ದಾವಣಗೆರೆ: ಮಳೆಯ ಅಬ್ಬರ, ಇಂದು ಶಾಲೆಗೆ ರಜೆ!

 

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಶುರುವಾದ ಮಳೆಯ ಆರ್ಭಟವು ಗುರುವಾರವೂ ಮುಂದುವರಿಯಿತು. ಮಳೆಯು ತೀವ್ರಗೊಂಡಿರುವುದರಿಂದ ಶುಕ್ರವಾರ 1ರಿಂದ 10ನೇ ತರಗತಿವರೆಗೆ ಶಾಲೆಗಳಿಗೆ ಜಿಲ್ಲಾಡಳಿತವು ರಜೆ ಘೋಷಿಸಿದೆ.

ಗುರುವಾರ ಬೆಳಿಗ್ಗೆ ಎಂಟು ಗಂಟೆಗೆ ಅಂತ್ಯಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 4.8 ಸೆಂ.ಮೀ ಮಳೆಯಾಗಿದೆ. ಬುಧವಾರ ರಾತ್ರಿಯಿಡೀ ಭಾರಿ ಪ್ರಮಾಣದಲ್ಲಿ ಸುರಿದ ಮಳೆಯು ಗುರುವಾರವೂ ಬಿಡುವಿಲ್ಲದೇ ಸುರಿಯಿತು.

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಂದಾಜು ₹ 1.83 ಕೋಟಿ ನಷ್ಟ ಸಂಭವಿಸಿದೆ. 44 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 1,850 ಎಕರೆ ಭತ್ತದ ಬೆಳೆ ನಾಶವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಬುಧವಾರ ಮಧ್ಯ ರಾತ್ರಿಯ ಬಳಿಕ ಬಿರುಸಿನಿಂದ ಮಳೆ ಸುರಿಯ ತೊಡಗಿತ್ತು. ಹಲವೆಡೆ ಚರಂಡಿಗಳೆಲ್ಲ ತುಂಬಿ ಉಕ್ಕಿ ಹರಿಯಿತು. ಬೆಳಿಗ್ಗೆವರೆಗೂ ಮಳೆಯ ಆರ್ಭಟ ಮುಂದುವರಿದಿತ್ತು. ಗುರುವಾರ ಮುಂಜಾನೆಯಿಂದ ಆಗಾಗ ತುಸು ಬಿಡುವು ನೀಡುತ್ತಿದ್ದ ಮಳೆ ಮತ್ತೆ ತನ್ನ ಆಟವನ್ನು ಮುಂದುವರಿಸಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ಸಂಚಾರಕ್ಕೆ ಅಡ್ಡಿ: ತಾಲ್ಲೂಕಿನ ಹೆಬ್ಬಾಳದಲ್ಲಿ ಅವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿ ಕೈಗೊಂಡಿರುವುದರಿಂದ ಸರ್ವೀಸ್‌ ರಸ್ತೆಯ ಮೇಲೆ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಚರಂಡಿ ಸಮರ್ಪಕವಾಗಿ ಇಲ್ಲದ ಕಾರಣ ಮಳೆ ನೀರು ನಿಂತು ಶ್ರೀ ರುದ್ರೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನೀತು ನಿಂತಿದ್ದರಿಂದ ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಯಿತು. ಗ್ರಾಮದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ಹೊರ ಹಾಕಲು ಹರಸಾಹಸ ಪಡುವಂತಾಯಿತು.

ದಾವಣಗೆರೆಯ ಬನಶಂಕರಿ ಬಡಾವಣೆಯ ಬಳಿಯ ಕೆಳ ಸೇತುವೆಯಲ್ಲೂ ಅಪಾರ ಪ್ರಮಾಣದಲ್ಲಿ ನೀರು ನಿಂತುಕೊಂಡಿದ್ದರಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಮಳೆ ವಿವರ: ಚನ್ನಗಿರಿ ತಾಲ್ಲೂಕಿನಲ್ಲಿ 40 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 63 ಮಿ.ಮೀ, ಹರಿಹರ ತಾಲ್ಲೂಕಿನಲ್ಲಿ 44 ಮಿ.ಮೀ, ಹೊನ್ನಾಳಿ 42 ಮಿ.ಮೀ, ಜಗಳೂರಿನಲ್ಲಿ 45 ಮಿ.ಮೀ, ನ್ಯಾಮತಿ ತಾಲ್ಲೂಕಿನಲ್ಲಿ 59 ಮಿ.ಮೀ ಮಳೆಯಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 10 ಕಚ್ಚಾ ಮನೆಗಳು, 446 ಎಕರೆ ಭತ್ತದ ಬೆಳೆ ಹಾಗೂ 1.20 ಗುಂಟೆ ಅಡಿಕೆ, 2 ಎಕರೆ ಕೋಸು, 10 ಗುಂಟೆ ತೆಂಗಿನ ಬೆಳೆ ಸೇರಿ ಒಟ್ಟು ₹ 9.90 ಲಕ್ಷ ನಷ್ಟ ಸಂಭವಿಸಿದೆ.

