Health Tips: ಇಮ್ಯೂನಿಟಿ ಹೆಚ್ಚಿಸೋಕೆ ಮಕ್ಕಳನ್ನು ಮಣ್ಣಿಗೆ ಬಿಡಿ..

ಬೀದಿ ಬದಿಯಲ್ಲಿ, ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮಣ್ಣು-ಮರಳಿನಲ್ಲಿ  ಆಡುತ್ತಿರುವ ಮಕ್ಕಳ ನ್ನು ಕಂಡು ಬಹುತೇಕ ಅಮ್ಮಂದಿರಿಗೆ ಅಚ್ಚರಿಯಾಗುತ್ತದೆ. ಇಂತಹ ಮಣ್ಣಿನಲ್ಲಿ ಆಟವಾಡುತ್ತಿದ್ದರೂ ಈ ಮಕ್ಕಳು ಚೆನ್ನಾಗಿರುತ್ತಾರಲ್ಲ ಎನಿಸುತ್ತದೆ. ಏಕೆಂದರೆ, ಎಷ್ಟೇ ಸ್ವಚ್ಛತೆ  ಪರಿಪಾಲನೆ ಮಾಡಿದರೂ ತಮ್ಮ ಮನೆಗಳಲ್ಲಿ ನೆಗಡಿ, ಜ್ವರ  ಎಂದು ತಿಂಗಳಿಗೆ ಒಮ್ಮೆಯಾದರೂ ಮಲಗುವ ಮಕ್ಕಳನ್ನು ಅವರು ಕಂಡಿರುತ್ತಾರೆ. ನಿಮಗೆ ಗೊತ್ತೇ? ಬಾಲ್ಯಕಾಲದಲ್ಲಿ ಕೆಲವು ಸೂಕ್ಷ್ಮಾಣುಜೀವಿ  ಗಳ ಒಡನಾಟಕ್ಕೆ ಬಂದಾಗಲೇ ಮುಂದಿನ ದಿನಗಳಲ್ಲಿ ರೋಗ ನಿರೋಧಕತೆ  ಸದೃಢಗೊಳ್ಳುತ್ತದೆ.

