ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ

ಬಿಪಿ ಸಮಸ್ಯೆ ಇದೆಯೇ? ಹಾಗಾದರೆ ನೀವು ಆಹಾರಕ್ರಮದ ಕಡೆ ತುಂಬಾನೇ ಗಮನಹರಿಸಬೇಕು. ಅದರಲ್ಲೂ ಅಧಿಕ ಸೋಡಿಯಂ ಇರುವ ಆಹಾರ ಸೇವಿಸಬಾರದು, ಅಧಿಕ ಸೋಡಿಯಂ ಇರುವ ಆಹಾರಗಳು ಬಿಪಿ ಮತ್ತಷ್ಟು ಹೆಚ್ಚು ಮಾಡುವುದು.

ಬಿಪಿ ಸಮಸ್ಯೆ ಇರುವವರು ಪಿಜ್ಜಾ, ಸ್ಯಾಂಡ್‌ವಿಚ್‌, ಡ್ರೆಸ್ಸಿಂಗ್‌ ಮಾಡಿದ ಸಲಾಡ್, ಮಜ್ಜಿಗೆ ಬಗೆಯ ಆಹಾರಗಳನ್ನು ದೂರವಿಡುವುದು ಒಳ್ಳೆಯದು:

ಟೇಬಲ್‌ ಸಾಲ್ಟ್

ಉಪ್ಪಿನಂಶ ಅಧಿಕ ತೆಗೆದುಕೊಂಡರೆ ದೇಹದಲ್ಲಿರುವ ನೀರಿನಂಶ ಕಡಿಮೆಯಾಗುವುದು, ಅಲ್ಲದೆ ರಕ್ತದಲ್ಲಿರುವ ನೀರಿನಂಶದ ಮೇಲೆ ಅಧಿಕ ಒತ್ತಡ ಬೀಳುವುದು ಇದರಿಂದ ರಕ್ತದೊತ್ತಡ ಅಧಿಕವಾಗುವುದು. ಆದ್ದರಿಂದ ಬಿಪಿ ಸಮಸ್ಯೆ ಇದ್ದರೆ ಉಪ್ಪಿನಂಶದ ಆಹಾರ ಕಡಿಮೆ ತೆಗೆದುಕೊಳ್ಳುವುದು ಒಳ್ಳೆಯದು. ಬಿಪಿ ಸಮಸ್ಯೆ ಇರುವವರು ಟೇಬಲ್ ಸಾಲ್ಟ್ ಬಳಸದಿರುವುದು ಒಳ್ಳೆಯದು. ಅದರ ಜೊತೆಗೆ ಈ ಬಗೆಯ ಆಹಾರಗಳನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು.

ಹಾಲಿನ ಉತ್ಪನ್ನಗಳು:

ಬಿಪಿ ಸಮಸ್ಯೆ ಇರುವವರಿಗೆ ಹಾಲಿನ ಉತ್ಪನ್ನಗಳು ಒಳ್ಳೆಯದಲ್ಲ. ಕಾಟೆಜ್ ಚೀಸ್, ಮಜ್ಜಿಗೆ, ಸಂಸ್ಕರಿಸಿದ ಚೀಸ್ ಇವುಗಳಲ್ಲಿ ಸೋಡಿಯಂ ಅಧಿಕವಿರುತ್ತದೆ. ಇವುಗಳನ್ನು ಅಪರೂಪಕ್ಕೆ ತಿನ್ನಬಹುದು, ಆದರೆ ಪ್ರತಿದಿನ ಬಳಸಬೇಡಿ. ಯಾರಿಗೆ ಹೈಪರ್‌ ಟೆನ್ಷನ್ ಇದೆಯೋ ಅವರು ಬಳಸದಿದ್ದರೆ ಒಳ್ಳೆಯದು.

