ಅಗಸೆ ಬೀಜದಲ್ಲಿ ಹೇರಳವಾಗಿ ನಾರಿನಾಂಶವಿದೆ!

 

ಅಗಸೆ ಬೀಜದಲ್ಲಿ ಹೇರಳವಾಗಿ ನಾರಿನಾಂಶವಿದೆ. ಇದು ನಿಮ್ಮ ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೇ ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜತೆಗೆ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.ಇದರ ಜತೆಗೆ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಕೂಡ ಸಹಾಯಕವಾಗುತ್ತದೆ.ಇದರಲ್ಲಿ ಓಮೆಗಾ 3 ಪ್ಯಾಟಿ ಆಸಿಡಿ ಹೆಚ್ಚಿದೆ. ಇದನ್ನು ಒಂದು ಚಮಚ ಹಾಗೇ ತಿನ್ನುವುದರಿಂದ ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ಬಿಸಿನೀರಿಗೆ 1 ಚಮಚ ಇದರ ಪುಡಿಯನ್ನು ಮಿಕ್ಸ್ ಮಾಡಿಕೊಂಡು ಕುಡಿಯುವುದರಿಂದ ನಿಮ್ಮ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ಮುಖದಲ್ಲಿನ ನೆರಿಗೆ, ಕಲೆಗಳು ಕೂಡ ನಿಧಾನಕ್ಕೆ ಮಾಸುತ್ತದೆ.ಇನ್ನು 1/3 ಕಪ್ ನೀರನ್ನು ಕುದಿಯಲು ಇಟ್ಟು ಅದಕ್ಕೆ 1 ಟೇಬಲ್ ಸ್ಪೂನ್ ಅಗಸೆ ಬೀಜ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಆಫ್ ಮಾಡಿ ಅಗಸೆ ಬೀಜದ ಮಿಶ್ರಣ ಇರುವ ಪಾತ್ರೆಯ ಬಾಯಿಗೆ ಒಂದು ಸ್ವಚ್ಛವಾದ ಬಟ್ಟೆಯನ್ನು ಕಟ್ಟಿ 4 ಗಂಟೆಗಳ ಕಾಲ ಹಾಗೇಯೇ ಬಿಟ್ಟುಬಿಡಿ. ನಂತರ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಒಂದು ಬಾರಿ ಹಾಕಿದ ಮಿಶ್ರಣ ಒಣಗಿದ ಮೇಲೆ ಮತ್ತೊಮ್ಮೆ ಹಾಕಿ ಹೀಗೆ 4 ಸಲ ಹಾಕಿ. ಇದು ಪ್ಯಾಕ್ ರೀತಿ ಆಗುತ್ತದೆ. ಇದು ಒಣಗಿದ ಮೇಲೆ ಶುದ್ಧವಾದ ನೀರಿನಿಂದ ಮುಖ ತೊಳೆಯಿರಿ. ಮುಖ ಕಾಂತಿಯುತವಾಗುವುದನ್ನು ನೀವೇ ನೋಡಬಹುದು.ಇನ್ನು ಒಂದು ಬೌಲ್ ಗೆ ಮೊಟ್ಟೆ ಒಡೆದು ಹಾಕಿಕೊಳ್ಳಿ. ಇದಕ್ಕೆ 1 ಟೇಬಲ್ ಸ್ಪೂನ್ ಅಗಸೆಬೀಜದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಬಿಟ್ಟು ಬಿಡಿ. ನಂತರ ತೊಳೆದು ಯಾವುದಾದರೂ ಮೊಯಿಶ್ಚರೈಸರ್ ಹಚ್ಚಿಕೊಳ್ಳಿ. ತಿಂಗಳಿಗೆ ಎರಡು ಬಾರಿ ಇದನ್ನು ಮಾಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲತಾ ಮಂಗೇಶ್ಕರ್‌ ಅವರ ಬದುಕಲ್ಲಿ ಹೀಗೆಲ್ಲಾ ಆಗಿತ್ತಾ? | Lata Mangeshkar | Singer | Speed News Kannada |

Wed Feb 9 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial