CRICKET:ಟೀಮ್ ಇಂಡಿಯಾ ಸೋತಿದೆ ಎಂದ ಡೇಲ್ ಸ್ಟೇನ್;

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಹಾಗೂ ಏಕದಿನ ಸರಣಿಗಳು ಮುಕ್ತಾಯಗೊಂಡರೂ ಸಹ ಆ ಸರಣಿಗಳ ಕುರಿತಾದ ಚರ್ಚೆಗಳು ಮಾತ್ರ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡ ಟೀಮ್ ಇಂಡಿಯಾ ಸಾಲು ಸಾಲು ಸೋಲುಗಳನ್ನು ಕಂಡದ್ದು ಮಾತ್ರವಲ್ಲದೇ ತಂಡದ ದೊಡ್ಡ ಬದಲಾವಣೆಗಳಿಗೂ ಕೂಡ ಸಾಕ್ಷಿಯಾಯಿತು.

ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತ ನಂತರ ತಂಡದಲ್ಲಿ ಭಾರಿ ಬದಲಾವಣೆಯಾಗಿದ್ದು ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನು ಘೋಷಿಸಿ ಎಲ್ಲರಿಗೂ ಅಚ್ಚರಿಯುಂಟಾಗುವಂತೆ ಮಾಡಿದರು.

ಇನ್ನು ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳುವುದಕ್ಕೂ ಮುನ್ನ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಬಹುತೇಕ ಕ್ರಿಕೆಟ್ ಅಭಿಮಾನಿಗಳು ಟೀಮ್ ಇಂಡಿಯಾ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ಸರಣಿ ಮಾತ್ರವಲ್ಲದೆ ಟೆಸ್ಟ್ ಸರಣಿಯನ್ನು ಕೂಡ ಗೆದ್ದು ಇತಿಹಾಸ ಬರೆಯಲಿದೆ ಎಂದು ಊಹಿಸಿದ್ದರು. ಆದರೆ ಈ ಊಹೆ ಮತ್ತು ಅಭಿಮಾನಿಗಳ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಎಡವಿದ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು ಗೆಲ್ಲಲಿಲ್ಲ ಹಾಗೂ ನಂತರ ನಡೆದ ಏಕದಿನ ಸರಣಿಯಲ್ಲಿಯೂ ಕೂಡ ವೈಟ್ ವಾಷ್ ಮುಖಭಂಗಕ್ಕೆ ಒಳಗಾಯಿತು. ಈ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅಲಭ್ಯತೆಯಿಂದ ಕೆಎಲ್ ರಾಹುಲ್ ನಾಯಕತ್ವವನ್ನು ನಿರ್ವಹಿಸಿ ಚೊಚ್ಚಲ ನಾಯಕತ್ವದಲ್ಲಿಯೇ ಎಡವಿದರು.

ಹೀಗೆ ಏಕದಿನ ಸರಣಿಯನ್ನು ಸೋಲಲು ಕೆಎಲ್ ರಾಹುಲ್ ಅವರ ನಾಯಕತ್ವ ಕಾರಣ ಎಂದು ಕೆಲವೊಂದಿಷ್ಟು ಮಂದಿ ಟೀಕಿಸುತ್ತಿದ್ದರೆ, ಇನ್ನೂ ಕೆಲ ಕ್ರಿಕೆಟ್ ಪ್ರಿಯರು ಕೆಲವೊಂದಷ್ಟು ಆಟಗಾರರ ಅಲಭ್ಯತೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾಗೆ ಹಿನ್ನಡೆಯನ್ನುಂಟು ಮಾಡಿತು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ಹಲವಾರು ಮಾಜಿ ಕ್ರಿಕೆಟಿಗರು ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಸೋಲಲು ಕಾರಣವೇನು ಎಂಬುದನ್ನು ತಮ್ಮ ದೃಷ್ಟಿಕೋನದಲ್ಲಿ ತಿಳಿಸಿದ್ದು, ಇದೀಗ ದಕ್ಷಿಣ ಆಫ್ರಿಕಾದ ಖ್ಯಾತ ಮಾಜಿ ಕ್ರಿಕೆಟಿಗ ಡೇಲ್ ಸ್ಟೇನ್ ಕೂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಸೋಲಲು ಕಾರಣವೇನು ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಟೀಮ್ ಇಂಡಿಯಾಗೆ ಆ ಆಟಗಾರನ ಅನುಪಸ್ಥಿತಿ ಕಾಡಿತುದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕಿ ಹಿನ್ನಡೆ ಅನುಭವಿಸಿತು ಎಂದು ಹೇಳಿಕೆ ನೀಡಿರುವ ಡೇಲ್ ಸ್ಟೇನ್ ಇದಕ್ಕೆ ಕಾರಣ ತಂಡದಲ್ಲಿ ರವೀಂದ್ರ ಜಡೇಜಾ ಇಲ್ಲದೇ ಇದ್ದದ್ದು ಎಂದಿದ್ದಾರೆ. “ಟೀಮ್ ಇಂಡಿಯಾ ಖಂಡಿತವಾಗಿಯೂ ರವೀಂದ್ರ ಜಡೇಜಾರನ್ನು ಮಿಸ್ ಮಾಡಿಕೊಂಡಿದೆ. ಆತನೋರ್ವ ಅತ್ಯದ್ಭುತ ಆಟಗಾರ. ತನ್ನ ಎಡಗೈ ಸ್ಪಿನ್ ಬೌಲಿಂಗ್‌ನಿಂದ ಆಟವನ್ನು ನಿಯಂತ್ರಿಸಬಲ್ಲ ರವೀಂದ್ರ ಜಡೇಜಾ ಬ್ಯಾಟಿಂಗ್ ವಿಭಾಗದಲ್ಲಿಯೂ ಕೂಡಾ ಕೊಡುಗೆಯನ್ನು ನೀಡುತ್ತಿದ್ದರು” ಎಂದು ಡೇಲ್ ಸ್ಟೇನ್ ಹೇಳಿಕೆ ನೀಡಿದ್ದಾರೆ.

