ಗಂಡನ ಮುಖವಾಡ ಕಳಚಿದ 3ನೇ ಪತ್ನಿ ರಮ್ಯಾ

 

ಕಳೆದ ಕೆಲವು ತಿಂಗಳ ಹಿಂದೆ ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ನಲ್ಲಿ ಪವಿತ್ರಾ ಲೋಕೇಶ್​ ಹಾಗೂ ನರೇಶ್​ ಜೋಡಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಮೈಸೂರಿನ ಲಾಡ್ಜ್​ ಒಂದರಲ್ಲಿ ಇಬ್ಬರನ್ನು ನರೇಶ್​ ಅವರ ಮೂರನೇ ಪತ್ನಿ ರಮ್ಯಾ ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದು ಭಾರೀ ಸುದ್ದಿಯಾಗಿತ್ತು.ನರೇಶ್​ ಮತ್ತು ಪವಿತ್ರ ಲೋಕೇಶ್​ ನಡುವೆ ಲವ್ವಿಡವ್ವಿ ಇದ್ದು, ಮೂರನೇ ಪತ್ನಿ ರಮ್ಯಾ ಸದ್ಯ ನರೇಶ್​ ವಿರುದ್ಧ ಬುಸುಗುಡುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಮ್ಯಾ, ನರೇಶ್ ಯಾವ ರೀತಿಯ ವ್ಯಕ್ತಿ? ಮತ್ತು ನರೇಶ್​ಗೆ ಇರುವ ದುರಾಭ್ಯಸಗಳು ಎಂಥವು ಎಂಬುದನ್ನು ಬಯಲು ಮಾಡಿದ್ದಾರೆ.ಕಾರು ಚಾಲಕನ ಜೊತೆಗೆ ರಮ್ಯಾ ಅವರಿಗೆ ಅಕ್ರಮ ಸಂಬಂಧ ಇದೆ ಎಂದು ನರೇಶ್​ ಕತೆ ಕಟ್ಟಿದ್ದರಂತೆ. ಅಲ್ಲದೆ, ಸಿಕ್ಕ ಸಿಕ್ಕವರ ಜೊತೆ ರಮ್ಯಾ ಹೆಸರನ್ನು ತಳುಕು ಹಾಕುತ್ತಿದ್ದರಂತೆ. ಸದಾ ನನ್ನ ಮೇಲೆ ಆರೋಪ ಮಾಡುವುದೇ ನರೇಶ್​ ಕೆಲಸವಾಗಿತ್ತು. ನಾನು ಸಾಕಷ್ಟು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದಿದ್ದಾನೆ. ಆ ಪ್ರಮಾಣದಲ್ಲಿ ನರೇಶ್​ ನನಗೆ ತೊಂದರೆ ಕೊಟ್ಟಿದ್ದಾರೆ ಎಂದು ರಮ್ಯಾ ಆರೋಪ ಮಾಡಿದ್ದಾರೆ.ನರೇಶ್​ಗೆ ಹೆಚ್ಚು ಹೆಚ್ಚು ಪೋರ್ನ್​ ವಿಡಿಯೋಗಳನ್ನು ನೋಡುವ ಚಟ ಇದೆ. ಅಪ್ಪ ಸಾಕಷ್ಟು ಕೆಟ್ಟ ವಿಡಿಯೋಗಳನ್ನು ನೋಡುತ್ತಾರೆ ಎಂದು ಮಗ ರಣವೀರ್​ ಬಂದು ಹೇಳಿದಾಗಲೇ ನನಗೆ ಆ ಬಗ್ಗೆ ಗೊತ್ತಾಗಿದ್ದು, ಓರ್ವ ತಂದೆಯಾಗಿ ಎಷ್ಟು ಜವಾಬ್ದಾರಿ ಇರಬೇಕು? ಆದರೆ, ನರೇಶ್​ ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದ ಎಂದು ರಮ್ಯಾ ಬಹಿರಂಗಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಡಿಯೋ ಮೂಲಕವೂ ಕೆವೈಸಿಗೆ ಅವಕಾಶ

Fri Jan 6 , 2023
ದೂರ ನಿಯಂತ್ರಿತವಾಗಿ ವಿಡಿಯೋ ಆಧಾರಿತ ಗ್ರಾಹಕರ ಗುರುತಿಸುವಿಕೆ ಮೂಲಕ ಕೆವೈಸಿ ಪ್ರಕ್ರಿಯೆ ನಡೆಸಬಹುದು ಎಂದು ಆರ್.ಬಿ.ಐ. ತಿಳಿಸಿದೆ.ಬ್ಯಾಂಕುಗಳಲ್ಲಿ ಖುದ್ದಾಗಿ ನೀಡುವ ನಿಮ್ಮ ಗ್ರಾಹಕರನ್ನು ತಿಳಿಯಿರಿ -ಕೆವೈಸಿ ಪ್ರಕ್ರಿಯೆ ರೀತಿಯಲ್ಲಿ ವಿಡಿಯೋ ಆಧಾರಿತ ಪ್ರಕ್ರಿಯೆಯೂ ನಡೆಯುತ್ತದೆ.ಸ್ವಯಂ ಘೋಷಣೆಯ ಕೆವೈಸಿ ಪ್ರಕ್ರಿಯೆಗೆ ಗ್ರಾಹಕರಿಗೆ ವಿಡಿಯೋ ಮೂಲಕ ಅವಕಾಶ ಮಾಡಿಕೊಡಬೇಕು ಎಂದು ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚಿಸಿದೆ.ಭಾರತೀಯ ರಿಸರ್ವ್ ಬ್ಯಾಂಕ್ ನಿಮ್ಮ ಗ್ರಾಹಕರ (KYC) ಪ್ರಕ್ರಿಯೆಗಳನ್ನು ತಿಳಿದುಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ […]

Advertisement

Wordpress Social Share Plugin powered by Ultimatelysocial