ಮನೆಯಲ್ಲಿ ನಾವು ದಿನವೂ ಫ್ಲೋರ್ ಕ್ಲೀನರ್ ಗಳನ್ನೇ ಬಳಕೆ ಮಾಡುತ್ತೇವೆ. ಅಡುಗೆ  ಮನೆಗೊಂದು, ಟಾಯ್ಲೆಟ್ ಗೊಂದು ವಿಭಿನ್ನ ಕ್ಲೀನರ್ ಗಳು. ಎಷ್ಟೇ ಸ್ವಚ್ಛತೆಯ ಕ್ರಮಗಳನ್ನು ಅನುಸರಿಸುತ್ತಿದ್ದರೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತಿಲ್ಲ. ಇದಕ್ಕಾಗಿ ಹೆಚ್ಚುವರಿ ಔಷಧಿಗಳನ್ನು ಸೇವಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಅಲ್ಲವೇ?
ನಗರ ಪ್ರದೇಶಗಳಲ್ಲಂತೂ ಮಣ್ಣಿನಲ್ಲಿ ಆಟವಾಡಲು ಬಿಡುವ ಪದ್ಧತಿಯೇ ಬಹುತೇಕ ಮಾಯವಾಗಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂಡಿತವಾಗಲು ಇದೇ ಪ್ರಮುಖ ಕಾರಣ! ಲಂಡನ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್ ವಿಭಾಗ ನಡೆಸಿದ್ದ ಅಧ್ಯಯನವೊಂದು ಈ ಅಂಶವನ್ನು ಬಹಿರಂಗಪಡಿಸಿದೆ.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಸದೃಢಗೊಳ್ಳಬೇಕೆಂದರೆ, ಬಾಲ್ಯಕಾಲದಲ್ಲಿ ಅವರು ಕೆಲವು ವಿಭಿನ್ನ ಸೂಕ್ಷ್ಮಾಣು ಜೀವಿಗಳೊಂದಿಗೆ ಒಡನಾಡಬೇಕು. ಮಣ್ಣು, ಮರಳು, ಗಿಡ-ಮರಗಳ ನಡುವೆ ಅವರು ಬೆಳೆಯಬೇಕು. ಮಣ್ಣಿನಲ್ಲಿ ಆಟವಾಡುವುದಂತೂ ಅತ್ಯುತ್ತಮ. ಮಣ್ಣಿನಲ್ಲಿ ಆಟವಾಡಿದ ಮಕ್ಕಳಿಗೆ ಮುಂದೆ ಅನೇಕ ರೀತಿಯ ಅಲರ್ಜಿ ಸಮಸ್ಯೆಗಳು ಕಾಡುವುದು ಅತಿ ಕಡಿಮೆ ಎಂದು ಈ ಅಧ್ಯಯನ ಹೇಳಿದೆ. ಏಕೆಂದರೆ, ಮಣ್ಣಿನಲ್ಲಿ ಅಪಾರ ಪ್ರಮಾಣದ ಬ್ಯಾಕ್ಟೀರಿಯಾ ಗಳಿರುತ್ತವೆ. ಇವುಗಳಲ್ಲಿ ಬಹುತೇಕ ಬ್ಯಾಕ್ಟೀರಿಯಾಗಳು ಮನುಷ್ಯನಿಗೆ ಏನೂ ಹಾನಿ ತರುವುದಿಲ್ಲ. ಬದಲಿಗೆ ಅವುಗಳ ಒಡನಾಟ ದೇಹಕ್ಕೆ ಬಲ ನೀಡುತ್ತದೆ.
ಬೆಳೆಯುವ ಮಕ್ಕಳ ದೇಹಕ್ಕೆ ಸೂಕ್ಷ್ಮಾಣುಜೀವಿಗಳ ಪರಿಚಯ ಇರಬೇಕು. ಮಣ್ಣಿನೊಂದಿಗೆ ಒಡನಾಡಿದಾಗ ರೋಗ ನಿರೋಧಕ ಶಕ್ತಿಗೆ ಕೆಲವು ರೀತಿಯ ಬ್ಯಾಕ್ಟೀರಿಯಾಗಳ ಪರಿಚಯ ಆಗುತ್ತದೆ. ಇಲ್ಲವೆಂದಾದರೆ, ಭವಿಷ್ಯದಲ್ಲಿ ವಿವಿಧ ರೀತಿಯ ಅಲರ್ಜಿ ಸಮಸ್ಯೆ ಕಾಡುತ್ತದೆ.
ಮಾನವನ ಹೊಟ್ಟೆ , ಚರ್ಮ ಹಾಗೂ ಉಸಿರಾಟದ ವ್ಯವಸ್ಥೆ ಯಲ್ಲಿ ಸೂಕ್ಷ್ಮಾಣುಜೀವಿಗಳು ಅಪಾರ ಪ್ರಮಾಣದಲ್ಲಿರುತ್ತವೆ. ಆರೋಗ್ಯ ಕಾಪಾಡುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತದೆ. ವಯಸ್ಸಾದರೂ ಸದೃಢವಾಗಿರುವಂತೆ ನೋಡಿಕೊಳ್ಳುತ್ತವೆ. ಇವು ರೋಗಕಾರಕ ಬ್ಯಾಕ್ಟೀರಿಯಾಗಳ ಒಡನಾಟಕ್ಕೆ ಬರಬೇಕು. ಆಗಲೇ ರೋಗ ನಿರೋಧಕ ಶಕ್ತಿ ಗಟ್ಟಿಯಾಗುವುದು. ಆದರೆ, ನಾವು ವಿವಿಧ ಸೋಂಕಿನ ಭಯದಿಂದ ರೋಗಕಾರಕಗಳನ್ನು ದೂರವಿಡಲು ಎಂದಿನಿಂದ ಯತ್ನಿಸುತ್ತಿದ್ದೇವೆಯೋ ಅಂದಿನಿಂದಲೇ ದೇಹಕ್ಕೆ ಅಗತ್ಯ ಲಾಭ ನೀಡುವ ಸೂಕ್ಷ್ಮಜೀವಿಗಳಿಂದಲೂ ದೂರವಾಗಿದ್ದೇವೆ.