ಟೀಮ್ ಇಂಡಿಯಾಗೆ ಬೌಲಿಂಗ್ ಸಮಸ್ಯೆ ಕಾಡಿತು

ಇನ್ನೂ ಮುಂದುವರೆದು ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಲು ಕಾರಣ ಏನೆಂಬುದರ ಕುರಿತು ಮಾತನಾಡಿರುವ ಡೇಲ್ ಸ್ಟೇನ್ ಟೀಮ್ ಇಂಡಿಯಾಗೆ ಬೌಲಿಂಗ್ ಕೊರತೆ ಹೆಚ್ಚಾಗಿ ಕಾಡಿತು ಎಂದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ ಅವರಿಗೆ ಸಾಥ್ ನೀಡುವಂತಹ ಮತ್ತೊಬ್ಬ ಬೌಲರ್ ಅಗತ್ಯತೆ ಇತ್ತು, ಸುಮಾರು 140 – 145 ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಎಸೆಯಬಲ್ಲ ಬೌಲರ್‌ನ ಅಗತ್ಯತೆ ತಂಡಕ್ಕಿತ್ತು ಆದರೆ ಅಂತಹ ಸಾಮರ್ಥ್ಯವಿರುವ ಬೌಲರ್ ತಂಡದಲ್ಲಿ ಇಲ್ಲದೇ ಇದ್ದದ್ದು ಟೀಮ್ ಇಂಡಿಯಾಗೆ ಸಮಸ್ಯೆಯಾಯಿತು ಎಂದು ಡೇಲ್ ಸ್ಟೈನ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ವ್ಯಂಗ್ಯಚಿತ್ರಕಾರರು ಮಮ್ಮುಟ್ಟಿ ಅವರ ಉದ್ಯಮದಲ್ಲಿ 50 ವರ್ಷಗಳ ಸ್ಮರಣಾರ್ಥ ಸಂಗ್ರಹಿಸಬಹುದಾದ ಕಾರ್ಡ್‌ಗಳನ್ನು ತಯಾರಿಸುತ್ತಾರೆ

Wed Jan 26 , 2022
ಮಮ್ಮುಟ್ಟಿ ಪಾದಾರ್ಪಣೆ ಮಾಡಿದ ದಿನವೆಂದು ನಂಬಲಾದ ಆಗಸ್ಟ್ 6 ರಂದು ಪೆನ್ಸಿಲಾಶನ್ ಇವುಗಳನ್ನು ಹೊರತಂದರು ಮಮ್ಮುಟ್ಟಿ ಅವರ ಅಭಿಮಾನಿಯಾಗಿ, ಪೆನ್ಸಿಲಾಶನ್ ಎಂದು ಕರೆಯಲ್ಪಡುವ ವ್ಯಂಗ್ಯಚಿತ್ರಕಾರ ವಿಷ್ಣು ಮಾಧವ್ ಅವರು ತಮ್ಮ ಉದ್ಯಮದಲ್ಲಿ 50 ನೇ ವರ್ಷವನ್ನು ಸ್ಮರಣಾರ್ಥವಾಗಿ ತಾವು ಆರಾಧಿಸುವ ನಕ್ಷತ್ರಕ್ಕಾಗಿ ಅನನ್ಯವಾದದ್ದನ್ನು ಮಾಡಲು ಬಯಸಿದ್ದರು ಎಂದು ಹೇಳುತ್ತಾರೆ. ಫಲಿತಾಂಶ? ಐವತ್ತು ಸಂಗ್ರಹಯೋಗ್ಯ ಕಾರ್ಡ್‌ಗಳು ಮಮ್ಮುಟ್ಟಿ ಅವರು ವರ್ಷಗಳಿಂದ ಪರಿಚಿತವಾಗಿರುವ ಪಾತ್ರಗಳಾಗಿ ಕಾಣಿಸಿಕೊಂಡಿದ್ದಾರೆ. ವಿಷ್ಣು ಮಾಧವ್ ವಿಷ್ಣು ಮಾಧವ್ | […]

Advertisement

Wordpress Social Share Plugin powered by Ultimatelysocial