ಮೂಲವ್ಯಾಧಿ ಮನೆ ಮದ್ದು

೧. ತುಳಸಿ ಎಲೆ, ಕರಿಮೆಣಸು, ಹಸಿಈರುಳ್ಳಿ ೩, ಸಮಪ್ರಮಾಣದಲ್ಲಿ ನುಣ್ಣಗೆ ಅರೆದು ಗೋಲಿಗಾತ್ರದ ಉಂಡೆಮಾಡಿ ಬೆಳಿಗ್ಗೆ – ಸಂಜೆ ೨-೨ ಉಂಡೆ ತಿನ್ನುತ್ತಾ ಬಂದರೆ, ೫ – ೬ ದಿನಗಳಲ್ಲಿ ಮೂಲವ್ಯಾಧಿ ಕಡಿಮೆಯಾಗುವುದು.
೨. ಆಸನದಲ್ಲಿ ಆಗುವ ಉರಿ, ನೋವು ಇಂತಹ ಸಮಸ್ಯೆಗೆ ನೇರಳೆ ಮರದ ಎಲೆ ಹಾಗೂ ಮಾವಿನ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ, ಆ ನೀರನ್ನು ಬೇರೆ ಬಿಸಿನೀರಿಗೆ ಹಾಕಿ ೧ ಟಬ್‌ನಲ್ಲಿ ಹಾಕಿ ೫ ನಿಮಿಷ ಕುಳಿತರೆ ನೋವು ಕಡಿಮೆಯಾಗುತ್ತದೆ.
೩. ಮಲದ ಜೊತೆ ರಕ್ತ ಹೋಗುತ್ತಿದ್ದರೆ, ನಿಂಬೆಗಿಡದ ಹೂ ಮತ್ತು ಬೇರನ್ನು ಅರೆದು, ಅಕ್ಕಿ ತೊಳೆದ ನೀರಿನಲ್ಲಿ ಕದಡಿ ಕುಡಿದರೆ ಅನುಕೂಲವಾಗುತ್ತದೆ.
೪. ಸಿಹಿಗುಂಬಳದ ಚಿಗುರೆಲೆಗಳನ್ನು ಅಡುಗೆಯಲ್ಲಿ ಬಳಸುವುದು ಹಾಗೂ ಸಿಹಿಗುಂಬಳದ ಬಳಕೆ ಎರಡೂ ಮೂಲವ್ಯಾಧಿಯವರಿಗೆ ಹಿತಕರ.
೫. ನುಗ್ಗೆಎಲೆ ಹಾಗೂ ಎಕ್ಕದ ಎಲೆಯನ್ನು ನುಣ್ಣಗೆ ಅರೆದು ಮೂಲವ್ಯಾಧಿಯ ಮೊಳಕೆಗಳಿಗೆ ಲೇಪಿಸುವುದರಿಂದ ಮೊಳಕೆಗಳು ದಿನಕ್ರಮೇಣ ನಾಶವಾಗುತ್ತವೆ.
೬. ಸುವರ್ಣಗೆಡ್ಡೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಈ ಪುಡಿಯನ್ನು ಹಸಿಮೂಲಂಗಿ ರಸದಲ್ಲಿ ಬೆರೆಸಿ ಪ್ರತಿನಿತ್ಯ ಕೆಲವು ದಿನಗಳ ಕಾಲ ಸತತವಾಗಿ ಸೇವಿಸುವುದರಿಂದ ಮೂಲವ್ಯಾಧಿ ಹಾಗೂ ಮಲಬದ್ಧತೆ ನಿವಾರಣೆಯಾಗುತ್ತದೆ.
೭. ಹೊನಗೊನೆಸೊಪ್ಪು ಹಾಗೂ ಮೂಲಂಗಿ ಸೊಪ್ಪಿನ ರಸವನ್ನು ಸತತವಾಗಿ ಸೇವಿಸುವುದರಿಂದ ಮೂಲವ್ಯಾಧಿಯ ಹಿಂಸೆ, ನೋವು ಕಡಿಮೆಯಾಗುತ್ತದೆ.
೮. ಒಣಖರ್ಜೂರ ಹಾಗೂ ಒಣದ್ರಾಕ್ಷಿ ಎರಡನ್ನೂ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಆರಿದ ನಂತರ ಚೆನ್ನಾಗಿ ಕಿವುಚಿ, ನಂತರ ಶೋಧಿಸಿ, ಪುನ: ಆರಿಸಿ ಗಾಜಿನ ಸೀಸೆಗೆ ಹಾಕಿಟ್ಟುಕೊಂಡು ಇದನ್ನು ೨೧ ದಿನಗಳ ಕಾಲ ಕುಡಿದರೆ, ಮಲಬದ್ಧತೆ, ಮೂಲವ್ಯಾಧಿ ಎಲ್ಲಕ್ಕೂ ಉತ್ತಮ ಪರಿಹಾರ ಸಿಗುತ್ತದೆ.
