ಹಾರರ್ ಸಿನಿಮಾದಲ್ಲಿ ಅಕ್ಕ-ತಂಗಿಯಾದ ಜೋ&ನಿಧಿಮಾ

ಸೂಪರ್ ಹಿಟ್ ‘ಲವ್ ಮಾಕ್‌ಟೇಲ್‌’ ಸಿನಿಮಾದಲ್ಲಿ ನಿಧಿಮಾ ಪಾತ್ರವನ್ನು ಮಿಲನಾ ನಾಗರಾಜ್‌ ಮಾಡಿದ್ದರು. ಜೋ ಪಾತ್ರವನ್ನು ನಟಿ ಅಮೃತಾ ಅಯ್ಯಂಗಾರ್ ನಿಭಾಯಿಸಿದ್ದರು. ಆ ಸಿನಿಮಾದಿಂದ ಇಬ್ಬರು ಕೂಡ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಇದೀಗ ಇವರಿಬ್ಬರು ‘ಓ’ ಸಿನಿಮಾದಲ್ಲಿ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಇದೊಂದು ಹಾರರ್ ಥ್ರಿಲ್ಲರ್ ಮಾದರಿಯ ಸಿನಿಮಾವಾಗಿದ್ದು, ಈ ಸಿನಿಮಾದ ಒಂದು ಹಾಡನ್ನು ಡಾ. ಪುನೀತ್ ರಾಜ್‌ಕುಮಾರ್ ಹಾಡಿದ್ದರು. ‘ಓ’ ಚಿತ್ರಕ್ಕೆ ಓ. ಮಹೇಶ್ ಸಿ.ಅಮ್ಮಲ್ಲಿದೊಡ್ಡಿ ನಿರ್ದೇಶನ ಮಾಡಿದ್ದಾರೆ. ಈಚೆಗೆ ಈ ಸಿನಿಮಾದ ಟ್ರೇಲರ್ ಲಾಂಚ್ ಆಗಿದೆ.’ಓ’ ಸಿನಿಮಾದ ಬಗ್ಗೆ ಮಾತನಾಡಿದ ಮಿಲನಾ ನಾಗರಾಜ್, ‘ಲಾಕ್‌ಡೌನ್‌ಗೂ ಮುನ್ನವೇ ಈ ಸಿನಿಮಾ ಪ್ರಾರಂಭವಾಗಿತ್ತು. ಬೇರೆಯದೇ ರೀತಿಯ ಅನುಭವ ಕೊಡುವಂಥ ಚಿತ್ರವಿದು. ಈ ಥರದ ಚಿತ್ರಗಳನ್ನು ಮಾಡುವಾಗ ತುಂಬಾ ಸಹನೆ ಇರಬೇಕು, ಅದು ಈ ನಿರ್ದೇಶಕರಲ್ಲಿತ್ತು. ಅಮೃತಾ ನನ್ನ ಸಹೋದರಿ ಪಾತ್ರ ಮಾಡಿದ್ದಾರೆ. ಇದರಲ್ಲಿ ಬ್ಲಾಕ್ ಮ್ಯಾಜಿಕ್, ಹಾರರ್ ಹೀಗೆ ತುಂಬಾ ವಿಷಯಗಳಿವೆ. ಇದನ್ನು ನಾರ್ಮಲ್ ಸಿನಿಮಾ ರೀತಿ ಶೂಟ್ ಮಾಡಲು ಸಾಧ್ಯವಿಲ್ಲ, ಹಾಗಾಗಿ, ವಿಭಿನ್ನವಾಗಿ ಶೂಟಿಂಗ್ ಮಾಡಿದ್ದಾರೆ’ ಎಂದು ಹೇಳಿದರುತಮ್ಮ ಪಾತ್ರದ ಬಗ್ಗೆ ಹೇಳಿಕೊಂಡ ಅಮೃತ ಅಯ್ಯಂಗಾರ್, ‘ಚಿತ್ರದಲ್ಲಿ ಹಾರರ್ ಎಫೆಕ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನ್ನದು ಎಲ್ಲ ಥರದ ಎಮೋಷನ್ ಕ್ಯಾರಿ ಮಾಡುವಂಥ ಪಾತ್ರ. ಜನರಿಗೆ ಹೆದರಿಸೋದು ತುಂಬಾ ಕಷ್ಟದ ಕೆಲಸ. ಕೆಲವು ಸೀನ್‌ಗಲ್ಲಿ ನಟಿಸುವಾದ ನನಗೇ ತುಂಬಾ ಭಯವಾಗಿತ್ತು. ಈ ಸಿನಿಮಾದಲ್ಲಿ ಬಾಲ ನಟ ಆಲಾಪ್ ನನ್ನ ತಮ್ಮನ ಪಾತ್ರ ಮಾಡಿದ್ದಾನೆ. ಅವನ ಜೊತೆಗೇ ನನಗೆ ಹೆಚ್ಚು ಸೀನ್‌ಗಳಿವೆ’ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೃಥ್ವಿ ಅಂಬರ್, ಮಿಲನಾ ನಾಗರಾಜ್ ನಟನೆಯ ಸಿನಿಮಾ ರಿಲೀಸ್‌ಗೆ ರೆಡಿ

Thu Jan 5 , 2023
ಪೃಥ್ವಿ ಅಂಬರ್  ಹಾಗೂ ಮಿಲನ ನಾಗರಾಜ್  ನಾಯಕ-ನಾಯಕಿಯಾಗಿ ನಟಿಸಿರುವ ‘F0R REGN’ (ಫಾರ್ ರಿಜಿಸ್ಟರೇಷನ್) ಚಿತ್ರ 2023 ರ ಫೆಬ್ರವರಿ 10ರಂದು ಬಿಡುಗಡೆಯಾಗಲಿದೆ.ಕರ್ನಾಟಕ ರಾಜ್ಯೋತ್ಸವದ ಶುಭದಿನದಂದು ಚಿತ್ರದ ಬಿಡುಗಡೆ ದಿನಾಂಕ ಹಾಗೂ ಫಸ್ಟ್ ಲುಕ್ ಅನಾವರಣಗೊಂಡಿದೆ. ನಿರ್ಮಾಪಕ ನವೀನ್ ರಾವ್ ಹಾಗೂ ನಿರ್ದೇಶಕ ನವೀನ್ ದ್ವಾರಕನಾಥ್ ಅವರ ಪೋಷಕರು ಫಸ್ಟ್ ಲುಕ್ ಹಾಗೂ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಿದರು‌.ನಾನು ಹಾಗೂ ನಿರ್ಮಾಪಕ ನವೀನ್ ರಾವ್ ಸಹಪಾಠಿಗಳು. ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ಒಂದು […]

Advertisement

Wordpress Social Share Plugin powered by Ultimatelysocial