ಸಿದ್ದಣ್ಣ ಮಸಳಿ ಮಹಾನ್ ಕವಿ.

ಸಿದ್ದಣ್ಣ ಮಸಳಿ ಮಹಾನ್ ಕವಿ. ಅವರ ರಚನೆಯಾದ ‘ಪಂಜರದ ಪಕ್ಷಿ’ ಕವಿತೆ ಶಾಲೆಯಲ್ಲಿ ಓದಿದ್ದು, ಇಂದೂ ನನ್ನ ಮನದಲ್ಲಿ ಪ್ರಭಾವಿಯಾಗಿ ನಿಂತಿದೆ. ಆ ಕವಿತೆಯನ್ನು ಪ್ರತ್ಯೇಕವಾಗಿ ಇಂದೂ ಪೋಸ್ಟ್ ಮಾಡಿದ್ದೇನೆ. ಇಂದು ಈ ಮಹನೀಯರ ಸಂಸ್ಮರಣಾ ದಿನ.
ಸಿದ್ದಣ್ಣ ಮಸಳಿ 1927ರ ಏಪ್ರಿಲ್ 6ರಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಜನಿಸಿದರು. ತಂದೆ ಗಿರಿಮಲ್ಲಪ್ಪ. ತಾಯಿ ತಂಗೆಮ್ಮ. ಹಿರೇಮಸಳಿಯಲ್ಲಿ ಪ್ರಾಥಮಿಕ ಶಿಕ್ಷಣ, ವಿಜಯಪುರದಲ್ಲಿ ಮಾಧ್ಯಮಿಕ ಶಿಕ್ಷಣ, ಬಿ.ಎ.ಪದವಿ, ಬಿ.ಎಡ್. ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಗಳನ್ನು ಗಳಿಸಿದರು. 1953ರ ಜೂನ್ 25ರಂದು
ಪ್ರಭಾವತಿಯವರೊಂದಿಗೆ ಅವರವಿವಾಹವಾಯಿತು.ಸಿದ್ದಣ್ಣ ಮಸಲಿ 1952-1965 ಅವಧಿಯಲ್ಲಿ ಕೆಎಲ್‌ಇ ಸಂಸ್ಥೆಯ ಆರ್.ಎಲ್.ಎಸ್. ಹೈಸ್ಕೂಲ್‌ನಲ್ಲಿ ಸಹಶಿಕ್ಷಕರಾಗಿ, 1965-71 ಅವಧಿಯಲ್ಲಿ ಚಿಕ್ಕೋಡಿ ತಾಲೂಕಿನ ಗಳಗತಿಯಪಿ. ಆರ್.ಚಿಕ್ಕೋಡಿ ಸೆಕೆಂಡರಿ ಶಾಲೆಯಮುಖ್ಯೋಪಾಧ್ಯಾಯರಾಗಿ, 1971-80 ಅವಧಿಯಲ್ಲಿ ಕೆಎಲ್‌ಇ ಎಸ್.ಕೆ. ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ, 1980-82 ಅವಧಿಯಲ್ಲಿ ಬೆಳಗಾವಿಯ ಕೆಎಲ್‌ಇ ಜಿ.ಎ.ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.ಸಿದ್ದಣ್ಣ ಮಸಲಿ ಅವರು 1982-2000 ಅವಧಿಯಲ್ಲಿ ಬೆಳಗಾವಿಯ ಕನ್ನಡಮ್ಮ ದಿನಪತ್ರಿಕೆಯಲ್ಲಿಸಹಸಂಪಾದಕರಾಗಿಯೂ ಸೇವೆ ಸಲ್ಲಿಸದ್ದರು.ಸಿದ್ದಣ ಮಸಲಿ ಅವರು 1954ರಲ್ಲಿ ಮನೆತುಂಬಿದ ಬೆಳಕು, 1961ರಲ್ಲಿ ದೀಪಾವತಾರ, 2003ರಲ್ಲಿ ಪಂಜರದ ಪಕ್ಷಿ ಕಾವ್ಯ ಸಂಕಲನ ಪ್ರಕಟಿಸಿದರು. ಸಂಚಾರಿ ಅಪ್ರಕಟಿತ ಕೃತಿ. ಇದಲ್ಲದೆ ರೇಡಿಯೋ ನಾಟಕಗಳು, ವಿವಿಧ ಪತ್ರಿಕೆಗಳಲ್ಲಿ ಕಥೆಗಳು, ವಿಮರ್ಶಾ ಲೇಖನಗಳು, ಬಸವರಾಜ ಕಟ್ಟಿಮನಿ ಬದುಕು ಬರೆಹ ಹಾಗೂ ಸಂಪಾದಿತ ಕೃತಿಯಾದ ‘ಕವಿ ಗಂಗಾವತಿಯವರ ಚೈತ್ರ ಪಕ್ಷಿ’ ಕೃತಿಗಳನ್ನು ಪ್ರಕಟಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಕ್ರೋಶಗೊಂಡ ರೈತರಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ.

Wed Jan 4 , 2023
ಆಕ್ರೋಶಗೊಂಡ ರೈತರಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದ ರೈತರು. ರೈತರು ಮುತ್ತಿಗೆ ಹಾಕುತ್ತಿದ್ದಂತೆ ಕಚೇರಿಯಿಂದ ಕಾಲ್ಕಿತ್ತ ಡಿಸಿ. ಜಿಲ್ಲಾ ಸಂಕೀರ್ಣದ ಒಳಗಡೆ ನುಗ್ಗಲು ಯತ್ನಿಸಿದ ರೈತರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ. ರೈತರು ಜಮೀನು ಕೊಡುವುದಿಲ್ಲ ಎಂದು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   […]

Advertisement

Wordpress Social Share Plugin powered by Ultimatelysocial