೯. ರಕ್ತ ಮೂಲವ್ಯಾಧಿ: ಹಾಗಲಕಾಯಿ ರಸ ಅಥವಾ ಹಾಗಲಕಾಯಿ ಎಲೆ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಕೆಲವು ದಿನಗಳ ಕಾಲ ಬೆಳಿಗ್ಗೆ ಸೇವಿಸುತ್ತಾ ಬಂದರೆ ರಕ್ತ ಮೂಲವ್ಯಾಧಿಗೆ ಸಾಕಷ್ಟು ಅನುಕೂಲವಾಗುತ್ತದೆ.
೧೦. ಹೆಸರುಕಾಳನ್ನು ನೆನೆಸಿ ಇದಕ್ಕೆ ೫ – ೬ ಬೇವಿನ ಎಲೆಯನ್ನು ಹಾಕಿ ರುಬ್ಬಿಕೊಂಡು ಇದಕ್ಕೆ ಚಿಟಿಕೆ ಉಪ್ಪು ಹಾಕಿ ಕಲಸಿ ತುಪ್ಪದಲ್ಲಿ ಪಕೋಡಾ ರೀತಿ ಕರಿದು ೨೧ ದಿನಗಳ ಕಾಲ ತಿನ್ನುತ್ತಾ ಬಂದರೆ ಹಾಗೂ ಆಹಾರದಲ್ಲಿ ಸ್ವಲ್ಪ ಪತ್ಯ ಇದ್ದರೆ ಶೀಘ್ರವಾಗಿ ಮೂಲವ್ಯಾಧಿ ಗುಣವಾಗುವುದು.
೧೧. ಹಸಿಈರುಳ್ಳಿಯನ್ನು ತುರಿದು ತಕ್ಷಣ ಮೊಸರಿಗೆ ಹಾಕಿ ಚಿಟಿಕೆ ಉಪ್ಪು ಹಾಕಿ ಹಾಗೇ ಪ್ರತಿನಿತ್ಯ ಬೆಳಿಗ್ಗೆ ಸೇವಿಸುತ್ತಾ ಬಂದರೆ ಮೂಲವ್ಯಾಧಿಯ ನೋವು, ಹಿಂಸೆ ಎಲ್ಲವೂ ಕಡಿಮೆ ಆಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ ಜನತೆಗೆ ಗುಡ್ ನ್ಯೂಸ್.

Sat Jan 14 , 2023
ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಅವಧಿಯ ಕೊನೆಯ ಬಜೆಟ್ ನಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಮಾದರಿಯಲ್ಲಿ ರಾಜ್ಯದಾದ್ಯಂತ ಎಲ್ಲಾ ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಸರ್ಕಾರ ಮುಂದಾಗಿದೆ. ಯೋಜನೆಗೆ ಪ್ರಧಾನಿ ಮೋದಿ ಅವರ ಮೂಲಕ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಜನ ಸಮುದಾಯ ತಲುಪುವ […]

Advertisement

Wordpress Social Share Plugin powered by Ultimatelysocial