ಕಟ್ಟಡ ನಿರ್ಮಾಣದಲ್ಲಿ ಅಕ್ರಮ; 184 ಮಂದಿಯ ಬಂಧನ.

ಅಂಕಾರ, ಫೆ.26: ಟರ್ಕಿಯಲ್ಲಿ ಫೆಬ್ರವರಿ 6ರಂದು ಸಂಭವಿಸಿದ ಭೀಕರ ಭೂಕಂಪದಿಂದ 1,60,000ಕ್ಕೂ ಅಧಿಕ ಕಟ್ಟಡಗಳು ಕುಸಿದು ಬಿದ್ದಿದ್ದು ಈ ಕಟ್ಟಡಗಳ ನಿರ್ಮಾಣದ ಸಂದರ್ಭ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ವರದಿಯ ನಡುವೆಯೇ, ಕಟ್ಟಡಗಳ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದ್ದ 184 ಮಂದಿಯನ್ನು ಬಂಧಿಸಿರುವುದಾಗಿ ಟರ್ಕಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.ಭೂಕಂಪದಿಂದ ಟರ್ಕಿಯಲ್ಲಿ 44,128 ಮೃತಪಟ್ಟಿದ್ದು 5,20,000 ಅಪಾರ್ಟ್ಮೆಂಟ್ಗಳನ್ನು ಹೊಂದಿರುವ 1,60,000 ಕಟ್ಟಡಗಳು ನೆಲಸಮಗೊಂಡಿವೆ. ಈ ಕಟ್ಟಡಗಳನ್ನು ಭೂಕಂಪ ನಿಗ್ರಹ ತಂತ್ರಜ್ಞಾನದಿಂದ ನಿರ್ಮಿಸುವಂತೆ ಸೂಚಿಸಿದ್ದರೂ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು ಎಂದು ಇಟಲಿಯ ನ್ಯಾಯ ಸಚಿವ ಬೆಕಿರ್ ಬೊಝ್ಡಾಗ್ ಹೇಳಿದ್ದಾರೆ.600 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದು 79 ನಿರ್ಮಾಣ ಗುತ್ತಿಗೆದಾರರು, ಕಟ್ಟಡಗಳ ಕಾನೂನು ಜವಾಬ್ದಾರಿ ಹೊಂದಿರುವ 74 ಮಂದಿ, 13 ಕಟ್ಟಡಗಳ ಮಾಲಕರು, ಕಟ್ಟಡಗಳಲ್ಲಿ ಬದಲಾವಣೆ ಮಾಡಿದ 18 ಮಂದಿಯ ಸಹಿತ ಒಟ್ಟು 184 ಜನರನ್ನು ಬಂಧಿಸಲಾಗಿದೆ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಭೂಕಂಪದಿಂದ ತೀವ್ರ ಹಾನಿಗೊಂಡಿರುವ ಗಝಿಯಾಂಟೆಪ್ ಪ್ರಾಂತದ ನುರ್ಡಾಗಿ ಜಿಲ್ಲೆಯ ಮೇಯರ್ ಕೂಡಾ ಬಂಧಿತರಲ್ಲಿ ಒಳಗೊಂಡಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಿಥುನ ರಾಶಿ ಭವಿಷ್ಯ .

Mon Feb 27 , 2023
ಕುಟುಂಬದ ವೈದ್ಯಕೀಯ ವೆಚ್ಚದಲ್ಲಿ ಹೆಚ್ಚಳವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ನಿಮ್ಮ ಜೀವನದ ಕಳಪೆ ಆರೋಗ್ಯದಿಂದಾಗಿ, ನಿಮ್ಮ ಹಣವನ್ನು ಇಂದು ಖರ್ಚು ಮಾಡಬಹುದು, ಆದರೆ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಏಕೆಂದರೆ ಹಣವನ್ನು ಉಳಿಸಲಾಗಿದೆ ಇದರಿಂದ ಅದು ಕೆಟ್ಟ ಸಮಯದಲ್ಲಿ ನಿಮಗೆ ಉಪಯುಕ್ತವಾಗಿರುತ್ತದೆ. ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಮ್ಮ ಸಹಾಯ ಕೇಳುವ ಒಬ್ಬ ವಯಸ್ಸಾದ ಹಿರಿಯರಿಂದ ಆಶೀರ್ವಾದ. ಇಂದು ನೀವು ನಿಮ್ಮ ಸಂಗಾತಿಯ ಹೃದಯ ಬಡಿತಗಳ ಜೊತೆಗಿರುತ್ತೀರಿ. ಹೌದು, ಇದು ನೀವು ಪ್ರೀತಿಯಲ್ಲಿದ್ದೀರಿ […]

Advertisement

Wordpress Social Share Plugin powered by Ultimatelysocial