ಹಣದುಬ್ಬರದ ವಿರುದ್ಧ ಮೋದಿ ಸರ್ಕಾರದ ಹೋರಾಟಕ್ಕೆ ಟೊಮೆಟೊವೇ ದೊಡ್ಡ ಅಪಾಯ!

ಭಾರತದಲ್ಲಿ ಟೊಮೆಟೊ ದರವು ತೀವ್ರವಾಗಿ ಏರಿಕೆ ಕಾಣುತ್ತಿದೆ. ಹಣದುಬ್ಬರದ ವಿರುದ್ಧ ಸರ್ಕಾರವು ಈಗಾಗಲೇ ಹಲವಾರು ಕ್ರಮಗಳನ್ನು ಪ್ರಯೋಗ ಮಾಡಿದೆ. ಈಗ ಈ ಟೊಮೆಟೊ ಸರ್ಕಾರಕ್ಕೆ ಭಾರೀ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ. ತರಕಾರಿ ಬೆಲೆ ಏರಿಕೆಯೇ ಹಣದುಬ್ಬರವನ್ನು ಮಿತಿ ಮೀರಿಸಿ ಸರ್ಕಾರವನ್ನೇ ಉರುಳಿಸಿ ಇತಿಹಾಸ ಸೃಷ್ಟಿ ಮಾಡುತ್ತದೆಯೇ ಎಂಬ ಚರ್ಚೆಗಳು ಕೂಡಾ ನಡೆಯುತ್ತಿದೆ.

ಭಾರತೀಯರು ಅಧಿಕವಾಗಿ ಬಳಸುವ ತರಕಾರಿಗಳಲ್ಲಿ ಟೊಮೆಟೊ, ಆಲೂಗಡ್ಡೆ ಮತ್ತು ಈರುಳ್ಳಿ ಸೇರಿದೆ. ಕೋಳಿ, ಮಾಂಸ, ಯಾವುದೇ ಅಡುಗೆಗೆ ಟೊಮೆಟೊ, ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಬಳಸುತ್ತಾರೆ. ಆಹಾರ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಟೊಮೆಟೊ ಸರಾಸರಿ ಚಿಲ್ಲರೆ ಬೆಲೆಯು ಒಂದು ತಿಂಗಳ ಹಿಂದಿನಿಂದ ಶೇಕಡಾ 70 ರಷ್ಟು ಮತ್ತು ಹಿಂದಿನ ವರ್ಷಕ್ಕಿಂತ ಶೇಕಡಾ 168 ರಷ್ಟು ಏರಿಕೆಯಾಗಿದ್ದು, ಮಂಗಳವಾರದ ವೇಳೆಗೆ ಒಂದು ಕಿಲೋಗ್ರಾಂಗೆ 53.75 ರೂಪಾಯಿ ಆಗಿದೆ.

ಅಡುಗೆ ಎಣ್ಣೆಯಿಂದ ಹಿಡಿದು ಗೋಧಿ ಹಿಟ್ಟಿನವರೆಗೆ ಎಲ್ಲದರ ವೆಚ್ಚಗಳು ಭಾರತದಲ್ಲಿ ಏರಿದೆ. ಏಪ್ರಿಲ್‌ನಲ್ಲಿ ಹಣದುಬ್ಬರವು 8 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಗೋಧಿ ಮತ್ತು ಸಕ್ಕರೆ ರಫ್ತುಗಳನ್ನು ನಿರ್ಬಂಧಿಸುವ ಮೂಲಕ ಸರ್ಕಾರವು ಜಾಗತಿಕ ಹಣದುಬ್ಬರವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ಈ ನಡುವೆ ಕೇಂದ್ರ ಬ್ಯಾಂಕ್ ಹಣದುಬ್ಬರ ನಿಯಂತ್ರಣದ ದೃಷ್ಟಿಯಿಂದ ಮತ್ತೆ ರೆಪೋ ದರ ಏರಿಕೆ ಮಾಡುವ ಸಾಧ್ಯತೆ ಇದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ವರ್ಷಾಂತ್ಯದಲ್ಲಿ ಮತದಾರರನ್ನು ಎದುರಿಸಲು ಸಜ್ಜಾಗಿದ್ದಾರೆ. ಈ ನಡುವೆ ಈ ಆಹಾರದ ಬೆಲೆ ಏರಿಕೆಯು ರಾಜಕೀಯವಾವಿ ಪ್ರಭಾವ ಬೀರುವ ಸಾಧ್ಯತೆ ಇದೆ. ಮೋದಿಯವರ 2018 ರ ಪ್ರಚಾರದ ಸಮಯದಲ್ಲಿ, ರೈತರು ತಮ್ಮ ‘ಪ್ರಮುಖ’ (TOP) ಆದ್ಯತೆ ಎಂದು ‘TOP’ ಎಂದು ಉಲ್ಲೇಖ ಮಾಡಿದ್ದರು. ಹಾಗೆಯೇ ‘TOP’ ಎಂದರೆ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ (Tomato, Onion and Potato) ಎಂದು ಕೂಡಾ ಉಲ್ಲೇಖ ಮಾಡಿದ್ದರು.