ಹೀಗಾಗಿ, ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ. ಜತೆಗೆ, ನೈಸರ್ಗಿಕ ವಾತಾವರಣದಲ್ಲಿ ಮಣ್ಣು, ನೀರು, ಗಾಳಿಯಲ್ಲಿ ಓಡಾಡುವುದು ಅಗತ್ಯ. ಈ ಅಧ್ಯಯನದಲ್ಲಿ ಕೆಲವು ಕುತೂಹಲಕರ ಅಂಶಗಳು ಬೆಳಕಿಗೆ ಬಂದಿವೆ. ಅವು,

  • ನಗರಗಳ ಆಧುನಿಕ ಮನೆಗಳಲ್ಲೂ ಕೆಲವು ಸೂಕ್ಷ್ಮಾಣು ಜೀವಿಗಳು ಕಂಡುಬರುತ್ತವೆ. ಆದರೆ, ಇವು ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥವುಗಳಲ್ಲ.
  • ವಿವಿಧ ಸೋಂಕುಗಳನ್ನು ತಡೆಗಟ್ಟಲು ಮಕ್ಕಳಿಗೆ ನೀಡುವ ಲಸಿಕೆಗಳು ಸಮಗ್ರವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಿಲ್ಲ. ಆ ನಿರ್ದಿಷ್ಟ ರೋಗದ ವಿರುದ್ಧ ಮಾತ್ರವೇ ಅವು ಸುರಕ್ಷತೆಯನ್ನು ನೀಡುತ್ತವೆ.
  • ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸೂಕ್ಷ್ಮಾಣುಜೀವಿಗಳಿಂದ ಯಾವುದೇ ಅಲರ್ಜಿ  ಉಂಟಾಗುವುದು ಕಡಿಮೆ. ಬದಲಿಗೆ, ಅವುಗಳ ನಿಯಂತ್ರಣಕ್ಕೆ ಬಳಸುವ ವಿವಿಧ ಉತ್ಪನ್ನಗಳಿಂದಲೇ ಅಲರ್ಜಿ ಹೆಚ್ಚುತ್ತದೆ. ಶ್ವಾಸಕೋಶದ ಅಲರ್ಜಿಗೆ ಇವೇ ಕಾರಣ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯ: ದಳಪತಿಗಳ ಘರ್ಜನೆ! ಥಂಡಾ ಹೊಡೆದ ಸಂಸದೆ ಸುಮಲತಾ;

Tue Dec 28 , 2021
ಮಂಡ್ಯ : ದಿಶಾ ಸಭೆಯಲ್ಲಿ  ಘರ್ಜಿಸಿದ ದಳಪತಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ, ಶಾಸಕರ  ಮಾತಿನ ಅಬ್ಬರಕ್ಕೆ ಬೆದರಿದ ಸಂಸದೆ, ಸಭೆಯ ಆರಂಭದಲ್ಲೇ ಅಪಸ್ವರ, ಶಾಸಕರು, ದಿಶಾ ಸದಸ್ಯರ ನಡುವೆ ಮಾತಿನ ಚಕಮಕಿ. ಇವು ನಗರದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ವಲಯ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂಡುಬಂದ ಪ್ರಮುಖ ದೃಶ್ಯಾವಳಿಗಳು. ಮೈಸೂರು ಹೆದ್ದಾರಿ ಕಾಮಗಾರಿ ಮಾಡುವುದಕ್ಕೆ ಜಿಲ್ಲೆಯಗಳನ್ನು ಹಾಳು […]

Advertisement

Wordpress Social Share Plugin powered by Ultimatelysocial