ಹರಿಹರ ತಾಲ್ಲೂಕಿನಲ್ಲಿ 1 ಪಕ್ಕಾ ಮನೆ, 2 ಕಚ್ಚಾ ಮನೆಗೆ ಭಾಗಶಃ ಹಾನಿಯಾಗಿದೆ. 1118 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ಒಟ್ಟು ₹ 74.96 ಲಕ್ಷ ನಷ್ಟ ಸಂಭವಿಸಿದೆ.

ಹೊನ್ನಾಳಿ ತಾಲ್ಲೂಕಿನಲ್ಲಿ 1 ಕಚ್ಚಾ ಮನೆ ಹಾಳಾಗಿದೆ. 257 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ಒಟ್ಟು₹ 78 ಲಕ್ಷ ನಷ್ಟ ಸಂಭವಿಸಿದೆ.

ನ್ಯಾಮತಿ ತಾಲ್ಲೂಕಿನಲ್ಲಿ 6 ಪಕ್ಕಾ ಹಾಗೂ 2 ಪಕ್ಕಾ ಮನೆ ಭಾಗಶಃ ಹಾನಿಯಾಗಿದೆ. 2.27 ಎಕರೆ ಮೆಕ್ಕೆ ಜೋಳದ ಬೆಳೆ
ಹಾನಿಯಾಗಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ 5 ಪಕ್ಕಾ ಹಾಗೂ 3 ಕಚ್ಚಾ ಮನೆಗಳಿಗೆ ತೀವ್ರ ಹಾನಿಯಾಗಿದೆ. 35 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ಒಟ್ಟು ₹ 8.55 ಲಕ್ಷ ನಷ್ಟ ಸಂಭ್ರಮಿಸಿದೆ.

ಜಗಳೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ 14 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟ ರಣ್ಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಸಿನಿಮಾ ಮತ್ತೊಮ್ಮೆ ನಿಂತಿದೆ.

Fri May 20 , 2022
  ಸಿನಿಮಾಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದೆ. ರಣ್ಬೀರ್ ಹಾಗೂ ಶ್ರದ್ಧಾ ಅವರ ಸಿನಿಮಾದ ಹಾಡೊಂದರ ಚಿತ್ರೀಕರಣ ಮುಂಬೈನ ಸೆಟ್‌ ಒಂದರಲ್ಲಿ ನಡೆಯುತ್ತಿತ್ತು. ಹಾಡು ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ಮುತ್ತಿಗೆ ಹಾಕಿದ ಸುಮಾರು 350 ನೌಕರರು ಪ್ರತಿಭಟನೆ ನಡೆಸಿ ಚಿತ್ರೀಕರಣ ನಿಲ್ಲಿಸಿದ್ದಾರೆ. ರಣ್ಬೀರ್-ಶ್ರದ್ಧಾರ ಈ ಸಿನಿಮಾದ ಚಿತ್ರೀಕರಣ ಕಳೆದ ವರ್ಷದಿಂದಲೂ ನಡೆಯುತ್ತಿದ್ದು, ಈ ಹಿಂದೆ ಅಕ್ಟೋಬರ್‌ನಲ್ಲಿ ಸಹ ಚಿತ್ರೀಕರಣ ನಡೆದಿತ್ತು. ಆಗ ಚಿತ್ರೀಕರಣದಲ್ಲಿ ಕೆಲಸ ಮಾಡಿದ್ದ ನೌಕರರಿಗೆ ಸಂಬಳ ನೀಡದೆ ಚಿತ್ರೀಕರಣ […]

Advertisement

Wordpress Social Share Plugin powered by Ultimatelysocial