ಪ್ರಸ್ತುತ ಟೊಮೆಟೊ ಕೊರತೆಯಿದೆ ಎಂದು ಮಾರಾಟಗಾರರು ಮಾಹಿತಿ ನೀಡಿದ್ದಾರೆ. ಹಳೆ ಕೊಯ್ಲಿನಿಂದ ಬಂದಿರುವ ಪೂರೈಕೆ ಕಡಿಮೆ ಆಗುತ್ತಿದೆ. ಮೂರು ತಿಂಗಳಲ್ಲಿ ಹೊಸ ಫಸಲು ಬರಲಿದೆ. ಆದರೆ ಎರಡು ತಿಂಗಳ ಹಿಂದೆ 50 ರೂ.ಗೆ ಮಾರಾಟವಾಗುತ್ತಿದ್ದ ಟೊಮ್ಯಾಟೊ ಈಗ ಕೆಜಿಗೆ ಸುಮಾರು 80 ರೂ.ಗೆ ಮಾರಾಟವಾಗುತ್ತಿದೆ ಎಂದು ಮಾರಾಟಗಾರು ಮಾಹಿತಿ ನೀಡಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಏರಿದ ಮಾವಿನ ಬೆಲೆ

ಇನ್ನು ಈ ನಡುವೆ ಕೆಲವು ಪ್ರದೇಶಗಳಲ್ಲಿ ಮಾವಿನ ಬೆಲೆಯೂ ಕೂಡಾ ಏರಿಕೆ ಕಂಡಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಜನಪ್ರಿಯ ಹಿಮ್ಸಾಗರ್ ತಳಿಯ ಬೆಲೆಗಳು ಕಳೆದ ವರ್ಷ 50 ರೂಪಾಯಿ ಆಗಿತ್ತು. ಆದರೆ ಈ ವರ್ಷ ದುಪ್ಪಟ್ಟು ಆಗಿದೆ. ಕಳೆದ ವಾರದಲ್ಲಿ ಶಾಖದ ಅಲೆಯ ಕಾರಣದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಮಾವಿನ ಉತ್ಪಾದನೆಯು ಸುಮಾರು 40 ಪ್ರತಿಶತದಷ್ಟು ಕುಸಿದಿದೆ ಎಂದು ಪಶ್ಚಿಮ ಬಂಗಾಳದ ಮಾರಾಟಗಾರರ ಸಂಘದ ಅಧ್ಯಕ್ಷ ಕಮಲ್ ಮಾಹಿತಿ ನೀಡಿದ್ದಾರೆ.

ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಭಾರತದಲ್ಲಿ ಶಾಖ ಹೆಚ್ಚಳವಾಗಿದ್ದು ಇದರಿಂದಾಗಿ ಕೆಲವು ಬೆಳೆಗಳಿಗೆ ಹಾನಿಯಾಗಿದೆ. ಈ ನಡುವೆ ಉಕ್ರೇನ್ ಯುದ್ಧದಿಂದಾಗಿಯೂ ಆಮದು ರಫ್ತು ವ್ಯತ್ಯಯ ಉಂಟಾಗಿದೆ. ಸದ್ಯ ದೇಶದಲ್ಲಿ ಹಣದುಬ್ಬರವು ತೀವ್ರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಹೀಗೆಯೇ ಮುಂದುವರಿದರೆ ಶ್ರೀಲಂಕಾದ ಸ್ಥಿತಿ ಭಾರತಕ್ಕೆ ಬರಲಿದೆ ಎಂದು ತಜ್ಞರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಡಿಯಿಂದ ರಾಹುಲ್ ಗಾಂಧಿಗೆ ಮತ್ತೊಂದು ಸಮನ್ಸ್! ಖುದ್ದಾಗಿ ಹಾಜರಾಗುವಂತೆ ಸೂಚನೆ

Fri Jun 3 , 2022
ನವದೆಹಲಿ, ಜೂ. 3: ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಈಡು ಮಾಡುತ್ತಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಾಹುಲ್‌ ಗಾಂಧಿಗೆ  ಮತ್ತೊಂದು ಸಮನ್ಸ್   ಜಾರಿ ಮಾಡಿದೆ. ಮೊನ್ನೆ ಅಂದರೆ ಜೂನ್ 1ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜೂನ್ 8ರಂದು ಅವರ ಪುತ್ರ ಸಂಸದ ರಾಹುಲ್ ಗಾಂಧಿ   ಅವರಿಗೆ ಜೂನ್ 8ಕ್ಕೂ ಮೊದಲೇ ಫೆಡರಲ್ ಏಜೆನ್ಸಿಯ ಮುಂದೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿತ್ತು.‌ ಆದರೀಗ ರಾಹುಲ್ ಗಾಂಧಿ […]

Advertisement

Wordpress Social Share Plugin powered by Ultimatelysocial