ಜನಸಂಖ್ಯೆ ಹೆಚ್ಚಿಸದಿದ್ದರೆ ಜಪಾನ್‌ ದೇಶವೇ ಮಾಯ!

ಟೋಕಿಯೋ: “ನಮ್ಮ ದೇಶದಲ್ಲಿ ಮಕ್ಕಳ ಜನನ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಪ್ರಕ್ರಿಯೆ ಮುಂದುವರಿದರೆ, ಮುಂದೊಂದು ದಿನ ಜಪಾನ್‌ ಎಂಬ ದೇಶವೇ ಮಾಯವಾಗಿ ಹೋಗಬಹುದು’ – ಇಂಥ ಒಂದು ಆತಂಕವನ್ನು ಆ ದೇಶದ ಪ್ರಧಾನಿ ಫ್ಯೂಮೋ ಕಿಶಿದಾ ಸಲಹೆಗಾರ್ತಿ ಮಸಾಕೊ ಮೊರಿ ವ್ಯಕ್ತಪಡಿಸಿದ್ದಾರೆ.

ಚೀನದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ, ಯುವಕರ ಸಂಖ್ಯೆ ಕುಸಿಯುತ್ತಿದೆ ಎಂಬ ಆತಂಕದ ನಡುವೆಯೇ ಈ ಬೆಳವಣಿಗೆ ಜಪಾನ್‌ನಲ್ಲಿಯೂ ಕಂಡು ಬಂದಿದೆ. ಕಳೆದ ವರ್ಷ ಜಪಾನ್‌ನಲ್ಲಿ ಜನನಕ್ಕಿಂತ ಮರಣಪ್ರಮಾಣ ದುಪ್ಪಟ್ಟಾಗಿತ್ತು. ಎಂಟು ಲಕ್ಷ ಮಕ್ಕಳು ಜನಿಸಿದ್ದರೆ, 15.58 ಲಕ್ಷ ಮಂದಿ ಅಸುನೀಗಿದ್ದಾರೆ.

ಆ ದೇಶದ ಜನಸಂಖ್ಯೆ 12.8 ಕೋಟಿಯಿಂದ 12.46 ಕೋಟಿಗಿಳಿದಿದೆ. ಜನನ ಪ್ರಮಾಣ ಕುಸಿತ ನಿರೀಕ್ಷೆಗಿಂತ ವಿಪರೀತ ಹೆಚ್ಚಾಗಿದೆ. ಇದರಿಂದ ಎಚ್ಚೆತ್ತಿರುವ ಪ್ರಧಾನಿ ಕಿಶಿದ ಮಕ್ಕಳ ಮೇಲೆ, ಕುಟುಂ ಬದ ಹಣ ವ್ಯಯಿಸುವುದನ್ನು ದುಪ್ಪಟ್ಟು ಮಾಡುವುದಾಗಿ ಘೋಷಿಸಿದ್ದಾರೆ. ಜಪಾನ್‌ನಲ್ಲಿ 65 ವರ್ಷ ಮೇಲ್ಪಟ್ಟವರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.29ರಷ್ಟು ಹೆಚ್ಚಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನ್ನಭಾಗ್ಯ ಅಕ್ಕಿ ಅಕ್ರಮ ತಡೆಗೆ ಐರಿಸ್ ಸ್ಕ್ಯಾನರ್!

Tue Mar 7 , 2023
ರಾಜ್ಯದಲ್ಲಿ ಕೋಟ್ಯಂತರ ಜನರ ಹಸಿವು ನೀಗಿಸುವ ಜನಪ್ರಿಯ ‘ಅನ್ನಭಾಗ್ಯ’ ಯೋಜನೆಗೆ ಹಲವು ಮಾರ್ಗಗಳಲ್ಲಿ ನಿರಂತರವಾಗಿ ಬೀಳುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಎಸ್​ಟಿಕ್ಯೂಸಿ ಸರ್ಟಿಪೈಡ್ ‘ಐರಿಸ್ ಸ್ಕಾಯನರ್ ಹಾಗೂ ಧ್ವನಿ ಮುದ್ರಿತ ತೂಕದ ಯಂತ್ರ’ ಅಳವಡಿಸುವಂತೆ ಆದೇಶಿಸಿದೆ. ರಾಜ್ಯದಲ್ಲಿ 1,17,13,413 ಬಿಪಿಎಲ್, 24,04,127 ಎಪಿಎಲ್ ಹಾಗೂ 10,90,594 ಅಂತ್ಯೋದಯ ಸೇರಿ ಒಟ್ಟು 1,52,08,134 ಕಾರ್ಡ್​ಗಳಿವೆ. ಪ್ರತಿ ತಿಂಗಳು 20,168 ನ್ಯಾಯಬೆಲೆ ಅಂಗಡಿಗಳಿಂದ ಯೋಜನೆಯಡಿ […]

Advertisement

Wordpress Social Share Plugin powered by Ultimatelysocial