ್ನೊಂದಿಗೆ ಚಿಮುಕಿಸಲಾಗುತ್ತಿತ್ತು ಎನ್ನಲಾಗುತ್ತದೆ. ಇದರಿಂದ ಲೈಂಗಿಕ ಸಂಬಂಧಗಳ ಬಯಕೆಯು ಜಾಗೃತಗೊಳ್ಳುತ್ತದೆ ಎಂಬುದು ಆಗಿನ ಜನರ ಭಾವನೆಯಾಗಿತ್ತು. ಈ ಕಾರಣಕ್ಕಾಗಿ, ಇದನ್ನು ಕಾಮೋತ್ತೇಜಕ ಆಹಾರದ ವರ್ಗದಲ್ಲಿ ಇರಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನವನ್ನು ಸೃಷ್ಟಿಸಿದ ಗುಪ್ತಚರ ಸಂಸ್ಥೆಯ ನೈಜ ಚಿತ್ರಣ.

Sun Jan 22 , 2023
’ಮಿಷನ್ ಮಜ್ನು’ ಫಿಲ್ಮ್ ನಲ್ಲಿ ಕಂಡುಬರುವ ಗುಪ್ತಚರ ಸಂಸ್ಥೆಯ ನಿಜವಾದ ಚಿತ್ರಣ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಜನವರಿ ೨೦ ರಂದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಆಗಿದೆ. ಸಿದ್ಧಾರ್ಥ್-ರಶ್ಮಿಕಾ ಜೋಡಿ ಇದರಲ್ಲಿ ಪ್ರೇಕ್ಷಕರ ಹೃದಯಗಳನ್ನು ಗೆದ್ದಿದೆ. ’ರಾ’ ಏಜೆಂಟ್‌ಗಳು ಸ್ವಯಂಚಾಲಿತ ಬಂದೂಕುಗಳನ್ನು ನಿರ್ವಹಿಸುವವರಲ್ಲ, ಆದರೆ ವರ್ಷಗಟ್ಟಲೆ ತಮ್ಮ ಗುರುತನ್ನು ಮರೆಮಾಚುವ, ಅಗತ್ಯ ಇಂಟೆಲ್‌ಗಳನ್ನು ಪಡೆದುಕೊಂಡು ತಮ್ಮ ಮಾಹಿತಿಯೊಂದಿಗೆ ದೊಡ್ಡ ಕಾರ್ಯಾಚರಣೆಗಳನ್ನು ನಿರ್ವಹಿಸುವವರು. ಬಾಲಿವುಡ್‌ನ ಉತ್ಪ್ರೇಕ್ಷಿತ ಸೂಪರ್‌ಹೀರೋ ರಾ ಏಜೆಂಟ್ ಕಥೆಗಳ […]

Advertisement

Wordpress Social Share Plugin powered by Ultimatelysocial