ಸ್ಯಾಂಡ್‌ವಿಚ್‌

ತುಂಬಾ ಹಸಿವು ಉಂಟಾಗುತ್ತಿದೆ ಎಂದಾಗ ಬೇಗನೆ ಮಾಡಿ ಸವಿಉವ ಆಹಾರಗಳಲ್ಲೊಂದು ಸ್ಯಾಂಡ್‌ವಿಚ್‌. ಸ್ಯಾಂಡ್‌ವಿಚ್‌ ಆರೋಗ್ಯಕ್ಕೂ ಒಳ್ಳೆಯದು, ಆದರೆ ನಿಮಗೆ ಬಿಪಿ ಸಮಸ್ಯೆಯಿದ್ದರೆ ಸ್ಯಾಂಡ್‌ವಿಚ್‌ ಅತ್ಯುತ್ತಮವಾದ ಆಹಾರವಲ್ಲ. ಸ್ಯಾಂಡ್‌ವಿಚ್‌ಗೆ ಬಳಸುವ ಚೀಸ್‌, ಮಾಂಸ, ಬ್ರೆಡ್‌ ಇವುಗಳಲ್ಲಿ ಅತ್ಯಧಿಕ ಸೋಡಿಯಂ ಇರುತ್ತದೆ.

ಪಿಜ್ಜಾ

ಪಿಜ್ಜಾ ಸವಿಯಲು ತುಂಬಾನೇ ಖುಚಿಯಾಗುವುದು ಅಲ್ವಾ? ಆದರೆ ಬಿಪಿ ಸಮಸ್ಯೆ ಇದ್ದರೆ ಪಿಜ್ಜಾ ತಿನ್ನುವುದರಿಂದ ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಇದನ್ನು ತಯಾರಿಸಲು ಬಳಸುವ ಚೀಸ್, ಮಾಂಸ ಮತ್ತಿತರ ಸಾಮಗ್ರಿಗಳಲ್ಲಿ ಸೋಡಿಯಂ ಅಧಿಕವಿರುತ್ತದೆ, ಆದರೆ ಹೈಪರ್‌ಟೆನ್ಷನ್ ಇದ್ದರೆ ಪಿಜ್ಜಾ ಅತ್ಯುತ್ತಮವಾದ ಆಯ್ಕೆಯಲ್ಲ.

ಮೆಕೊರೊನಿ ಅಂಡ್ ಚೀಸ್:

ಮೆಕೊರೋನಿ ಅಂಡ್‌ ಚೀಸ್‌ ಅತ್ಯಧಿಕ ರಕ್ತದೊತ್ತಡ ಸಮಸ್ಯೆಯಿದ್ದರೆ ಸವಿಯಬೇಡಿ. ಮೆಕೊರೋನಿ ಹಾಗೂ ಚೀಸ್‌ ಸೇರಿದಾಗ ಇದರಲ್ಲಿ ಸೋಡಿಯಂ ಅಧಿಕವಿರುತ್ತದೆ, ಅಪರೂಪಕ್ಕೊಮ್ಮೆ ತಿನ್ನಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರೋಗ್ಯದ ಮೇಲೆ ಪರಿಣಾಮ ಪರಿಣಾಮ ಬೀರುತ್ತೆ ಈ ಕೆಟ್ಟ ಹವ್ಯಾಸ.

Sat Jan 28 , 2023
ನಮ್ಮ ಕೆಟ್ಟ ಹವ್ಯಾಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಕ್ಕಳು ಮೂಗಿನ ಕಿಟ್ಟವನ್ನು ಬಾಯಿಗೆ ಹಾಕ್ತಾರೆ. ದೊಡ್ಡವರಲ್ಲಿಯೂ ಈ ಅಭ್ಯಾಸವಿರುತ್ತದೆ. ಮೂಗಿನ ಕಿಟ್ಟ ಆರೋಗ್ಯ ಹಾಳು ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಸಂಶೋಧಕ ಪ್ರಕಾರ ಮೂಗಿನ ಎದುರಿನಲ್ಲಿ ಸ್ಟ್ಯಾಫಿಲೋಕೊಕಸ್ ಔರೆಸ್ ಬ್ಯಾಕ್ಟೀರಿಯಾ ಇರುತ್ತದೆ. ಕಿಟ್ಟ ಸೇವನೆ ಮಾಡಿದಾಗ ಈ ಬ್ಯಾಕ್ಟೀರಿಯಾ ದೇಹ ಸೇರುತ್ತದೆ. ಈ ಬ್ಯಾಕ್ಟೀರಿಯಾ ಸಂಖ್ಯೆ ದೇಹದಲ್ಲಿ ಹೆಚ್ಚಾದಂತೆ, ಮೂಗಿನಿಂದ ರಕ್ತ ಬರುವುದು, ಅಲರ್ಜಿ, ಮೂಗಿನಲ್ಲಿ […]

Advertisement

Wordpress Social Share Plugin powered by Ultimatelysocial