ಐಫೋನ್ ಎಸ್‌ಇ 3 ಬಿಡುಗಡೆ;

ಅಕ್ಟೋಬರ್ 2021ರಲ್ಲಿ ಆಯಪಲ್ ಎಂ1 ಪ್ರೋ ಮತ್ತು ಎಂ1 ಮ್ಯಾಕ್ಸ್ ಚಾಲಿತ ಮ್ಯಾಕ್‌ಬುಕ್ ಪ್ರೋ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಮಾರ್ಚ್ ಈವೆಂಟ್ ಆಯಪಲ್‌ನ ಮೊದಲ ಪ್ರಮುಖ ಪ್ರದರ್ಶನವಾಗಿದೆ ಎಂದು ಹೇಳಲಾಗಿದೆ.
ಇತ್ತೀಚಿನ ಬೆಳವಣಿಗೆಯು ಗಮನಾರ್ಹ ಆಯಪಲ್ ಕಂಪನಿಯ ನಿಕಟವಾದ ವ್ಯಕ್ತಿ ಮತ್ತು ಪತ್ರಕರ್ತರಾದ ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಅವರಿಂದ ಈ ಸುದ್ದಿ ಬೆಳಕಿಗೆ ಬಂದಿದೆ. 2022ರಲ್ಲಿ ಆಯಪಲ್‌ನ ಹೊಸ ಸಾಧನಗಳನ್ನು ಬಿಡುಗಡೆ ಮಾಡುವ ವಿಷಯದಲ್ಲಿ ರೆಕಾರ್ಡ್ ಬ್ರೇಕಿಂಗ್ ವರ್ಷವಾಗಿರುತ್ತದೆ ಎಂದು ಈ ಹಿಂದೆ ಇವರೇ ಹೇಳಿದ್ದರು.

ಐಫೋನ್ ಎಸ್‌ಇ 2021 ಅಥವಾ ಐಫೋನ್ ಎಸ್‌ಇ 3 ಹೊರತುಪಡಿಸಿ, ಆಯಪಲ್ ಮಾರ್ಚ್‌ನಲ್ಲಿ ನವೀಕರಿಸಿದ ಐಪ್ಯಾಡ್ ಏರ್ ಅನ್ನು ಸಹ ಬಿಡುಗಡೆ ಮಾಡಬಹುದು ಎಂದು ಹೊಸ ವರದಿ ಹೇಳಿಕೊಂಡಿದೆ. ಆಯಪಲ್ ವಿನ್ಯಾಸಗೊಳಿಸಿದ ಚಿಪ್ ಸೆಟ್‌ಗಳೊಂದಿಗೆ ನವೀಕರಿಸಿದ ಮ್ಯಾಕ್‌ಗಳ ಪದಾರ್ಪಣೆಯನ್ನು ನಾವು ನೋಡಬಹುದು.

ಹೆಚ್ಚುವರಿಯಾಗಿ, ಐಫೋನ್‌ಗಳು ಮತ್ತು ಐಪಾಡ್‌ಗಳಿಗಾಗಿ ಐಒಎಸ್ 15.4 ಸಾಫ್ಟ್‌ವೇರ್ ಸಹ ಅದೇ ತಿಂಗಳಲ್ಲಿ ಹೊರಬರಲಿದೆ ಎಂದು ಹೇಳಲಾಗಿದೆ. ಬಳಕೆದಾರರು ಅಂತಿಮವಾಗಿ ಫೇಸ್ ಮಾಸ್ಕ್‌ನೊಂದಿಗೆ ಐಫೋನ್‌ಗಳನ್ನು ಅನ್‌ಲಾಕ್ ಮಾಡಲು ಸಾಧ್ಯವಾಗಿರುವುದರಿಂದ ಈ ನವೀಕರಣವು ತುಂಬಾನೇ ಗಮನಾರ್ಹವಾಗಿರುತ್ತದೆ.

ಮಾರ್ಚ್ 8 ರ ಬಿಡುಗಡೆ ಕಾರ್ಯಕ್ರಮದ ನಂತರ ಆಯಪಲ್ ತನ್ನ ವಾರ್ಷಿಕ ವಿಶ್ವಾದ್ಯಂತ ಡೆವಲಪರ್ ಕಾನ್ಫರೆನ್ಸ್ (ಡಬ್ಲ್ಯೂಡಬ್ಲ್ಯೂಡಿಸಿ) ಅನ್ನು ಜೂನ್‌ನಲ್ಲಿ ನಡೆಸಬಹುದು ಎಂದು ಗುರ್ಮನ್ ಹೇಳಿದ್ದಾರೆ.

