ಮನೆಗೆ ಬೆಂಕಿ, ಬಾಲಕಿ ಸಜೀವ ದಹನ.

ಕೌಶಾಂಬಿ (ಯುಪಿ), ಫೆ.5-ದುಷ್ಕರ್ಮಿಗಳು ಮನೆಯ ಬೆಂಕಿ ಹಚ್ಚಿದ್ದರಿಂದ ಮೂರು ವರ್ಷದ ಬಾಲಕಿಯೊಬ್ಬಳು ಸಜೀವ ದಹನವಾಗಿರುವ ಘಟನೆ ಇಂದು ಬೆಳಿಗ್ಗೆ ಕೌಶಾಂಬಿ ಬಳಿಯ ಬಹದ್ದೂರ್‍ಪುರ ಗ್ರಾಮದಲ್ಲಿ ನಡೆದಿದೆ.

ಬಹದ್ದೂರ್‍ಪುರ ಗ್ರಾಮದ ರಾಂಬಾಬು ಎಂಬುವರ ಮೂರು ವರ್ಷದ ಮಗಳು ನಂದಿನಿ ಹುಲ್ಲಿನ ಛಾವಣಿಯ ಕೆಳಗೆ ಮಲಗಿದ್ದಳು ಈ ವೇಳೆ ಯಾರೋ ಛಾವಣಿಗೆ ಬೆಂಕಿ ಹಚ್ಚಿದ್ದಾರೆ.

ಹುಲ್ಲಿನ ಮನೆಯಾಗಿದ್ದರಿಂದ ಬೆಂಕಿ ಜ್ವಾಲೆ ಬೇಗನೆ ವ್ಯಾಪಿಸಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮರ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. ನೆರೆಹೊರೆಯವರು ಬೆಂಕಿ ನಂದಿಸಲು ಧಾವಿಸಿದರು ಆದರೆ ಬೆಂಕಿಯನ್ನು ನಿಯಂತ್ರಿಸುವಷ್ಟರಲ್ಲಿ ಬಾಲಕಿ ಮತ್ತು ಹತ್ತಿರದಲ್ಲಿ ಕಟ್ಟಿದ್ದ ಹಸು ಸುಟ್ಟು ಕರಕಲಾಗಿವೆ ಎಂದು ತಿಳಿಸಲಾಗಿದೆ.

ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ, ಸುಟ್ಟ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ.

Sun Feb 5 , 2023
ಮುಂಬಯಿ, ಫೆ.05. ಪತ್ನಿ ಮೇಲೆ ಹಲ್ಲೆ ನಡೆಸಿ ನಿಂದಿಸಿದ ಆರೋಪದ ಮೇಲೆ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಎಫ್‌.ಐ.ಆರ್‌ ದಾಖಲಾಗಿದೆ. ಪತ್ನಿ ಆಂಡ್ರಿಯಾ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್‌ 324,504 ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ. ಕುಡಿದು ಮನೆಗೆ ಬಂದ ವಿನೋದ್ ಕಾಂಬ್ಳಿ ಪತ್ನಿಯನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಇದಾದ ಬಳಿಕ ಸಿಟ್ಟಿನಲ್ಲಿ ಅಡುಗೆಯ ಕಾವಲಿಯನ್ನು ಪತ್ನಿಯ ಮೇಲೆ ಎಸೆದಿದ್ದಾನೆ. ಇದರಿಂದ ಪತ್ನಿ ಆಂಡ್ರಿಯಾ […]

Advertisement

Wordpress Social Share Plugin powered by Ultimatelysocial