ಹೆಂಡತಿ ,ಅತ್ತೆ ,ಮಾವನ ಕಿರುಕುಳದಿಂದ ವ್ಯಕ್ತಿ ಆತ್ಮಹತ್ಯೆ

ಹೆಂಡತಿ, ಅತ್ತೆ, ಮಾವನ ಕಿರುಕುಳದಿಂದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ರಂಗನಹಳ್ಳಿ ಬೋವಿಕಾಲೋನಿಯಲ್ಲಿ ನಡೆದಿದೆ. ಲೋಕೇಶ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ನವೆಂಬರ್ 15 ರಂದು ಈ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ. ನನ್ನ ಸಾವಿಗೆ ಹೆಂಡತಿ ಹೇಮಾ, ಅತ್ತೆ ಧನಲಕ್ಷಿ, ಮಾವ ರಾಜು ಹಾಗೂ ಹೆಂಡತಿಯ ಪ್ರಿಯಕರ ಚೇತನ್ ಕಾರಣ .ಪ್ರತಿ ನಿತ್ಯ ಬ್ಲಾಕ್ ಮೇಲ್, ಕೊಲೆ ಬೆದರಿಕೆ ಹಾಕುತ್ತಿದ್ದರು. ನಾನು ಹೇಗೆ ಬದುಕಲಿ ಎಂದು ಸೆಲ್ಫಿ ವಿಡಿಯೋ ಮಾಡಿ ಕೀಟ ನಾಶಕ ಸೇವಿಸಿ ಲೋಕೇಶ್ ಆತ್ಮಹತ್ಯೆ ಮಾಡಕೊಂಡಿದ್ದಾನೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನ ಓದಿ:ಅನುಮಾನಸ್ಪದವಾಗಿ ದಂಪತಿಗಳ ಬರ್ಬರ ಹತ್ಯೆ

Please follow and like us:

Leave a Reply

Your email address will not be published. Required fields are marked *

Next Post

ಹಸು, ಎಮ್ಮೆಗಳಿಗೆ ವಿಮೆ ಸೌಲಭ್ಯ

Wed Nov 18 , 2020
ಬೆಳಗಾವಿಯಲ್ಲಿ ಹಸು, ಎಮ್ಮೆಗಳಿಗೆ ವಿಮೆ ಭದ್ರತೆ ಕಲ್ಪಿಸಲಾಗುವುದು ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ 12 ಲಕ್ಷ ಎಮ್ಮೆ, ಹಸುಗಳಿಗೆ ವಿಮೆ ಭದ್ರತೆಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ವಿಮೆ ಸೌಲಭ್ಯ ಹೊಂದಿರುವ ಜಾನುವಾರು ಮೃತಪಟ್ಟಲ್ಲಿ ಹಾಲು ಉತ್ಪಾದಕರಿಗೆ 40 -50 ಸಾವಿರ […]

Advertisement

Wordpress Social Share Plugin powered by Ultimatelysocial