ಕಂಪನಿಯು ಸಾಮಾನ್ಯವಾಗಿ ಈವೆಂಟ್‌ನಲ್ಲಿ ಐಫೋನ್‌ಗಳು, ಆಯಪಲ್ ವಾಚ್, ಆಯಪಲ್ ಟಿವಿ, ಆಯಪಲ್ ಮ್ಯಾಕ್‌ಗಳು ಮತ್ತು ಐಪ್ಯಾಡ್‌ ಗಳಿಗಾಗಿ ತನ್ನ ಹೊಸ ಸಾಫ್ಟ್‌ವೇರ್ ಅನ್ನು ಅನಾವರಣಗೊಳಿಸುತ್ತದೆ. ವರ್ಚುವಲ್ ರಿಯಾಲಿಟಿ ವಿಷಯಕ್ಕಾಗಿ ಆಯಪಲ್‌ನ ಬಹು ನಿರೀಕ್ಷಿತ ರಿಯಾಲಿಟಿ ಹೆಡ್‌ಸೆಟ್ 2023ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಮತ್ತು ಈ ವರ್ಷ ಅಲ್ಲ ಎಂದು ವರದಿ ಹೇಳಿಕೊಂಡಿದೆ.

ಈ ಹೊಸ ಸಾಧನಗಳ ಬಿಡುಗಡೆಯ ವಿಷಯದಲ್ಲಿ ಅದರಲ್ಲೂ ವೈಶಿಷ್ಟ್ಯತೆಗಳ ವಿಷಯದಲ್ಲಿ ಐಫೋನ್ ಎಸ್‌ಇ 2022 ಅಥವಾ ಐಫೋನ್ ಎಸ್‌ಇ 3 ಎರಡು 5ಜಿ ಬೆಂಬಲವನ್ನು ಸೇರಿಸುತ್ತದೆ ಎಂದು ವದಂತಿಗಳಿವೆ.

ನಾವು ಇನ್ನೂ ಅದೇ 4.7-ಇಂಚಿನ ಪರದೆಯನ್ನು ಒಳಗೊಂಡ ಕಾಂಪ್ಯಾಕ್ಟ್ ವಿನ್ಯಾಸವನ್ನು ನೋಡಬಹುದು, ಆದರೆ ಐಫೋನ್ 13 ಸೀರೀಸ್‌ಗೆ ಶಕ್ತಿ ನೀಡುವ ಹುಡ್ ಅಡಿಯಲ್ಲಿ ಎ15 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ ಎಂದು ವರದಿಗಳು ಹೇಳಿವೆ. ಮತ್ತೊಂದೆಡೆ, ಇತ್ತೀಚಿನ ಜೆನ್ ಐಪ್ಯಾಡ್ ಏರ್ ಮಾದರಿಗಳು ಸಹ 5ಜಿ ಬೆಂಬಲವನ್ನು ಸೇರಿಸುತ್ತವೆ ಎಂದು ಹೇಳಲಾಗುತ್ತದೆ. ಈ ಐಫೋನ್‌ಗಳ ವಿನ್ಯಾಸವು ಒಂದೇ ಆಗಿರಬಹುದು, ಆದರೆ ನಾವು ಹೊಸ ಆಯಪಲ್ ವಿನ್ಯಾಸಗೊಳಿಸಿದ ಚಿಪ್‌ಸೆಟ್‌ಗಳನ್ನು ನೋಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Audi ಕಂಪನಿ 2033ರಿಂದ ಪೆಟ್ರೋಲ್-ಡಿಸೇಲ್ ಕಾರು ಖರೀದಿಗೆ ಸಿಗಲ್ಲ;

Mon Feb 7 , 2022
ಔಡಿ ಎಲೆಕ್ಟ್ರಿಕ್ ವಾಹನಗಳ (Audi Electric car) ಸ್ಥಳೀಯ ಉತ್ಪಾದನೆಯು ಖಂಡಿತವಾಗಿಯೂ ಸಮಯ ತೆಗೆದುಕೊಳ್ಳುತ್ತದೆ. ಕಂಪನಿಯು ಇಲ್ಲಿಯವರೆಗೆ ಭಾರತದಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇತ್ತೀಚೆಗೆ, ಆಡಿ ಇಂಡಿಯಾ ತನ್ನ ಹೊಸ Q7 ಫೇಸ್‌ಲಿಫ್ಟ್ SUV ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ, ಇದನ್ನು BS6 ಇಂಧನ ಮಾನದಂಡಗಳ ಅನುಷ್ಠಾನದ ನಂತರ ಏಪ್ರಿಲ್ 2020 ರಲ್ಲಿ ಮಾರುಕಟ್ಟೆಯಿಂದ ತೆಗೆದುಹಾಕಲಾಯಿತು. ಎಸ್ ಯುವಿಯ ಹೊಸ ಮಾದರಿಯ ಆರಂಭಿಕ ಎಕ್ಸ್ ಶೋ ರೂಂ ಬೆಲೆ 80 […]

Advertisement

Wordpress Social Share Plugin powered by Ultimatelysocial